One N Only Exclusive Cine Portal

ನರ್ಸಮ್ಮ ಈಗ ಫುಲ್ ಬಿಜಿ!

ಬಿಗ್ ಬಾಸ್ ಅಂಗಳದಲ್ಲಿ ಬುಲ್ಡೋಜರಿನಂತೆ ಉಳ್ಳಾಡಿಕೊಂಡುಬಂದ ಮೇಲೆ ನರ್ಸ್ ಜಯಲಕ್ಷ್ಮಿಯ ಖದರ್ರೇ ಬದಲಾಗಿಹೋಯ್ತು. ದಿಢೀರನೆ ಸ್ಮಾಲ್ & ಬಿಗ್ ಸ್ಕ್ರೀನ್ ಗಳಲ್ಲಿ ಅವಕಾಶ ಪಡೆದರು. ಈ ಮಹಿಳೆಯದ್ದು ಕೆಲವೊಮ್ಮೆ ಅಸಹ್ಯ ಹುಟ್ಟಿಸುವಂಥಾ ಅತಿರೇಕ. ತಾನೇನೋ ಮಹಾನ್ ಘನಂಧಾರಿ ಕೆಲಸ ಮಾಡಿ ಸೆಲೆಬ್ರಿಟಿಯಾದವಳೆಂಬಂತೆ ಪೋಸು ಕೊಡುತ್ತಿರುವ ಆಕೆಯ ಭ್ರಮೆ ವಿಪರೀತಕ್ಕಿಟ್ಟುಕೊಂಡಿವೆ. ನಾ ಒಂದಿನ ಲೇಡಿ ಸೀಯೆಮ್ಮಾಗಿ ವಿಧಾನಸೌಧದ ಮೂರನೇ ಮಹಡಿಗೋಯ್ತೀನಲ್ಲಾ ಆವಾಗ ತೋರುಸ್ತೀನಿ ನಾ ಯಾರಂತ ಅಂತೆಲ್ಲ ಆಗಾಗ ನರ್ಸು ಒದರುತ್ತಿರುತ್ತೆ! ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾದಿಯಾಗಿದ್ದ ಈಕೆ ಈವತ್ತು ಸೆಲೆಬ್ರಿಟಿಯ ಸ್ಥಾನಕ್ಕೇರಿದ್ದು ಒಳ್ಳೆ ಹಾದಿಯಲ್ಲಾದರೆ ತಕರಾರುಗಳಿರುತ್ತಿರಲಿಲ್ಲ. ಆದರೆ ಜಯಲಕ್ಷ್ಮಿ ಸದ್ದು ಮಾಡಿದ್ದೇ ಯಡಿಯೂರಪ್ಪನ ಮಾನಸಿಕ ಪುತ್ರ ಕಂ ಬಯಲು ಡಿಸ್ಕೋ ಡಾನ್ಸರ್ ರೇಣುಕಾಚಾರ್ಯನೊಂದಿಗಿನ ರಾಸಲೀಲೆಯ ಮೂಲಕ. ಈ ಪ್ರಕರಣದಲ್ಲಿ ರೇಣುಕಾಚಾರಿಯನ್ನೇ ವಿಲನ್ನಾಗಿಸಿ ತಾನು ದಮನಿತಳೆಂಬಂತೆ ಪೋಸು ಕೊಟ್ಟಿದ್ದವಳು ನರ್ಸು ಜಯಲಕ್ಷ್ಮಿ. ಆಕೆಗೆ ಐಶಾರಾಮಿ ಬದುಕು ನಡೆಸಬೇಕೆಂಬ ತಪನೆ ವಿಪರೀತವಿತ್ತು. ಅದಕ್ಕೆ ಸರಿಯಾಗಿ ಬರಗೆಟ್ಟ ರೇಣುಕಾಚಾರಿಯ ಪರಿಚಯವಾಯ್ತು. ಅದು ಕಿಸ್ಸಿನವರೆಗೂ ಮುಂದುವರೆಯಿತು. ಈಕೆ ಅಂದುಕೊಂಡಿದ್ದು ದಕ್ಕಲಿಲ್ಲವೋ ಏನೋ, ಕಡೆಗೊಂದು ದಿನ ರೇಣು ಕಿಸ್ಸು ಕೊಡುತ್ತಿದ್ದ ಫೋಟೋ ಹಿಡಿದು ಮಾಧ್ಯಮದೆದುರು ಬಂದು ರಂಪ ಎಬ್ಬಿಸಿದಳು. ಆ ಪ್ರಕರಣ ಅಸಹ್ಯ ಅಂತಾದರೆ ಅದರಲ್ಲಿ ಜಯಲಕ್ಷ್ಮಿಯ ಪಾಲು ಹೆಚ್ಚಿನದಿದೆ.
ಇಂಥ ಜಯಲಕ್ಷ್ಮಿ ಈಗ ಸೀರಿಯಲ್ಲು, ಸಿನಿಮಾಗಳಲ್ಲಿ ಬ್ಯುಸಿ, ಯಾರಾದರೂ ಕಾಲ್ ಶೀಟು ಕೇಳಲು ಹೋದರೆ ‘ದಿನಕ್ಕೆ ಫೈವ್ ಲ್ಯಾಕ್ಸ್ ಕೊಟ್ರೆ ಬರ‍್ತೀನಿ. ನನಗೂ ಫೇಸ್ ವ್ಯಾಲ್ಯೂ ಇದೆ ಕಣ್ರೀ. ನಾನು ಸಿನಿಮಾದಲ್ಲಿದೀನಿ ಅಂದರೆ ನಿಮಗೆ ಒಳ್ಳೆ ಪಬ್ಲಿಸಿಟಿ ಸಿಗತೈತೆ’ ಅಂತಾ ಸಾಧು ಕೋಕಿಲಾ ರೇಂಜಿಗೆ ಮಾತಾಡುತ್ತಂತೆ ಜಯಮ್ಮ.
ಹೋಗ್ಲಿ ಬಿಡಿ, ಸದ್ಯ ‘ಅಕ್ಷತೆ’ ಅನ್ನೋ ಸಿನಿಮಾದಲ್ಲಿ ನರ್ಸಮ್ಮ ಒಂದು ಪಾರ್ಟು ಮಾಡೈತೆ. ಅದೂ ಮನೆಕೆಲಸದವಳ ಪಾತ್ರ. ಪಾಪ. ಮಾಜಿ ಸಿಎಮ್ಮು ಸದಾನಂದ ಗೌಡರ ಸೊಸೆಯಾಗಲು ಸ್ಕೆಚ್ಚು ಹಾಕಿ ವಿಫಲ ಯತ್ನ ನಡೆಸಿದ ಮೈತ್ರಿಯಾ ಗೌಡ ಈ ಚಿತ್ರದ ಹೀರೋಯಿನ್ನು. ಭವಿಷ್ಯದ ಸಿಯೆಮ್ಮಾಗಲು ‘ಸಂಚು’ ರೂಪಿಸಿರುವ ನರ್ಸಮ್ಮನಿಗೆ ಮಾತ್ರ ಕಸ-ಮುಸುರೆ ತೊಳೆಯುವ ಪಾರ್ಟು!!!

Leave a Reply

Your email address will not be published. Required fields are marked *


CAPTCHA Image
Reload Image