One N Only Exclusive Cine Portal

ದೊಣ್ಣೆ ವರಸೆ ಕಲಿತ ನಾಯಕ ಸಚಿನ್

Happy Birthday-5ಒಂದು ಸಿನಿಮಾ ಅಂದ ಮೇಲೆ ಅಲ್ಲಿ ನಾಯಕ ಮತ್ತು ನಾಯಕಿಯರ ಬಗ್ಗೆ ಮತ್ತು ಅವರ ಪಾತ್ರ ನಿರ್ವಹಣೆಯ ಬಗೆಗೆ ಹೆಚ್ಚು ಪ್ರಾಧಾನ್ಯತೆ ಇರುತ್ತದೆ. ಈ ನಿಟ್ಟಿನಲ್ಲಿ ನೋಡ ಹೋದರೆ ನಾಯಕ ಸಚಿನ್ ಹಾಗೂ ನಾಯಕಿ ಸಂಸ್ಕೃತಿ ಶೆಣೈ ಇಬ್ಬರೂ ಹೊಸಬರೇ.
ಆದರೆ ಈ ಕಥೆಗೆ ಅವರನ್ನು ಹಳಬರೆಂಬಷ್ಟು ಫೀಲ್ ಹುಟ್ಟುವಂತೆ ಹೊಂದಿಸಿಕೊಳ್ಳುವಲ್ಲಿ ಗೆದ್ದ ವಿಶ್ವಾಸ ನಿರ್ದೇಶಕ ಮಹೇಶ್ ಸುಖಧರೆಯವರಲ್ಲಿದೆ.
ಯಾರು ಅದೇನೇ ಬಿಲ್ಡಪ್ಪುಗಳನ್ನು ಕೊಟ್ಟರೂ ಅಂತಿಮ ಫಲಿತಾಂಶ ಕೊಡುವುದು ಕ್ಯಾಮೆರಾ ಮುಂದಿನ ಶಿಸ್ತು, ಸಂಯಮ, ಸಿದ್ಧತೆ ಮತ್ತು ಡೆಡೆಕೇಷನ್ನುಗಳು ಮಾತ್ರ. ಈ ವಿಚಾರದಲ್ಲಿ ನಾಯಕ ಸಚಿನ್ ಬಗ್ಗೆ ಭಾರೀ ಮೆಚ್ಚುಗೆಯ ಮಾತುಗಳೇ ಕೇಳಿ ಬರುತ್ತಿವೆ.
ಈ ಚಿತ್ರದ ಕಥೆಗೆ ಹೇಗೆ ಬೇಕೋ ಹಾಗೆ ನಾಯಕ ನಾಯಕಿಯರಿಬ್ಬರೂ ಹೊಂದಿಕೊಂಡಿದ್ದಾರೆ. ಅದಕ್ಕಾಗಿ ಬಹಳಷ್ಟು ಶ್ರಮವನ್ನೂ ಪಟ್ಟಿದ್ದಾರೆ. ಈ ಚಿತ್ರದಲ್ಲಿ ಕೇಂದ್ರ ಬಿಂದುವಿನಂತಿರುವ ದೊಣ್ಣೆ ವರಸೆ ಕಲಿಯಲೂ ಸಚಿನ್ ಬಹಳಷ್ಟು ಶ್ರಮ ವಹಿಸಿದ್ದಾರೆ. ಮಂಡ್ಯ ಸೀಮೆಯಿಂದ ದೊಣ್ಣೆ ವರಸೆ ಪ್ರವೀಣರನ್ನು ಕರೆಸಿ ಸಚಿನ್‌ಗೆ ತರಬೇರಿ ಕೊಡಿಸಲಾಗಿತ್ತು. ಆರು ತಿಂಗಳ ಕಾಲ ದಣಿವರಿಯದೇ ಸಚಿನ್ ಅದನ್ನು ಕಲಿತಿದ್ದರು.
ಈಗ ಎಂಥವರೂ ಬೆರಗಾಗುವಂತೆ ಸಚಿನ್ ದೊಣ್ಣೆ ವರಸೆಯಲ್ಲಿ ಪಳಗಿದ್ದಾರೆ. ಇದೂ ಸೇರಿದಂತೆ ಚಿತ್ರದ ಕಥೆ ಏನು ಬೇಡುತ್ತದೋ ಅದೆಲ್ಲದಕ್ಕೂ ಹೊಂದಿಕೊಳ್ಳುತ್ತಲೇ ಸಚಿನ್ ಉತ್ತಮ ನಟರಾಗಿ ರೂಪುಗೊಂಡಿದ್ದಾರೆಂಬುದು ಚಿತ್ರ ತಂಡದ ಮೆಚ್ಚುಗೆ!

Leave a Reply

Your email address will not be published. Required fields are marked *


CAPTCHA Image
Reload Image