One N Only Exclusive Cine Portal

ದಯಾಳ್ ವಿರುದ್ಧ ಕೊಬ್ರಿ ಮಂಜಣ್ಣ ಕೆಂಡ!

ನಿರ್ಮಾಪಕ ಕೆ. ಮಂಜು ಸೀರಿಯಸ್ಸಾಗಿಯೇ ಕೆಂಡಾಮಂಡಲರಾಗಿದ್ದಾರೆ. ಸೆನ್ಸಾರ್ ಮಂಡಳಿ ಅಧಿಕಾರಿಗಳಿಂದ ಹಿಡಿದು ತಾವು ನಿರ್ಮಾಣ ಮಾಡಿರೋ ಸತ್ಯಹರಿಶ್ಚಂದ್ರ ಚಿತ್ರದ ನಿರ್ದೇಶಕ ದಯಾಳ್ ಪದ್ಮನಾಭನ್ ವರೆಗೂ ಎಲ್ಲರ ವಿರುದ್ಧವೂ ಒಂದೇ ಏಟಿಗೆ ಹರಿಹಾಯ್ದಿದ್ದಾರೆ!
ಇದಕ್ಕೆ ಕರಣವಾಗಿರೋದು ಇದೀಗ ಬಿಗ್‌ಬಾಸ್ ಮನೆಯೊಳಗೆ ತಮ್ಮ ಪಾಡಿಗೆ ತಾವು ಆರಾಮಾಗಿ ಆಟಾಡಿಕೊಂಡಿರೋ ದಯಾಳ್ ಪದ್ಮನಾಭನ್ ನಿರ್ದೇಶನದ ಸತ್ಯಹರಿಶ್ಚಂದ್ರ ಚಿತ್ರದ ದಯನೀಯ ಸ್ಥಿತಿ!
ಒಂದು ಸಿನಿಮಾ ಅಂದರೆ ಅದು ತಯಾರಾಗಿ ರಿಲೀಸಾಗೋವರೆಗೂ ನಿರ್ದೇಶಕನಾದವನ ಜವಾಬ್ದಾರಿ ಇರುತ್ತದೆ. ಆದರೆ ದಯಾಳ್ ಮಾತ್ರ ಇಡೀ ಸಿನಿಮಾ ಜವಾಬ್ದಾರಿಯನ್ನು ನಿರ್ಮಾಪಕನ ಹೆಗಲಿಗೆ ತಗುಲಿಸಿ ಕೈ ಬೀಸಿಕೊಂಡು ಹೋಗಿ ಬಿಗ್‌ಬಾಸ್ ಮನೆ ಸೇರಿಕೊಂಡಿದ್ದಾರೆಂಬುದು ಉಗ್ರಾವತಾರ ತಾಳಿದ್ದ ಕೆ. ಮಂಜಣ್ಣನಿಗಿದ್ದ ಪ್ರಮುಖ ತಕರಾರು. ಎರಡನೆಯದ್ದು ಕನ್ನಡ ಚಿತ್ರಗಳಿಗೆ ನೀಟಾಗಿ ಕಾಗೆ ಹಾರಿಸಿ ಪರಭಾಷಾ ಚಿತ್ರಗಳಿಂದ ಕಾಸು ಗುಂಜಿಕೊಳ್ಳುತ್ತಿರೋ ಬುಕ್‌ಮೈ ಶೋ ವಿರುದ್ಧದ್ದು. ಮೂರನೇ ತಕರಾರು, ಚಿತ್ರದ ಅನಗತ್ಯ ಸನ್ನಿವೇಶಗಳಿಗೆ ಒಂದತ್ತು ನಿಮಿಷದ ಕತ್ತರಿ ಪ್ರಯೋಗ ಮಾಡಿ ಸೆನ್ಸಾರ್ ಮುಂದೆ ಹೋದರೂ ಕ್ಯಾರೇ ಅನ್ನದೆ ತಮ್ಮ ಪಾಡಿಗೆ ತಾವಿರೋ ಅಧಿಕಾರಿಗಳ ಬಗೆಗಿನದ್ದು.
ಇವಿಷ್ಟನ್ನೂ ಯಾವ ಮುಲಾಜೂ ಇಲ್ಲದೆ ನೇರಾ ನೇರ ಕೆಂಡ ಕಾರಿರೋ ಕೊಬ್ರಿ ಮಂಜಣ್ಣನ ಪ್ರಧಾನ ಟಾರ್ಗೆಟ್ಟು ನಿರ್ದೇಶಕ ದಯಾಳ್ ಪದ್ಮನಾಭನ್. ಬಿಗ್‌ಬಾಸ್‌ಗೆ ಹೋಗಲೆಂದು ಭಾರೀ ಉತ್ಸಾಹದಲ್ಲಿದ್ದ ದಯಾಳ್‌ಗೆ ಮಂಜು ಚಿತ್ರ ರಿಲೀಸಾದ ಮೇಲೆ ಒಂದು ವಾರ ಬಿಟ್ಟು ಬಿಗ್‌ಬಾಸ್‌ಗೆ ಹೋಗಲು ಹೇಳಿದ್ದರಂತೆ. ಆದರೆ ಹೋಗಲೇಬೇಕೆಂಬ ರಚ್ಚೆ ಹಿಡಿದ ದಯಾಳ್ ಹೋಗೆ ಬಿಟ್ಟಿದ್ದಾರಂತೆ. ಹಣ ಹೂಡಿದ ನಿಮಾಪಕನನ್ನು ಹೀಗೆ ನಡು ನೀರಲ್ಲಿ ಕೈ ಬಿಟ್ಟು ಹೋಗೋದು ಎಷ್ಟು ಸರಿ ಎಂಬುದು ಮಂಜಣ್ಣನ ನೋವಿನ ಪ್ರಶ್ನೆ!
ಆದರೆ, ಅಲ್ಲಿ ಬಿಗ್‌ಬಾಸ್ ಮನೆಯಲ್ಲಿ ಓಡಾಡಿಕೊಂಡಿರೋ ದಯಾಳ್ ನಡವಳಿಕೆಯಲ್ಲಿ ತಮ್ಮದೊಂದು ಚಿತ್ರ ರಿಲೀಸಾಗಿದೆ, ಅದರ ಕಥೆ ಏನಾಗಿದೆಯೋ ಎಂಬ ಸಣ್ಣ ತಳಮಳವೂ ಕಾಣಿಸುತ್ತಿಲ್ಲ. ಇತ್ತ ಚಿತ್ರ ನೋಡಿ ಬಂದವರನ್ನೂ ಕೂಡಾ ಮಾತಾಡಿಸುವಂಥಾ ವಾತಾವರಣವಿಲ್ಲ. ಈ ಭರಾಟೆಯ ನಡುವೆ ಮಂಜಣ್ಣನ ನೋವಿನ ಧ್ವನಿ ಬಿಗ್‌ಬಾಸ್ ಕೋಟೆ ದಾಟಿ ಯಾಳ್ ಪದ್ಮನಾಭನ ಕಿವಿ ಸೋಕೀತಾ ಎಂಬುದೇ ಸದ್ಯದ ಪ್ರಶ್ನೆ!

Leave a Reply

Your email address will not be published. Required fields are marked *


CAPTCHA Image
Reload Image