One N Only Exclusive Cine Portal

ಧ್ವಜಸ್ತಂಭದ ಅರ್ಧಕ್ಕೆ ಧ್ವಜ ಹಾರಾಡಿತು!

ರಾಷ್ಟ್ರಪ್ರೇಮ ಸಾರುವ ಸಾಕಷ್ಟು ಸಿನಿಮಾಗಳು ಸ್ಯಾಂಡಲ್‌ವುಡ್‌ನಲ್ಲಿ ತಯಾರಾಗಿವೆ. ಹಿರಿಯ ನಟಿ ಗಿರಿಜಾ ಲೋಕೇಶ್ ರಾಷ್ಟ್ರೀಯತೆ ಸಾರುವ “ಚಕ್ರ’ ಸಿನಿಮಾದ ಸೋಜಿಗದ ಸಂದರ್ಭವೊಂದನ್ನು ನೆನಪು ಮಾಡಿಕೊಂಡಿದ್ದಾರೆ.

ನಟ ಸುಂದರಕೃಷ್ಣ ಅರಸ್ ನಿರ್ದೇಶನದ `ಚಕ್ರ’ ಸಿನಿಮಾದ ಸಂದರ್ಭ. ಬ್ರಿಟಿಷರು ನಮ್ಮನ್ನು ಆಳುತ್ತಿದ್ದ ಕಾಲಘಟ್ಟದ ಕತೆ. ನಾನು ಭಾರತದ ಧ್ವಜಾರೋಹಣ ಮಾಡುವ ಸನ್ನಿವೇಶ ಚಿತ್ರಿಸುತ್ತಿದ್ದರು. ನಾನು ಧ್ವಜಾರೋಹಣಕ್ಕೆ ಮುಂದಾದಾಗ ಬ್ರಿಟಿಷರು ಗುಂಡು ಹೊಡೆಯುತ್ತಾರೆ. ಗುಂಡು ನನ್ನ ಹೊಟ್ಟೆಗೆ ತಾಕುತ್ತದೆ. ಗುಂಡು ಬಿದ್ದ ರಕ್ತಸಿಕ್ತ ಜಾಗವನ್ನು ಒತ್ತಿ ಹಿಡಿಯುತ್ತಾ ನಾನು ಧ್ವಜ ಹಾರಿಸಬೇಕು. ಹಾಗೆ ದಾರ ಹಿಡಿದುಕೊಂಡೇ ಕಂಬದ ಕೆಳಗೆ ಬಿದ್ದು ಸಾಯುವ ಸನ್ನಿವೇಶ ಚಿತ್ರಿತವಾಗಬೇಕು. ಕಂಬದ ಅರ್ಧಕ್ಕೆ ಧ್ವಜ ಬರುತ್ತಿದ್ದಂತೆ ನಾನು ದಾರ ಕೈಬಿಟ್ಟುಬಿಟ್ಟೆ! ಏನಾಗುತ್ತದೋ ಎನ್ನುವ ಭಯದಿಂದ ನಾನು ಹಾಗೇ ಬಿದ್ದಿದ್ದೆ. ನಿರ್ದೇಶಕರು ಕಟ್ ಹೇಳುತ್ತಿದ್ದಂತೆ ಅಲ್ಲಿದ್ದವರೆಲ್ಲಾ ಚಪ್ಪಾಳೆ ಹೊಡೆದರು. ದೇಶಪ್ರೇಮಿ ಸತ್ತು ಬಿದ್ದ Pಣಕ್ಕೆ ಸಂತಾಪ ಸೂಚಕ ಎನ್ನುವಂತೆ ಧ್ವಜಸ್ತಂಭದ ಅರ್ಧಕ್ಕೆ ಧ್ವಜ ಹಾರಾಡುತ್ತಿತ್ತು! ನಿರ್ದೇಶಕರು ಇದನ್ನು ಯೋಜಿಸಿರಲಿಲ್ಲ. ಕಾಕತಾಳೀಯ ಎನ್ನುವಂತೆ ಸಂಭವಿಸಿದ ಇದು ಸನ್ನಿವೇಶಕ್ಕೆ ಮತ್ತಷ್ಟು ಅರ್ಥ ಕಲ್ಪಿಸಿತ್ತು.

Leave a Reply

Your email address will not be published. Required fields are marked *


CAPTCHA Image
Reload Image