One N Only Exclusive Cine Portal

ದಿವಾಕರ್ ವಿರುದ್ಧ ಕೋಪಗೊಂಡರೇ ಜನ?

ಜಸಾಮಾನ್ಯರ ಕೋಟಾದಲ್ಲಿ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟರೂ ತನ್ನ ಪ್ರಾಮಾಣಿಕ ಮಾತು ಮತ್ತು ವರ್ತನೆಗಳ ಮೂಲಕವೇ ಗಮನ ಸೆಳೆಕೊಂಡಾತ ದಿವಾಕರ್. ಯಾವುದನ್ನಾದರೂ ನೇರವಾಗಿ ಹೇಳಿಬಿಡುವ ದಿವಾಕರ್‌ಗೆ ತಾನು ಹೇಳಿದ್ದು, ಅಂದುಕೊಂಡಿದ್ದೇ ಅಂತಿಮ ಎಂಬಂಥಾ ಮನಸ್ಥಿತಿ ಮುಳುವಾಗಲಿದೆಯಾ? ಆರಂಭದಲ್ಲಿ ಸಪೋರ್ಟ್ ಮಾಡಿದ ಜನರೇ ಆತನ ವಿರುದ್ಧ ಕೋಪಗೊಂಡಿದ್ದಾರಾ ಎಂಬ ಪ್ರಶ್ನೆಗೆ ಕಾರಣವಾಗೋ ವಾತಾವರಣ ಎಲ್ಲೆಡೆ ಹರಡಿಕೊಂಡಿದೆ!
ಹಾಗಂತ ಸಂಖ್ಯಾಶಾಸ್ತ್ರಜ್ಞ ಜಯಶ್ರೀನಿವಾಸನ್ ವಿರುದ್ಧದ ಮಾತನ್ನು ಅನೇಕರು ದಿವಾಕರ್ ಪರವಾಗಿಯೇ ಸ್ವೀಕರಿಸಿದ್ದಾರೆ. ಆತ ನಡೆದು ಬಂದ ದಾರಿ, ಪ್ರಾಮಾಣಿಕತೆಗಳನ್ನು ಮೆಚ್ಚಿಕೊಂಡಿದ್ದಾರೆ. ಆದರೆ ಎರಡ್ಮೂರು ವಾರ ಕಳೆದು ಕೊಂಚ ಚಿಗುರಿಕೊಳ್ಳುತ್ತಲೇ ಆತನಲ್ಲಾಗಿರೋ ಬದಲಾವಣೆಗಳನ್ನು ಪ್ರೇಕ್ಷಕರಿಗೆ ಅರಗಿಸಿಕೊಳ್ಳಲು ಕಷ್ಟವಾದಂತಿದೆ.
ದಿವಾಕರನಿಗೆ ಆರಂಭದಿಂದಲೂ ಸಪೋರ್ಟ್ ಮಾಡಿಕೊಂಡು ಬಂದವರು ರಿಯಾಜ್. ಆತ ತಪ್ಪು ತಿಳಿದುಕೊಂಡು ವರ್ತಿಸಿದಾಗ ಎಲ್ಲಾದರೂ ಕೂರಿಸಿಕೊಂಡು ಎಲ್ಲವನ್ನೂ ಕೂಲಾಗಿ ವಿವವರಿಸಿ ಥಂಡಾ ಮಾಡುತ್ತಿದ್ದವರು, ದಿವಾಕರ್ ವಿರುದ್ಧ ಬೇರೆಯವರು ಮಾತಾಡಿದಾಗಲೂ ಪರವಹಿಸಿಕೊಳ್ಳುತ್ತಿದ್ದವರು ಇದೇ ರಿಯಾಜ್. ಆದರೆ ಇಂತಾ ರಿಯಾಜ್‌ಗೇ ಉಲ್ಟಾ ಹೊಡೆದು ಏಕವಚನದಲ್ಲಿ ಮಾತಾಡಿದಾಗಲೇ ದಿವಾಕರ್ ವಿರುದ್ಧ ಅಸಹನೆ ಹೊಗೆಯಾಡಲಾರಂಭಿಸಿದೆ.
ಇನ್ನು ಈ ವಾರ ಕ್ಯಾಪ್ಟನ್ ಆಗಿದ್ದ ನಿವೇದಿತಾ ತನಗೆ ನಾನ್‌ಸೆನ್ಸ್ ಅಂದಳು ಅಂತ ರಂಪ ಮಾಡಿ ಆಕೆ ಅತ್ತೂ ಕರೆದರೂ, ಮನೆ ಮಂದಿಯ ಮಾತನ್ನೂ ಲೆಕ್ಕಿಸದೆ ಹಾರಾಡಿದ್ದ ದಿವಾಕರ್ ತಮ್ಮ ಜನಪ್ರಿಯತೆಯನ್ನು ತಾವೇ ಕೈಯಾರೆ ಹಾಳು ಮಾಡಿಕೊಂಡಿರೋ ವಾತಾವರಣವೂ ಇದೆ. ಆದರೆ ಇಂಥಾ ಏರಿಳಿತಗಳಾಚೆಗೆ ಈ ವಾರದ ದಿವಾಕರ್ ವರ್ತನೆ ಬಿಗ್‌ಬಾಸ್ ಮನೆಯೊಳಗೆ ಆತನ ಭವಿಷ್ಯ ನಿರ್ಧರಿಸಲಿದೆ!

Leave a Reply

Your email address will not be published. Required fields are marked *


CAPTCHA Image
Reload Image