ದ್ರೋಣನಿಗಾಗಿ ಪಾಠ ಮಾಡಲಿದ್ದಾರೆ ಶಿವಣ್ಣ!

0
39

ಕನ್ನಡ ಚಿತ್ರ ರಂಗದ ಮಟ್ಟಿಗೆ ಬರೀ ಹ್ಯಾಟ್ರಿಕ್ ಹೀರೋ ಮಾತ್ರವಲ್ಲ; ಎನರ್ಜಿಟಿಕ್ ಹೀರೋ ಪಟ್ಟವೂ ಶಿವರಾಜ್ ಕುಮಾರ್ ಅವರದ್ದೇ. ವರ್ಷವೊಂದಕ್ಕೆ ಅತೀ ಹೆಚ್ಚು ಸಿನಿಮಾಗಳಲ್ಲಿ ನಟಿಸುವ, ಒಂದು ಚಿತ್ರ ಮುಕ್ತಾಯವಾಗೋ ಮುನ್ನವೇ ಮತ್ತೊಂದು ಚಿತ್ರಕ್ಕೆ ಅಣಿಗೊಳ್ಳುವ ಶಿವರಾಜ್ ಕುಮಾರ್ ಅವರ ಎನರ್ಜಿಯ ಬಗ್ಗೆ ಸುದೀಪ್‌ರಂಥಾ ನಟರೇ ಅಚ್ಚರಿಗೊಂಡಿದ್ದಿದೆ. ಬಹುಶಃ ಈಗ ಶಿವಣ್ಣನ ಕೈಲಿರೋ ಚಿತ್ರಗಳ ಪಟ್ಟಿ ನೋಡಿದರೆ ಅವರ ಉತ್ಸಾಹದ ಬಗ್ಗೆ ಎಂಥವರಿಗಾದರೂ ಅಚ್ಚರಿಯಾಗದಿರಲು ಸಾಧ್ಯವೇ ಇಲ್ಲ!

ಪ್ರೇಮ್ ನಿರ್ದೇಶನದಲ್ಲಿ ಸುದೀಪ್ ಅವರ ಜೊತೆ ಶಿವಣ್ಣ ನಟಿಸುತ್ತಿರುವ ದಿ ವಿಲ್ಲನ್ ಚಿತ್ರದ್ದು ಮುಗಿಯದ ಕಥೆ. ಆದರೆ ಈ ಚಿತ್ರದ ಚಿತ್ರೀಕರಣದ ಹಂತದಲ್ಲಿಯೇ ಟಗುರು ಚಿತ್ರ ಮುಗಿಸಿಕೊಂಡಿದ್ದ ಶಿವಣ್ಣ ಇದೀಗ ರುಸ್ತುಂ ಚಿತ್ರದ ಚಿತ್ರೀಕರಣದಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಈ ಚಿತ್ರವಿನ್ನೂ ಚಿತ್ರೀಕರಣದ ಹಂತದಲ್ಲಿರುವಾಗಲೇ ಮತ್ತೊಂದು ಹೊಸಾ ಚಿತ್ರವನ್ನೂ ಒಪ್ಪಿಕೊಂಡಿದ್ದಾರೆ!

ಅಂದಹಾಗೆ ಶಿವಣ್ಣ ಒಪ್ಪಿಕೊಂಡಿರೋ ಈ ಹೊಸಾ ಚಿತ್ರದ ಹೆಸರು ದ್ರೋಣ. ಚಕ್ರವರ್ತಿ ನಿರ್ದೇಶನ ಮಾಡಲಿರೋ ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ಅವರ ಮೊದಲಸಲ ಶಿಕ್ಷಕರಾಗಿ ಕಾಣಿಸಿಕೊಳ್ಳಲಿದ್ದಾರಂತೆ. ಇದೀಗ ಶಿವಣ್ಣ ನಟಿಸುತ್ತಿರೋ ರುಸ್ತುಂ ಚಿತ್ರದಲ್ಲಿಯೇ ಭಿನ್ನವಾದ ಗೆಟಪ್ಪಿನಲ್ಲಿ ಕಾಣಿಸಿಕೊಂಡಿದ್ದಾರೆ. ದ್ರೋಣ ಚಿತ್ರ ಅವರ ವೃತ್ತಿ ಬದುಕಿನಲ್ಲಿಯೇ ಮಹತ್ತರವಾದ ಚಿತ್ರವಾಗಿ ಮೂಡಿ ಬರಲಿದೆ ಎಂಬ ಭರವಸೆಯೂ ಚಿತ್ರ ತಂಡದಲ್ಲಿದೆ.

ಟಗರು ಚಿತ್ರದ ನಂತರ ಮತ್ತಷ್ಟು ಖದರ್ ತುಂಬಿಕೊಂಡಂತಿರೋ ಶಿವಣ್ಣನ ಈ ಎನರ್ಜಿ ನಿಜಕ್ಕೂ ಯುವ ನಟರಿಗೂ ಆದರ್ಶ ಎಂಬುದರಲ್ಲಿ ಎರಡು ಮಾತಿಲ್ಲ!

LEAVE A REPLY

Please enter your comment!
Please enter your name here