One N Only Exclusive Cine Portal

ತೆರೆ ಮೇಲಿನ ಪರ್ಮನೆಂಟು ಅಮ್ಮ ಪದ್ಮಜಾ!

ಚಿತ್ರವೊಂದರಲ್ಲಿ ಅಮ್ಮನ ಪಾತ್ರಕ್ಕೆ ಜೀವ ತುಂಬಿ ಪ್ರೇಕ್ಷಕರನ್ನೂ ಭಾವುಕವಾಗಿ ಆವರಿಸಿಕೊಳ್ಳುವುದೆಂದರೆ ಸಣ್ಣ ವಿಚಾರವೇನಲ್ಲ. ಈ ನೆಲೆಯಲ್ಲಿ ನೋಡ ಹೋದರೆ ನಟಿ ಪದ್ಮಜಾ ರಾವ್ ಕನ್ನಡ ಚಿತ್ರರಂಗದಲ್ಲಿ ಆ ಪಾತ್ರವನ್ನು ಜೀವ ತುಂಬಿ ನಟಿಸೋದರಲ್ಲಿ ಸೈ ಅನ್ನಿಸಿಕೊಂಡಿದ್ದಾರೆ.
ಬೇರೆ ಬೇರೆ ಪಾತ್ರಗಳ ಮೂಲಕ ಚಿತ್ರರಂಗಕ್ಕೆ ಅಡಿಯಿರಿಸಿದ್ದ ಪದ್ಮಜಾ ರಾವ್ ಅವರನ್ನು ಕನ್ನಡ ಪ್ರೇಕ್ಷಕರು ಪ್ರಮುಖವಾಗಿ ಗುರುತಿಸುವುದೇ ಅಮ್ಮನ ಪಾತ್ರದ ಮೂಲಕ. ಅದುವರೆಗೆ ನಾನಾ ಚಿತ್ರಗಳಲ್ಲಿ ನಟಿಸಿದ್ದರೂ ಅವರಿಗೆ ಭಾರೀ ಮನ್ನಣೆ ತಂದು ಕೊಟ್ಟಿದ್ದು ಮುಂಗಾರು ಮಳೆ ಚಿತ್ರದ ತಾಯಿ ಪಾತ್ರ. ಅಲ್ಲಿಂದೀಚೆಗೆ ಹತ್ತಾರು ಚಿತ್ರಗಳಲ್ಲಿ ಮನಸಲ್ಲುಳಿಯುವಂತೆ ಅಮ್ಮನ ಪಾತ್ರಕ್ಕೆ ಜೀವ ತುಂಬಿದ್ದು ಮತ್ತು ಪ್ರತೀ ಚಿತ್ರಗಳಲ್ಲಿಯೂ ತಮ್ಮ ಅಭಿನಯದ ಮೂಲಕವೇ ಗಮನ ಸೆಳೆಯುತ್ತಾ ಬಂದಿರುವುದು ಅವರ ನಿಜವಾದ ಹೆಚ್ಚುಗಾರಿಕೆ.
ಈ ಹಿಂದೆ ಲೀಲಾವತಿ, ಸಾವ್ಕಾರ್ ಜಾನಕಿ, ಸರೋಜಾ ದೇವಿ ಮುಂತಾದ ಹಿರಿಯ ನಟಿಯರು ಅಮ್ಮನ ಪಾತ್ರಕ್ಕೆ ಹೆಸರಾಗಿದ್ದರು. ಆ ನಂತರದಲ್ಲಿ ಲಕ್ಷ್ಮಿ, ಅರುಂದತಿ ನಾಗ್, ಸುಮಲತಾ ಕೂಡಾ ಈ ಸಾಲಿನಲ್ಲಿ ಗುರುತಿಸಿಕೊಂಡಿದ್ದರು. ದಶಕದಿಂದೀಚೆಗೆ ಆ ಸ್ಥಾನ ತುಂಬಿಕೊಂಡಿರುವವರು ಪದ್ಮಜಾ ರಾವ್.
ಮುಂಗಾರು ಮಳೆ ಚಿತ್ರದ ನಂತರ ಬಹುಶಃ ಪದ್ಮಜಾ ಅವರು ಅಮ್ಮನಾಗಿ ನಟಿಸಿದ ಚಿತ್ರ ತೆರೆ ಕಾಣದ ವರ್ಷಗಳು ಸಿಗೋದು ಡೌಟು. ಈ ಕ್ಷಣಕ್ಕೂ ಹತ್ತಾರು ಚಿತ್ರಗಳಲ್ಲಿ ಬ್ಯುಸಿಯಾಗಿರೋ ಪದ್ಮಜಾ, ಯಾವ ಚಿತ್ರದ ತಾಯಿಯ ಪಾತ್ರಕ್ಕಾದರೂ ಮೊದಲು ನೆನಪಾಗೋವಷ್ಟರ ಮಟ್ಟಿಗೆ ಆವರಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *


CAPTCHA Image
Reload Image