One N Only Exclusive Cine Portal

ದಿವಾಕರ್ ದಾಳಿಗೆ ಸುಸ್ತಾದ ಸಂಖ್ಯಾಶಾಸ್ತ್ರದ ಸೀನ!

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಎದುರಿಗೆ ಕಿಚ್ಚಾ ಸುದೀಪ್. ಮನೆಯೊಳಗಿಂದ ಲೈವ್ ಆಗಿ ಪಕ್ಕದಲ್ಲಿ ಕುಂತಿದ್ದ ಸಂಖ್ಯಾಶಾಸ್ತ್ರದ ಜಯಶ್ರೀನಿವಾಸನ್‌ಗೆ ಹಿಗ್ಗಾಮುಗ್ಗ ಕ್ಲಾಸ್ ತೆಗೆದುಕೊಂಡ ಪಕ್ಕಾ ಹಳ್ಳಿ ಬ್ರೀಡ್ ದಿವಾಕರ್… ಇದು ಈ ಶನಿವಾರ ಬಿಗ್‌ಬಾಸ್ ಸ್ಪರ್ಧಿಗಳ ಪಾಲಿಗೆ ಬಂದೊಲಿದ ಶಾಕಿಂಗ್ ರಸಕ್ಷಣ!
ಬಿಗ್‌ಬಾಸ್ ಮನೆಯೊಳಗೆ ಈ ಬಾರಿ ಪಕ್ಕಾ ರೆಬೆಲ್ ಮತ್ತು ಇಂಟರೆಸ್ಟಿಂಗ್ ಕ್ಯಾರೆಕ್ಟರ್ ಆಗಿ ಗುರುತಿಸಿಕೊಂಡಾತ ದಿವಾಕರ್. ಕೆಲ ಬಾರಿ ಹುಂಬನಂತೆ ಕಾಣಿಸೋ ಈತನ ಯಾವುದೇ ತಟವಟ ಇಲ್ಲದ ಮುಗ್ಧತೆ ಪ್ರೇಕ್ಷಕರ ಮನ ಗೆದ್ದಿದೆ. ಇಂಥಾ ದಿವಾಕರ್ ಮತ್ತು ಸಂಖ್ಯಾ ಶಾಸ್ತ್ರದಲ್ಲಿ ಅದೇನೋ ಮಹಾ ಸಾಧನೆ ಮಾಡಿರೋದಾಗಿ ಹೇಳಿಕೊಂಡು ಓಡಾಡೋ ಜಯಶ್ರೀನಿವಾಸನ್‌ಗೂ ಲವ್ & ಹೇಟ್ ಸಂಬಂಧ!
ಇಂಥಾ ದಿವಾಕರ್ ಮತ್ತು ಜಯಶ್ರೀನಿವಾಸನ್ ನಡುವೆ ಸಣ್ಣ ಕಾರಣಕ್ಕೆ ಸ್ಕೂಲ್ ಟಾಸ್ಕಿನಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ಅದರ ಬಗ್ಗೆ ಶ್ರೀನಿವಾಸನ್ ಮನೆ ತುಂಬಾ ಅಸಹನೆಯಿಂದ ಹೇಳಿಕೊಂಡು ಓಡಾಡಿ ಅದು ಶನಿವಾರದ ಪಂಚಾಯ್ತಿಗೂ ಬಂದು ತಲುಪಿತ್ತು. ಈ ಬಗ್ಗೆ ಪ್ರಶ್ನೆ ಕೇಳಿದಾಗ ಜಯಶ್ರೀನಿವಾಸನ್ ಕಡೆಯಿಂದ ಕೇಳಿ ಬಂದಿದ್ದು ಪಕ್ಕಾ ಸೆಲೆಬ್ರಿಟಿ ಹ್ಯಾಂಗೋವರಿನ ಪ್ರವಚನ. ಇದರಿಂದ ಕೆರಳಿ ಕೆಂಡವಾದ ದಿವಾಕರ್ ಸಿಡಿಸಿದ್ದು ಅಕ್ಷರಶಃ ಬಾಂಬು!
ನಾನಿಲ್ಲಿ ನಾಟ್ಕ ಮಾಡೋಕ್ ಬಂದಿಲ್ಲ. ನನಗದ್ರ ಅವಶ್ಯಕತೇನೂ ಇಲ್ಲ. ಆ ನಂಬರ್ ಸರಿಗಿಲ್ಲ ಈ ನಂಬರ್ ಸರಿಗಿಲ್ಲ ಅಂತ ಬೊಗಳೆ ಬಿಟ್ಟು ಲಕ್ಷ ಲಕ್ಷ ಯಾಮಾರ‍್ಸೋ ೪೨೦ ಬುದ್ಧಿ ನಮ್ಗಿಲ್ಲ. ಇದ್ದಿದ್ನ ಇದ್ದಂಗೇ ಹೇಳೋದು ನನ್ ಜಾಯಮಾನ. ಈ ಕ್ಷಣಾನೇ ಹೊರಗೆ ಬಾ ಅಂದ್ರೂ ಹ್ಯಾಪಿಯಾಗ್ ಬರ‍್ತೀನಿ. ಅನ್ನೋ ಮೂಲಕ ದಿವಾಕರ್ ಕಿಚ್ಚನನ್ನೂ ಸೇರಿದಂತೆ ಪ್ರೇಕ್ಷಕರನ್ನೆಲ್ಲ ದಂಗು ಬಡಿಸಿದ್ದರು. ಹೇಳಿದ ಧಾಟಿ ಕೊಂಚ ಪೆಡಸಾದರೂ ಇರೋ ವಿಚಾರ ಅಸಲಿ ಅಂತ ಒಂದಷ್ಟು ಪ್ರೇಕ್ಷಕರಿಗಾದರೂ ಅನ್ನಿಸಿದ್ದರೆ ಅದು ಖಂಡಿತಾ ದಿವಾಕರ್ ತಪ್ಪಲ್ಲ!
ಈ ಜಯಶ್ರೀನಿವಾಸನ್ ಆರಂಭದಿಂದಲೂ ತಾನು ಮಹಾನ್ ಸೆಲೆಬ್ರಿಟಿ, ತನ್ನನ್ನು ಎಲ್ಲರೂ ಗುರೂಜಿ ಅನ್ನಬೇಕೆಂಬ ಭಯಂಕರ ತಲುಬು ಹೊಂದಿದ್ದವರು. ಬಿಗ್‌ಬಾಸ್ ಆರಂಭವಾಗಿ ಮಾರನೇ ದಿನವೇ ಸೀನ ಸಾಹೇಬರು ನನ್ನ ಗುರೂಜಿ ಅಂತ ಕರಿ ಅಂತ ದಿವಾಕರ್‌ಗೆ ಹೆಗಲೇರಿಕೊಂಡಿದ್ದರು. ದಿವಾಕರ್ ಖಂಡತುಂಡವಾಗಿ ಇಲ್ಲ ಅಂದಿದ್ದರು. ನಂತರ ಸೆಲೆಬ್ರಿಟಿ ಕೋಟಾದಲ್ಲಿ ಹೋದವರು ತಮ್ಮನ್ನು ಕ್ಯಾರೇ ಅನ್ನದಿದ್ದಾಗ ಗುಂಪುಗಾರಿಕೆಯ ಉದ್ದೇಶದಿಂದಲೇ ಸಾಮಾನ್ಯರ ಟೀಮು ಸೇರಿಕೊಂಡ ಶ್ರೀನಿವಾಸನ್ ಅಲ್ಲಿಯೂ ಗೆಲುವು ಕಾಣಲಿಲ್ಲ.
ಟಾಸ್ಕ್‌ನಲ್ಲಿಯೂ ದೊಡ್ಡಸ್ತಿಕೆ ತೋರಿಸುತ್ತಿದ್ದ ಶ್ರೀನಿವಾಸನ್ ಈ ವಾರ ಮಾತ್ರ ಶಾಲೆಯ ಟಾಸ್ಕಿನಲ್ಲಿ ಎಲ್ಲರ ಬಾಯಿಂದ ಸೀನ ಸೀನ ಅಂತ ಕರೆಸಿಕೊಂಡು ಎಂಜಾಯ್ ಮಾಡಿದ್ದರು. ಆದರೆ ತಾನೋರ್ವ ಫೇಮಸ್ ನ್ಯೂಮರಾಲಜಿಸ್ಟ್ ಆಗಿದ್ದರೂ ಓರ್ವ ಸಾಮಾನ್ಯ ಸೇಲ್ಸ್ ಮ್ಯಾನ್ ದಿವಾಕರನಿಗೆ ಸಲುಗೆ ಕೊಟ್ಟಿದ್ದೇನೆ ಅಂತ ಬೊಂಬಡಾ ಬಜಾಯಿಸುತ್ತಾ ಬಂದಿರೋ ಸಂಖ್ಯಾಶಾಸ್ತ್ರದ ಸೀನನಿಗೆ ಈ ವಾರ ಮುಟ್ಟಿ ನೋಡಿಕೊಳ್ಳುವಂಥಾ ಗೂಸಾ ಬಿದ್ದಿದೆ!

copying or reproducing the above content in any format without approval is criminal offence and will be prosecuted in Bengaluru court © CINIBUZZ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Leave a Reply

Your email address will not be published. Required fields are marked *


CAPTCHA Image
Reload Image