One N Only Exclusive Cine Portal

‘ದಳಪತಿ’ಯ ಪ್ರೇಮ ಯುದ್ಧದ ಹಾಡು!

ಪ್ರೀತಿ ಎಂಬುದು ಚಿತ್ರರಂಗದ ಪಾಲಿಗೆ ಮೊಗೆದಷ್ಟೂ ಮುಗಿಯದ ಅಕ್ಷಯ ಪಾತ್ರೆ. ಪ್ರೀತಿ ಪ್ರೇಮದ ವಿಚಾರವಾಗಿ ಅದೆಷ್ಟೇ ಸಿನಿಮಾಗಳು ತೆರೆ ಕಂಡಿದ್ದರೂ ಈ ಸಂಬಂಧಿತ ಕಥೆಗಳಿಗೊಂದು ಬೇರೆಯದ್ದೇ ಖದರ್ ಇರೋದು ಸುಳ್ಳಲ್ಲ. ಇದೀಗ ನಿರ್ದೇಶಕ ಪ್ರಶಾಂತ್ ರಾಜ್ ಕೂಡಾ ‘ದಳಪತಿ ಚಿತ್ರದ ಮೂಲಕ ಪ್ರೀತಿಗಾಗಿಯೇ ನಡೆಯೋ ನವಿರಾದೊಂದು ಕಥೆ ಹೇಳ ಹೊರಟಿದ್ದಾರೆ. ಈ ಚಿತ್ರದ ಚೆಂದದ ಹಾಡುಗಳು ಇದೀಗ ಲೋಕಾರ್ಪಣೆಗೊಂಡಿವೆ.
ವಾರ್ ಫಾರ್ ಲವ್ ಎಂಬ ಅಡಿ ಬರಹ ಹೊಂದಿರೋ ಈ ಚಿತ್ರದಲ್ಲಿ ಪ್ರೇಮ್ ನಾಯಕರಾಗಿ ಅಭಿನಯಿಸಿದ್ದಾರೆ. ಈ ಚಿತ್ರದ ಆರು ಹಾಡುಗಳಿಗೆ ಚರಣ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಕವಿರಾಜ್, ಪವನ್ ಒಡೆಯರ್ ಮತ್ತು ಕೃಷ್ಣೇಗೌಡ ಈ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದಾರೆ.

ಪ್ರೇಮ್ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಂಡಿರೋ ಈ ಚಿತ್ರವನ್ನು ಸಂಗೀತ ನಿರ್ದೇಶಕ, ಸಂಕಲನಕಾರರನ್ನು ಹೊರತುಪಡಿಸಿ ಈ ವರೆಯೂ ಯಾರೊಬ್ಬರಿಗೂ ತೋರಿಸಿಲ್ಲವಂತೆ. ಕಲಾವಿದರೂ ಕೂಡಾ ತಾವು ಅಭಿನಯಿಸಿರೋ ಚಿತ್ರವನ್ನು ಜನರ ನಡುವೆ ನೋಡಲು ಉತ್ಸುಕರಾಗಿದ್ದಾರೆ. ಇನ್ನೇನು ಈ ಚಿತ್ರ ಬಿಡುಗಡೆಯಾಗೋ ಕ್ಷಣಗಳೂ ಹತ್ತಿರಾಗಿವೆ.
ನಿರ್ದೇಶಕ ಪ್ರಶಾಂತ್ ರಾಜ್ ಸೋದರ ನವೀನ್ ನಿರ್ಮಾಣದ ಈ ಚಿತ್ರದ ಇಂಟ್ರಡಕ್ಷನ್ ಸಾಂಗನ್ನು ಅದ್ದೂರಿ ವೆಚ್ಚದಲ್ಲಿ ಶ್ರೀಮಂತವಾಗಿ ಸೆರೆ ಹಿಡಿಯಲಾಗಿದೆಯಂತೆ. ಈ ಚಿತ್ರದ ಹಾಡುಗಳೀಗ ಆನಂದ್ ಆಡಿಯೋ ಮೂಲಕ ಹೊರ ಬಂದಿವೆ. ಮುಂದಿನ ತಿಂಗಳು ದಳಪತಿ ಚಿತ್ರ ರಾಜ್ತಾಧ್ಯಂತ ತೆರೆ ಕಾಣಲಿದೆ. 

Leave a Reply

Your email address will not be published. Required fields are marked *


CAPTCHA Image
Reload Image