One N Only Exclusive Cine Portal

ದೀಪಿಕಾ ಪಡುಕೋಣೆ ಪರ ನಿಂತ ಕಮಲ್!

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಸಂಜಯ್‌ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತಿ ಚಿತ್ರದ ವಿರುದ್ಧ ದೇಶಾದ್ಯಂತ ಚರ್ಚೆಗಳಾಗುತ್ತಿವೆ. ಬಲಪಂಥೀಯ ಸಂಘಟನೆಗಳು ಈ ಚಿತ್ರವನ್ನು ನಿರ್ಬಂಧಿಸುವಂತೆಯೂ ಒತ್ತಾಯ ಹೇರುತ್ತಿವೆ. ಇತ್ತೀಚೆಗೆ ಈ ಚಿತ್ರದ ಮುಖ್ಯಭೂಮಿಕೆಯಲ್ಲಿರೋ ದೀಪಿಕಾ ಪಡುಕೋಣೆ ವಿರುದ್ಧದ ನಿಂದನೆಗಳೂ ತಾರಕಕ್ಕೇರಿವೆ.
ತೀರಾ ವೈಯಕ್ತಿಕ ಮಟ್ಟದ ಕೊಳಕು ನಿಂದನೆಗಳಿಂದ ಓರ್ವ ನಟಿಯಾಗಿ ದೀಪಿಕಾ ತಬ್ಬಿಬ್ಬುಗೊಂಡಂತಿದೆ. ಇಂಥಾ ಸಂದರ್ಭದಲ್ಲಿ ಕಮಲ್ ಹಾಸನ್ ದೀಪಿಕಾ ಬೆಂಬಲಕ್ಕೆ ನಿಂತಿದ್ದಾರೆ. ಈ ಸಂಬಂಧವಾಗಿ ಟ್ವೀಟ್ ಮಾಡಿರೋ ಕಮಲ್ ದೀಪಿಕಾಗೆ ಸ್ಥೈರ್ಯ ತುಂಬುವಂಥಾ ಮಾತುಗಳನ್ನು ಹೇಳಿದ್ದಾರೆ.
ಓರ್ವ ನಟಿಯಾಗಿ ದೀಪಿಕಾ ಈ ಪಾತ್ರವನ್ನು ನಿರ್ವಹಿಸಿದ್ದಾರೆ. ಆಕೆಯನ್ನು ಗೌರವಿಸಬೇಕು. ದೀಪಿಕಾರ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವಂಥಾ ವಿದ್ಯಮಾನಗಳಾಗಬಾರದು. ನನ್ನ ಹಲವಾರು ಸಿನಿಮಾಗಳನ್ನೂ ಬೇರೆ ಬೇರೆ ಧರ್ಮದವರು ವಿರೋಧಿಸಿದ್ದರು. ಆದರೆ ಅದನ್ನೆಲ್ಲ ಎದುರಿಸಿ ಮುನ್ನಡೆಯಲೇಬೇಕು ಎಂಬಂಥಾ ಧೈರ್ಯ ತುಂಬೋ ಮಾತುಗಳನ್ನು ಕಮಲ್ ದೀಪಿಕಾಳನ್ನುದ್ದೇಶಿಸಿ ಹೇಳಿದ್ದಾರೆ.
ಈ ಹಿಂದೆ ಬಲಪಂಥೀಯ ಸಂಘಟನೆಗಳು ಶೂಟಿಂಗ್ ಸ್ಪಾಟಲ್ಲೇ ನಿರ್ದೇಶಕ ಸಂಜಯ್‌ಲೀಲಾ ಬನ್ಸಾಲಿ ಮೇಲೆ ಹಲ್ಲೆ ನಡೆಸಿದ್ದವು. ಇಂಥಾ ಸಂಘಟನೆಗಳೇ ಈ ಚಿತ್ರವನ್ನು ಬಿಡುಗಡೆಯಾಗಲು ಅವಕಾಶ ಮಾಡಿಕೊಡಕೂಡದು ಅಂತ ಪಟ್ಟು ಹಿಡಿದಿದ್ದವು. ಇದೀಗ ಈ ಚಿತ್ರ ತೆರೆಗಾಣಲು ಸಜ್ಜಾಗಿದೆ. ಆದುದರಿಂದಲೇ ವಿರೋಧಗಳೂ ಬೇರೆ ಬೇರೆ ಸ್ವರೂಪ ಪಡೆದುಕೊಳ್ಳಲಾರಂಭಿಸಿವೆ.

copying or reproducing the above content in any format without approval is criminal offence and will be prosecuted in Bengaluru court © CINIBUZZ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Leave a Reply

Your email address will not be published. Required fields are marked *


CAPTCHA Image
Reload Image