One N Only Exclusive Cine Portal

ಧೂಳೀಪಟ ಹಾಡಿನ ದಾಳಿ ಶುರು!


ಕನ್ನಡ ಚಿತ್ರರಂಗಕ್ಕೆ ಮಹಿಳಾ ನಿರ್ದೇಶಕಿಯೊಬ್ಬರ ಎಂಟ್ರಿಯಾಗಿದೆ. ಧೂಳೀಪಟ ಎಂಬ ಪಕ್ಕಾ ಮಾಸ್, ಕಮರ್ಶಿಯಲ್ ಚಿತ್ರದ ಮೂಲಕ ಎಲ್ಲರೂ ತಿರುಗಿ ನೋಡುವಂತೆ ಸದ್ದು ಮಾಡುತ್ತಾ ಅಡಿಯಿರಿಸಿರುವವರು ರಶ್ಮಿ. ಲೂಸ್ ಮಾಸ ಯೋಗಿ ಕೂಡಾ ಅತಿಥಿ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿರೋ ಈ ಚಿತ್ರದ ಹಾಡುಗಳು ಬಿಡುಗಡೆಯಾಗಿವೆ.
ಹೆಸರಲ್ಲೇ ಖದರ್ ಹೊಂದಿರೋ ಈ ಚಿತ್ರಕ್ಕೆ ಹಿನ್ನೆಲೆ ಸಂಗೀತ ಒದಗಿಸಿರೋ ಎ.ಟಿ ರವೀಶ್ ಅವರ ಶಿಷ್ಯ ಅರುಣ್ ಶೆಟ್ಟಿ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಅವರೇ ನಾಲಕ್ಕೂ ಹಾಡುಗಳಿಗೂ ಸಾಹಿತ್ಯ ರಚಿಸಿರುವುದು ವಿಶೇಷ. ಈ ಎಲ್ಲಾ ಹಾಡುಗಳೂ ಅಚ್ಚುಕಟ್ಟಾದ ಸಮಾರಂಭದ ಮೂಲಕ ಲೋಕಾರ್ಪಣೆಗೊಂಡಿವೆ.
ಈ ಸಮಾಜದಲ್ಲಿರೋ ದ್ವೇಷಾಸೂಯೆ, ವಂಚನೆಗಳನ್ನು ಧೂಳೀಪಟ ಮಾಡೋ ಮಾಸ್ ಕ್ಯಾರೆಕ್ಟರ್ ಈ ಚಿತ್ರದ ನಾಯಕನದ್ದಂತೆ. ಅಂದಹಾಗೆ ನಿರ್ದೇಶಕಿ ರಶ್ಮಿ ಅವರ ಅಣ್ಣ ರೂಪೇಶ್ ಜಿ. ರಾಜ್ ಅವರೇ ನಾಯಕರಾಗಿ ನಟಿಸಿದ್ದಾರೆ.
ಈ ಚಿತ್ರಕ್ಕೆ ಬಂಡವಾಳವನ್ನೂ ಹೂಡಿರುವ ರೂಪೇಶ್, ಕಥೆ, ಚಿತ್ರಕಥೆಯನ್ನೂ ಬರೆದಿದ್ದಾರಂತೆ. ಈ ಚಿತ್ರದಲ್ಲಿ ಮೊದಲ ಬಾರಿಯೇ ಪಕ್ಕಾ ಮಾಸ್ ಕ್ಯಾರೆಕ್ಟರ್ ಮಾಡಿರೋ ಖುಷಿಯಲ್ಲಿರೋ ರೂಪೇಶ್, ನಾಯಕನದ್ದು ಎಂಥಾ ಸಮಸ್ಯೆ ಇದ್ದರೂ ಕ್ಷಣಾರ್ಧದಲ್ಲಿ ಪರಿಹಾರ ಮಾಡೋ ಪಾತ್ರ. ಆದ್ದರಿಂದಲೇ ಧೂಳೀಪಟ ಅಂತ ಹೆಸರಿಟ್ಟಿರೋದಾಗಿ ವಿವರಣೆ ನೀಡಿದರು.
ಈ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಲಹರಿ ವೇಲು ಕೂಡಾ ಪಾಲ್ಗೊಂಡು ಶುಭ ಹಾರೈಸಿದ್ದಾರೆ. ಬಾಗಲಕೋಟೆಯ ಶಿರಗಣ್ಣ ಮತ್ತು ಫಕೀರಪ್ಪ ಪಲ್ಲೇದ್ ಅವರುಗಳು ಸಹ ನಿರ್ಮಾಪಕರಾಗಿದ್ದಾರೆ. ಈ ಚಿತ್ರ ಪ್ರತಿಯೋರ್ವ ಮನುಷ್ಯನೊಳಗೂ ಸುಪ್ತವಾಗಿ ಅಡಗಿರೋ ಆಕ್ರೋಶವನ್ನು ಪ್ರತಿನಿಧಿಸುತ್ತಾ ಪ್ರತಿಯೋರ್ವರಿಗೂ ತಮ್ಮದೇ ಕಥೆ ಎಂಬಂಥಾ ಫೀಲ್ ಹುಟ್ಟುತ್ತದೆಂಬ ಭರವಸೆ ನಿರ್ದೇಶಕಿ ರಶ್ಮಿ ಅವರದ್ದು.

 

Leave a Reply

Your email address will not be published. Required fields are marked *


CAPTCHA Image
Reload Image