One N Only Exclusive Cine Portal

ನಯನತಾರಾ ಜೊತೆ ಹೋಲಿಸಬೇಡಿ ಅಂದಳೇಕೆ ರಕುಲ್?

ಬಾಲಿವುಡ್‌ನಲ್ಲಿ ಮಾತ್ರವಲ್ಲದೆ ತೆಲುಗು ಚಿತ್ರ ರಂಗದಲ್ಲಿಯೂ ಮಿಂಚುತ್ತಿರೋ ನಟಿ ರಕುಲ್‌ಪ್ರೀತ್ ಸಿಂಗ್. ಇತ್ತೀಚೆಗೆ ತೆರೆ ಕಂಡಿದ್ದ ಸ್ಪೈಡರ್ ಚಿತ್ರದಲ್ಲಿ ಮಹೇಶ್ ಬಾಬು ಜೊತೆ ನಟಿಸೋ ಅವಕಾಶ ಗಿಟ್ಟಿಸಿಕೊಳ್ಳುವ ಮೂಲಕ ಈಕೆ ಟಾಲಿವುಡ್‌ನ ಸ್ಟಾರ್ ನಟಿಯಾಗಿ ಹೊರ ಹೊಮ್ಮಿದ್ದಾಳೆ. ಆದರೆ ಆ ಚಿತ್ರ ನಿರೀಕ್ಷೆಯ ಮಟ್ಟಕ್ಕೆ ಗೆಲುವು ಕಾಣದಿದ್ದರೂ ಪಕ್ಕದ ತಮಿಳುನಾಡಿನಲ್ಲಿ ರಕುಲ್ ಹವಾ ಜೋರಾಗಿದೆ.
ಸ್ಪೈಡರ್ ಚಿತ್ರ ನೆಲ ಕಚ್ಚುತ್ತಲೇ ರಕುಲ್‌ಗೆ ತಮಿಳಿನ ಕಾರ್ತಿಕ್ ನಟನೆಯ ತೀರಂ ಅದಿಗಾರಂ ಒಂಡ್ರು ಚಿತ್ರದಲ್ಲಿ ಅವಕಾಶ ಸಿಕ್ಕಿತ್ತು. ಈ ಚಿತ್ರ ಸೂಪರ್ ಹಿಟ್ ಆಗೋ ಮೂಲಕ ತಮಿಳಿನಲ್ಲಿ ರಕುಲ್ ಭಾರೀ ಜನಪ್ರಿಯತೆ ಗಳಿಸಿಕೊಂಡಿದ್ದಾಳೆ. ಹೀಗಾಗುತ್ತಲೇ ಅಲ್ಲಿನ ಮಾಧ್ಯಮಗಳು ರಕುಲ್ ನಯನತಾರಾಳನ್ನೇ ಮೀರಿಸಿ ಬೆಳೆಯುತ್ತಾಳೆ ಎಂಬರ್ಥದಲ್ಲಿ ಸುದ್ದಿ ಹರಡಲಾರಂಭಿಸಿವೆ.
ಈ ಬಗ್ಗೆ ಮಾಧ್ಯಮ ಮಂದಿಯೆದುರೇ ಪ್ರತಿಕ್ರಿಯೆ ನೀಡಿರೋ ರಕುಲ್ ತನ್ನನ್ನು ಯಾವ ಕಾರಣಕ್ಕೂ ನಯನತಾರ ಅವರೊಂದಿಗೆ ಹೋಲಿಕೆ ಮಾಡಬೇಡಿ ಅಂತ ಮನವಿ ಮಾಡಿಕೊಂಡಿದ್ದಾಳೆ. ಇದಕ್ಕೆ ಆಕೆ ನೀಡಿರೋ ಕಾರಣ ತಮಿಳಿಗರ ಮನ ಸೆಳೆದಿರೋದಂತೂ ಸತ್ಯ.
ನಯನತಾರಾ ದಕ್ಷಿಣ ಭಾರತದ ಸ್ಟಾರ್ ನಟಿ. ಅವರು ಈ ವರೆಗೂ ಥರ ಥರದ ಸವಾಲಿನ ಪಾತ್ರಗಳನ್ನು ಮಾಡಿದ್ದಾರೆ. ಆ ಕಾರಣದಿಂದಲೇ ಅಭಿಮಾನ ಗಳಿಸಿಕೊಂಡಿದ್ದಾರೆ. ಆದರೆ ತಾನು ಇನ್ನಷ್ಟೇ ಅಂಥಾ ಸವಾಲಿನ ಪಾತ್ರಗಳನ್ನು ಮಾಡಬೇಕಿದೆ. ಹಾಗಿರೋವಾಗ ತನ್ನನ್ನು ಸೀನಿಯರ್ ನಟಿ ನಯನತರಾ ಅವರ ಜೊತೆ ಹೋಲಿಕೆ ಮಾಡೋದು ಸರಿಯಲ್ಲ ಅನ್ನೋದು ರಕುಲ್ ವಿವರಣೆ.
ಓರ್ವ ಸ್ಟಾರ್ ನಟಿಯನ್ನು ಓವರ್‌ಟೇಕ್ ಮಾಡೋ ಬಗ್ಗೆ ಮಾತು ಕೇಳಿ ಬಂದಾಗ ಉಬ್ಬುವವರೇ ಹೆಚ್ಚು. ಅದರೆ ರಕುಲ್ ಪ್ರೀತ್ ಸಿಂಗ್‌ಳ ವಿಧೇಯತೆಗೆ ತಮಿಳಿಗರು ಫಿದಾ ಆಗಿದ್ದಾರೆ!

Leave a Reply

Your email address will not be published. Required fields are marked *


CAPTCHA Image
Reload Image