One N Only Exclusive Cine Portal

ದರ್ಶನ್-ಪುನೀತ್ ಏನಂದ್ರು ಗೊತ್ತಾ?

Happy Birthday-6ಈ ವಾರ ಹ್ಯಾಪಿ ಬರ್ತ್ ಡೇ ಸಿನಿಮಾ ಬಿಡುಗಡೆಯಾಗುತ್ತಿದೆ. ಗ್ರಾಮೀಣ ಸೊಗಡಿನ ತುಡಿತದ ನಿರ್ದೇಶಕ ಮಹೇಶ್ ಸುಖಧರೆಯವರ ಬಹು ನಿರೀಕ್ಷಿತ ಚಿತ್ರ `ಹ್ಯಾಪಿ ಬರ್ತ್‌ಡೇ’. ಮಂಡ್ಯ ಸೀಮೆಯ ಗ್ರಾಮ್ಯ ಘಮಲಿನ ಕಥಾ ಹಂದರ ಹೊಂದಿರುವ ಈ ಚಿತ್ರದ ಬಗ್ಗೆ ಈಗಾಗಲೇ ಪ್ರೇಕ್ಷಕರ ವಲಯದಲ್ಲೊಂದು ಕುತೂಹಲ ಚಿಗುರಿಕೊಂಡಿದೆ. ಇದಕ್ಕೆ ಮತ್ತಷ್ಟು ರಂಗು ತುಂಬುವಂಥಾ ಬೆಳವಣಿಗೆಗಳು ಚಿತ್ರದ ವಿಚಾರದಲ್ಲಿ ಒಂದರ ಹಿಂದೊಂದರಂತೆ ನಡೆಯುತ್ತಲೇ ಇವೆ!
ಇಷ್ಟೆಲ್ಲ ಹೇಳಲು ಖಂಡಿತಾ ಕಾರಣವಿದೆ. ಹ್ಯಾಪಿ ಬರ್ತಡೇ ಚಿತ್ರದ ಬಗ್ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಪುನೀತ್ ರಾಜ್‌ಕುಮಾರ್ ಮೊದಲಾದ ಸ್ಟಾರ್‌ಗಳೇ ಭರವಸೆಯ ಮಾತುಗಳನ್ನಾಡಿದ್ದಾರೆ!
ಹ್ಯಾಪಿ ಬರ್ತ್‌ಡೇ ಟೀಸರ್ ಬಿಡುಗಡೆಯಾದಾಗಲೇ ಭಾರೀ ಟಾಕ್ ಆಗಿತ್ತು. ಇದನ್ನೇ ಉಲ್ಲೇಖಿಸಿ ಮಾತಾಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ `ಟೀಸರ್ ಮತ್ತು ಹಾಡುಗಳನ್ನು ನೋಡಿದರೇನೇ ಇದೊಂದು ಭಿನ್ನವಾದ ಸಿನಿಮಾ ಎಂಬುದು ಸ್ಪಷ್ಟವಾಗಿಯೇ ಗೊತ್ತಾಗುತ್ತದೆ. ಇಂಥಾ ಚಿತ್ರ ಬಂದು ಎರಡ್ಮೂರು ವರ್ಷಗಳೇ ಕ:ಳೆದು ಹೋಗಿವೆ. ಗ್ರಾಮೀಣ ಭಾಗದ ಸೊಗಡನ್ನು ಹೊಂದಿರುವ ಇಂಥಾ ಚಿತ್ರಗಳು ಆಗಾಗ ಬರುತ್ತಿರಬೇಕು. ಮಹೇಶ್ ಸುಖಧರೆಯವರ ಸಿನಿಮಾ ಅಂದ ಮೇಲೆ ಅಲ್ಲಿ ಹೊಸತನ ಇದ್ದೇ ಇರುತ್ತೆ. ಈ ಚಿತ್ರದ ವಿಚಾರದಲ್ಲಿಯೂ ಅದು ನಿಜವಾಗುತ್ತದೆ, ಈ ಚಿತ್ರ ಜನರನ್ನು ಸೆಳೆಯುತ್ತದೆ ಎಂಬ ಭರವಸೆ ಇದೆ’ ಎಂಬಂಥಾ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಇನ್ನು ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಕೂಡಾ ಹ್ಯಾಪಿ ಬರ್ತ್‌ಡೇ ಬಗ್ಗೆ ಸಕಾರಾತ್ಮಕವಾಗಿಯೇ ಅಭಿಪ್ರಾಯ ಹಂಚಿಕೊಂಡಿದ್ದಾರೆ. `ಅಪ್ಪಾಜಿಯವರ ಗ್ರಾಮೀಣ ಹಿನ್ನಲೆ ಹೊಂದಿರುವ ಚಿತ್ರಗಳು ಇಂದಿಗೂ ಅಜರಾಮರವಾಗಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಯಾಕೋ ಆ ಕೊರತೆ ಕಾಡುತ್ತಿತ್ತು. ಆದರೆ ಹ್ಯಾಪಿ ಬರ್ತಡೇ ಚಿತ್ರದ ಟೀಜರ್ ಹಾಗೂ ಹಾಡುಗಳನ್ನ ನೋಡಿ ನಿಜಕ್ಕೂ ಖುಷಿಯಾಯ್ತು. ಈ ಚಿತ್ರದಲ್ಲೇನೋ ಹೊಸತನವಿದೆ, ಅದೇನೋ ಮೋಡಿ ಮಾಡುತ್ತೆ ಅಂತನ್ನಿಸುತ್ತಿದೆ’ ಎಂದಿದ್ದಾರೆ ಪುನೀತ್.
ಸದ್ಯ ಚಿತ್ರ ತಂಡ ಇಂಥಾ ಮೆಚ್ಚುಗೆಗಳಿಂದ ಖುಷಿಯಾಗಿದೆ. ಸದಾ ಬ್ಯುಸಿಯಾಗಿರುವ ಸ್ಟಾರ್ ನಟರೇ ಬಿಡುವು ಮಾಡಿಕೊಂಡು ಬೇರೆಯವರ ಚಿತ್ರಗಳ ಬಗ್ಗೆ ಮಾತಾಡುವ ಇಂಥಾ ಬೆಳವಣಿಗೆ ನಿಜಕ್ಕೂ ಸಕಾರಾತ್ಮಕವಾದದ್ದು. ಪಕ್ಕದ ತಮಿಳುನಾಡಿನ ಚಿತ್ರರಂmsಗದಲ್ಲಿ ಲಾಗಾಯ್ತಿನಿಂದಲೂ ಇಂಥಾದ್ದೊಂದು ಟ್ರೆಂಡ್ ಇದೆ. ಹೊಸಬರು ಯಾರೇ ಚಿತ್ರ ಮಾಡಿದರೂ ರಜನೀಕಾಂತ್‌ರಂಥಾ ಸ್ಟಾರ್ ನಟರು ಅವುಗಳ ಬಗ್ಗೆ ಪ್ರತಿಕ್ರಿಯೆ ನೀಡುತ್ತಾರೆ. ಅವರು ಮೆಚ್ಚಿ ಮಾತಾಡಿದ ಒಳ್ಳೆ ಚಿತ್ರಗಳು ಗೆಲ್ಲುತ್ತಲೂ ಇವೆ.
ಇಂಥಾ ಟ್ರೆಂಡ್ ಇದೀಗ ಕನ್ನಡಕ್ಕೂ ಪಾದಾರ್ಪಣೆ ಮಾಡಿದೆ. ಹ್ಯಾಪಿ ಬರ್ತ್‌ಡೆ ಬಗ್ಗೆ ಕನ್ನಡ ಚಿತ್ರರಂಗದ ಇತರೇ ಸ್ಟಾರ್‌ಗಳೂ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಅದು ಹ್ಯಾಪಿ ಬರ್ತಡೆಯ ಗೆಲುವಾಗಿ ಮಾರ್ಪಾಡಾಗುತ್ತದೆ ಎಂಬಂಥಾ ವಾತಾವರಣ ಚಾಲ್ತಿಯಲ್ಲಿದೆ. ಇತ್ತೀಚಿನ ದಿನಗಳಲ್ಲಿ ಈ ನೆಲದ ಘಮಲಿನ ಕತೆಗಳು ಸಿನಿಮಾ ಆಗಿ ರೂಪುಗೊಳ್ಳುವುದು ಬಲು ವಿರಳ. ಬಾಲಿವುಡ್ಡು, ಹಾಲಿವುಡ್ ಶೈಲಿಯ ಸಿನಿಮಾಗಳನ್ನು ತಂದು ನಮ್ಮ ಜನರ ಮೇಲೆ ಹೇರುವ ಪ್ರಯತ್ನ ಅವ್ಯಾಹತವಾಗಿ ನಡೆಯುತ್ತಾ ಬರುತ್ತಿದೆ.
ಇಂಥ ಸಂದರ್ಭದಲ್ಲಿ ಅಪ್ಪಟ ದೇಸೀ ಶೈಲಿಯ ಕಥೆಯನ್ನಿಟ್ಟುಕೊಂಡು ನಿರ್ದೇಶಕ ಮಹೇಶ್ ಸುಖಧರೆ ಸುಂದರವಾದ ಸಿನಿಮಾವೊಂದನ್ನು ಕಟ್ಟಿಕೊಟ್ಟಿದ್ದಾರೆ.  ಈಗಾಗಲೇ ಬಿಡುಗಡೆಗೊಂಡು ಎಲ್ಲೆಡೆ ಸದ್ದು ಹೊಮ್ಮಿಸಿರುವ ಹಾಡುಗಳು `ಇದು ನಮ್ಮ ಹಾಡು, ನಮ್ಮದೇ ರಾಗ’ ಎನ್ನುವಂತೆ ಮಾಡಿವೆ.
ರಾಜಕಾರಣದಲ್ಲಿ ದೊಡ್ಡ ಹೆಸರು ಮಾಡಿರುವ ಚೆಲುವರಾಯಸ್ವಾಮಿ ಅವರು ತಮ್ಮ ಮಗನನ್ನು ಬೆಳ್ಳಿಪರದೆಗೆ ಪರಿಚಯಿಸಲು ಹಾಲಿವುಡ್ ಶೈಲಿಯ, ಬಾಂಡ್ ಸಿನಿಮಾದಂಥ ಕಥೆಯನ್ನು ಆಯ್ಕೆ ಮಾಡಿಕೊಂಡು, ಕಥೆಯನ್ನೂ ಮರೆಸುವ ತಂತ್ರಜ್ಞಾನವನ್ನು ಬಳಸಿ ಚಿತ್ರ ನಿರ್ಮಿಸಬಹುದಿತ್ತು. ಆದರೆ, ಜನ ಒಪ್ಪುವ, ನೋಡುಗರ ಮನಸ್ಸಿನಾಳಕ್ಕೆ ಇಳಿಯುವ, ಕನ್ನಡಿಗರ, ಅದರಲ್ಲೂ ಗ್ರಾಮೀಣ ಪ್ರದೇಶದ ಜನರೊಟ್ಟಿಗೆ ಬೆಸೆದುಕೊಂಡಿರುವ ನವಿರು ಕಥೆಯನ್ನು ಆಯ್ಕೆ ಮಾಡಿ ಅದು ದೃಶ್ಯಕಾವ್ಯವಾಗಿ ಹೊರಹೊಮ್ಮುವಂತೆ ಮಾಡಿದ್ದಾರೆ.
ಬರೀ ಗ್ರಾಫಿಕ್ಸು, ತಾಂತ್ರಿಕ ಶ್ರೀಮಂತಿಕೆಯಲ್ಲಿ ಕಥೆಗಳು ಕಳೆದುಹೋಗುತ್ತಿರುವ ಇವತ್ತಿನ ದಿನದಲ್ಲಿ ಗ್ರ್ರಾಮೀಣ ಸೊಗಡಿನ ಎಳೆಗೆ ಅಕ್ಷರಶಃ ಜೀವ ನೀಡಿರುವವರು ನಿರ್ದೇಶಕ ಮಹೇಶ್ ಸುಖಧರೆ.
ಸುಖಧರೆ ಅವರ ಚಿಂತನೆ, ಅವರ ಟೇಸ್ಟು ಎಂಥದ್ದು ಅನ್ನೋದಕ್ಕೆ ಅವರು ಈ ವರೆಗೆ ನೀಡಿರುವ ಸಿನಿಮಾಗಳೇ ಸಾಕ್ಷಿ. ಕೈಗೆತ್ತಿಕೊಂಡ ಒಂದೊಂದು ಸಿನಿಮಾವನ್ನು ತಮ್ಮದೇ ಶೈಲಿಯಲ್ಲಿ ನಿರೂಪಿಸಿ ದೊಡ್ಡ ಮಟ್ಟದ ಯಶಸ್ಸನ್ನೂ ಕಂಡವರು ಮಹೇಶ್ ಸುಖಧರೆ.
ಸುಖಧರೆ ಚಿತ್ರರಂಗಕ್ಕೆ ನಿರ್ದೇಶಕನಾಗಿ ಎಂಟ್ರಿಕೊಟ್ಟಾಗ ಅವರಿಗಿನ್ನೂ ಇಪ್ಪತ್ತೇಳರ ಪ್ರಾಯ. ಆ ಕಾಲಕ್ಕೇ `ಸಂಭ್ರಮ’  ಅನೇಕ ಪ್ರಶಸ್ತಿ, ಪುರಸ್ಕಾರಗಳನ್ನು ತನ್ನದಾಗಿಸಿಕೊಂಡಿತ್ತು. ಇವತ್ತಿಗೆ ಸುಖಧರೆ ಮತ್ತಷ್ಟು ಮಾಗಿದ್ದಾರೆ. ಈ ಕಾಲಘಟ್ಟದ ಪ್ರೇಕ್ಷಕರಿಗೆ, ಬರುತ್ತಿರುವ ನಾನಾ ವೆರೈಟಿಯ ಸಿನಿಮಾಗಳ ನಡುವೆ ಒಬ್ಬ ಹೊಸ ಹೀರೋಗೆ ಯಾವ ಬಗೆಯ ಸಿನಿಮಾ ಮಾಡಬೇಕು ಅನ್ನೋದನ್ನ ಸ್ಪಷ್ಟವಾಗಿ ಅರಿತಿರುವ ಸಮರ್ಥ ನಿರ್ದೇಶಕ ಮಹೇಶ್ ಸುಖಧರೆ. ಈ ನಿಟ್ಟಿನಲ್ಲಿ ನೋಡಿದರೆ `ಹ್ಯಾಪಿ ಬರ್ತ್‌ಡೇ’ ಸಿನಿಮಾ ಕನ್ನಡ ಚಿತ್ರರಂಗದ ಮಟ್ಟಿಗೆ  ಮಾತ್ರವಲ್ಲದೆ, ಇಡೀ ಸಿನಿಮಾ ಪ್ರಪಂಚಕ್ಕೆ ಹೊಸದೊಂದು ಫ್ಲೇವರ್ ಆಗಿ ತೆರೆಮೇಲೆ ರಾರಾಜಿಸುವುದರಲ್ಲಿ ಅನುಮಾನಗಳಿಲ್ಲ.

Leave a Reply

Your email address will not be published. Required fields are marked *


CAPTCHA Image
Reload Image