One N Only Exclusive Cine Portal

ದರ್ಶನ್ ಎದುರು ಅಭಿಮಾನಿಗಳ ಪಂದ್ಯ!

ಡಿ ಕಂಪೆನಿಯ ಕ್ರಿಕೆಟ್ ಹಂಗಾಮಾ ನೆನ್ನೆ ಯಶಸ್ವಿ ನಡೆಯಿತು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿ ಬಳಗ ಡಿ ಬ್ರದರ್ಸ್ ಹೆಸರಿನಲ್ಲಿ ನಡೆಸಿಕೊಂಡು ಬರುತ್ತಿರುವ ಡಿ ಕಪ್ ಸೀಜನ್ ೨ ಪಂದ್ಯ ಇದಾಗಿತ್ತು.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೇಲಿನ ಅಭಿಮಾನದ ಭಾಗವಾಗಿಯೇ ಚಾಲ್ತಿಗೆ ಬಂದಿರುವ ಡಿ ಕಪ್ ಕ್ರಿಕೆಟ್ ಪಂದ್ಯಾವಳಿ ಕಳೆದೆರಡು ವರ್ಷಗಳಿಂದ ಭಾರೀ ಜನಪ್ರಿಯತೆ ಪಡೆದುಕೊಂಡಿದೆ.
ದರ್ಶನ್ ಅಭಿಮಾನಿಗಳು ಸ್ವತಃ ಅಣಿಗೊಂಡು ಈ ಇಡೀ ಪಂದ್ಯಾವಳಿಯನ್ನು ಆಯೋಜಿಸುತ್ತಿರೋದು ನಿಜಕ್ಕೂ ವಿಶೇಷ. ನೆನ್ನೆ ನಡೆದ ಡಿ ಕಪ್ ಸೀಸನ್ ೨ನಲ್ಲಿ ದರ್ಶನ್ ಅಭಿಮಾನಿಗಳ ತಂಡಗಳೇ ಪಾಲ್ಗೊಂಡಿದ್ದವು. ಖುದ್ದು ದರ್ಶನ್ ಈ ಪಂದ್ಯಾವಳಿಗೆ ಆಗಮಿಸಿ ತಮ್ಮ ನೆಚ್ಚಿನ ಅಭಿಮಾನಿ ತಂಡಗಳನ್ನು ಹುರಿದುಂಬಿಸಿದ್ದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ನಟ ಧರ್ಮ ಕೀರ್ತಿರಾಜ್, ಸೂರಜ್ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಮತ್ತು ದರ್ಶನ್ ಅವರ ಸ್ನೇಹಿತರ ವಲಯ ಜಯನಗರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಜಮಾಯಿಸಿತ್ತು.

Leave a Reply

Your email address will not be published. Required fields are marked *


CAPTCHA Image
Reload Image