Connect with us

cbn

ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯ ಸಂಜೆ ಕಾರ್ಯಕ್ರಮ

Published

on

ಸದಾ ಕಾಡುವ ಚೆಂದದ ಹಾಡುಗಳ ಮೂಲಕವೇ ಪ್ರಸಿದ್ಧಿ ಪಡೆದಿರೋ ಕವಿರತ್ನ ಡಾ. ವಿ.ನಾಗೇಂದ್ರ ಪ್ರಸಾದ್ ನಿರ್ದೇಶಕರಾಗಿ, ನಟನಾಗಿಯೂ ಗುರುತಿಸಿಕೊಂಡಿದ್ದಾರೆ. ಸದಾ ಹೊಸಾ ಸೃಷ್ಟಿಯ ಹಂಬಲ ಹೊಂದಿರೋ ಅವರೀಗ ಮಹತ್ವಾಕಾಂಕ್ಷೆಯ ‘ಗೂಗಲ್ ಚಿತ್ರವನ್ನು ಪೂರ್ಣಗೊಳಿಸಿದ್ದಾರೆ. ಒಂದರ್ಥದಲ್ಲಿ ಒನ್‌ಮ್ಯಾನ್ ಶೋದಂತಿರೋ ಈ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ಇಂದು ಸಂಜೆ 5.30ಕ್ಕೆ ಚೌಡಯ್ಯ ಸ್ಮಾರಕ ಭವನದಲ್ಲಿ ನಡೆಯಲಿದೆ.
ಚಿತ್ರದ ಆಡಿಯೋ ಬಿಡುಗಡೆಯ ನೆಪದಲ್ಲಿಯೇ ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯ ಸಂಜೆ ಕಾರ್ಯಕ್ರಮವೂ ನಡೆಯಲಿದೆ. ಅನೂಪ್ ಸಿಳಿನ್, ಅನುರಾಧಾ ಭಟ್, ವಾಣಿ ಹರಿಕೃಷ್ಣ, ಅನನ್ಯಾ ಭಟ್, ಮಾನಸ ಹೊಳ್ಳ, ವೇದಶ್ರೀ ಮುಂತಾದವರು ನಾಗೇಂದ್ರ ಪ್ರಸಾದ್ ಗೀತೆಗಳಿಗೆ ಧ್ವನಿಯಾಗಲಿದ್ದಾರೆ.
ನಾಗೇಂದ್ರ ಪ್ರಸಾದ್ ಇತ್ತೀಚೆಗೆತಾನೆ ಮ್ಯೂಸಿಕ್ ಬಜಾರ್ ಎಂಬ ಆಡಿಯೋ ಕಂಪೆನಿ ಆರಂಭಿಸಿದ್ದಾರಲ್ಲಾ? ಅದರ ಮೂಲಕವೇ ಗೂಗಲ್ ಚಿತ್ರದ ಹಾಡುಗಳೂ ಹೊರ ಬರಲಿವೆ. ಇದಲ್ಲದೇ ಉತ್ಸವ್ ಮೂವೀಸ್ ಎಂಬ ಬ್ಯಾನರ್ ಮೂಲಕ ಈ ಚಿತ್ರ ನಿರ್ಮಾಣ ಮಾಡಿ ಅವರೀಗ ನಿರ್ಮಾಪಕರಾಗಿಯೂ ಅವತಾರವೆತ್ತಿದ್ದಾರೆ. ಇನ್ನುಳಿದಂತೆ ಕಥೆ, ಚಿತ್ರಕಥೆ ಸಂಭಾಷಣೆ, ಸಂಗೀತ, ನಿರ್ದೇಶನವನ್ನೂ ಮಾಡಿ ಈ ಚಿತ್ರದಲ್ಲಿ ನಟನೆಯನ್ನೂ ನಿಭಾಯಿಸಿರೋದು ನಾಗೇಂದ್ರ ಪ್ರಸಾದ್ ಅವರ ಎನರ್ಜಿ ಮತ್ತು ಬಹುಮುಖ ಪ್ರತಿಭೆಗೆ ಹಿಡಿದ ಕನ್ನಡಿ.
ಶುಭಾ ಪೂಂಜಾ ಮುಖ್ಯಭೂಮಿಕೆಯಲ್ಲಿರೋ ಗೂಗಲ್ ಈಗಾಗಲೇ ಕುತೂಹಲ ಹುಟ್ಟಿಸಿದೆ. ಚಿತ್ರದ ಹಾಡುಗಳು ಇಂದು ಚೆಂದದ ಕಾರ್ಯಕ್ರಮದ ಮೂಲಕ ಲೋಕಾರ್ಪಣೆಗೊಳ್ಳಲಿವೆ.

cbn

ಇದು ಅಣ್ಣಾವ್ರ ಕಡೆಯ ಸಿನಿಮಾ ಆಗಬೇಕಿತ್ತು!

Published

on

`ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ…’ ಹಾಡಿನ ಮೊದಲ ಸಾಲು ಈಗ ಸಿನಿಮಾ ಆಗಿ ಬಿಡುಗಡೆಗೊಂಡಿದೆ. ಕಾಂತ ಕನ್ನಲ್ಲಿ ನಿರ್ದೇಶನದಲ್ಲಿ ಮೂಡಿಬಂದಿರುವ ಸಿನಿಮಾ ನೋಡಿದ ಎಲ್ಲರನ್ನೂ ಸೆಳೆಯುತ್ತಿದೆ. ಸಿನಿಮಾ ನೋಡಿ ಹೊರಬಂದ ಪ್ರತಿಯೊಬ್ಬರ ಮುಖದಲ್ಲೂ ಮಂದಹಾಸ ಮೂಡಿಸುವ ಸಿನಿಮಾ ಇದು.

ಅಂದಹಾಗೆ ಇದೇ `ಇರುವುದೆಲ್ಲವ ಬಿಟ್ಟು’ ಶೀರ್ಷಿಕೆ ವರನಟ ಡಾ. ರಾಜ್ ಕುಮಾರ್ ಅವರ ನಟನೆಯ ಕೊನೆಯ ಸಿನಿಮಾ ಆಗಬೇಕಿತ್ತು ಅನ್ನೋ ವಿಚಾರವೊಂದು ಹೊರಬಿದ್ದಿದೆ. ಮೊನ್ನೆದಿನ ಈ ಸಿನಿಮಾವನ್ನು ನೋಡಿದ ಕೆ.ಎಂ.ಎಫ್‌ನ ಮಾಜಿ ವ್ಯವಸ್ಥಾಪಕ ನಿರ್ದೇಶಕ ಎ.ಎಸ್. ಪ್ರೇಮನಾಥ್ ಖುದ್ದು ನಿರ್ದೇಶಕರ ಬಳಿ ಈ ವಿಷಯವನ್ನು ಹೇಳಿದರಂತೆ. ಪ್ರೇಮ್‌ನಾಥ್ ಡಾ.ರಾಜ್ ಕುಟುಂಬದ ಜೊತೆ ತೀರಾ ನಿಕಟ ಸಂಪರ್ಕ ಹೊಂದಿರುವವರು. ಹೀಗಾಗಿ ಅಣ್ಣಾವ್ರ ಕುರಿತ ಸಾಕಷ್ಟು ಇಂಟರೆಸ್ಟಿಂಗ್ ವಿಚಾರಗಳು ಪ್ರೇಮನಾಥ್ ಅವರಿಗೆ ಸಹಜವಾಗೇ ಗೊತ್ತಿರುತ್ತದೆ.

ಡಾ. ರಾಜ್‌ಕುಮಾರ್ ನಟಿಸಬೇಕಿದ್ದ ಆ ಸಿನಿಮಾಗೆ ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಕಥೆಯನ್ನೂ ಹೇಳಿದ್ದರಂತೆ. `ಇರುವುದೆಲ್ಲವ ಬಿಟ್ಟು’ ಅನ್ನೋ ಶೀರ್ಷಿಕೆಯನ್ನು ರಾಜಣ್ಣ ಬಹುವಾಗಿ ಇಷ್ಟಪಟ್ಟಿದ್ದರಂತೆ. ಅವರ ಅನಾರೋಗ್ಯ ಮತ್ತಿತರ ಕಾರಣಗಳಿಗೆ ಆ ಸಿನಿಮಾ ಸೆಟ್ಟೇರಿರಲಿಲ್ಲ. ಒಂದು ವೇಳೆ ಅಣ್ಣಾವ್ರು ಈಗಲೂ ಇರುವಂತಾಗಿ, ಅದೇ ಶೀರ್ಷಿಕೆಯೊಂದಿಗೆ ಇಷ್ಟು ಮುದ್ದಾದ ಸಿನಿಮಾ ಮೂಡಿಬಂದಿರೋದನ್ನು ನೋಡಿದ್ದಿದ್ದರೆ ಅದೆಷ್ಟು ಖುಷಿಪಡುತ್ತದ್ದರೋ…?

Continue Reading

cbn

ಶಿವಣ್ಣನಿಗೆ ನಾಯಕಿಯಾದಳು ತೆಲುಗು ಹುಡುಗಿ ಇಶಾ!

Published

on

ಶಿವರಾಜ್ ಕುಮಾರ್ ನಟಿಸುತ್ತಿರೋ ಸಾಲು ಸಾಲು ಚಿತ್ರಗಳ ಗದ್ದಲದ ನಡುವೆ ‘ಎಸ್‌ಆರ್‌ಕೆ’ ಚಿತ್ರ ಅದೇಕೋ ಮರೆಯಾದಂತಿತ್ತು. ಯಾಕೆಂದರೆ, ಇದು ಕಳೆದ ವರ್ಷವೇ ಶಿವಣ್ಣ ಒಪ್ಪಿಕೊಂಡು ಸೆಟ್ಟೇರಿದ್ದ ಚಿತ್ರ. ಇದೀಗ ಆ ಚಿತ್ರಕ್ಕೆ ಹೊಸಾ ವೇಗ ಸಿಕ್ಕಿದೆ. ಈ ಚಿತ್ರಕ್ಕೆ ಶಿವಣ್ಣನ ನಾಯಕಿಯ ಆಯ್ಕೆಯೂ ನಡೆದಿದೆ.

ಲಕ್ಕಿ ಗೋಪಾಲ್ ನಿರ್ದೇಶನ ಮಾಡಲಿರೋ ಈ ಚಿತ್ರ ಇದೇ ಡಿಸೆಂಬರಿನಿಂದ ಚಿತ್ರೀಕರಣ ಆರಂಭಿಸಲಿದೆ. ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ಡ್ಯಾನ್ಸ್ ಮಾಸ್ಟರ್ ಪಾತ್ರದಲ್ಲಿ ನಟಿಸಲಿದ್ದಾರೆ. ನಾಯಕಿಯದ್ದು ಉಪನ್ಯಾಸಕಿಯ ಪಾತ್ರ. ಆ ಪಾತ್ರಕ್ಕೆ ತೆಲುಗಿನ ನಟಿ ಇಶಾ ರಬ್ಬಾ ಆಯ್ಕೆಯಾಗಿದ್ದಾರೆ. ಈಗಾಗಲೇ ತೆಲುಗಿನಲ್ಲಿ ಶೈನಪ್ ಆಗಿರೋ ಇಶಾ ಈ ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.

ಜ್ಯೂನಿಯರ್ ಎನ್‌ಟಿಆರ್ ರಂಥಾ ಸ್ಟಾರ್ ನಟರ ಜೊತೆ ಹಿಟ್ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿರುವಾಕೆ ಇಶಾ. ಈಕೆ ಈಗಾಗಲೇ ಆರೇಳು ತೆಲುಗು ಚಿತ್ರಗಳಲ್ಲಿ ನಟಿಸಿದ್ದಾಳೆ. ನಟನೆ, ಸೌಂದರ್ಯಾ ಎಲ್ಲವನ್ನೂ ಹೊಂದಿರುವ ಇಶಾ ಇಷ್ಟರಲ್ಲಿಯೇ ಬಾಲಿವುಡ್‌ಗೆ ಹಾರಲಿದ್ದಾಳೆಂಬ ಸುದ್ದಿ ತೆಲುಗು ಚಿತ್ರರಂಗದ ತುಂಬಾ ತುಂಬಿಕೊಂಡಿತ್ತು. ಆದರೆ ಆಕೆ ಕನ್ನಡ ಚಿತ್ರರಂಗದತ್ತ ಬಂದಿದ್ದಾಳೆ.

ಈಗಾಗಲೇ ಒಂದಷ್ಟು ಚಿತ್ರಗಳಿಗೆ ಕೆಲಸ ಮಾಡಿ ಪಳಗಿಕೊಂಡಿರುವ ಲಕ್ಕಿ ಗೋಪಾಲ್ ಎಸ್‌ಆರ್‌ಕೆ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಆರಂಭದಿಂದಲೂ ತಾನು ನಿರ್ದೇಶಕನಾದರೆ ಶಿವಣ್ಣನ ಚಿತ್ರ ಮಾಡಬೇಕೆಂಬ ಕನಸು ಹೊಂದಿದ್ದವರು ಗೋಪಾಲ್. ಮೊದಲ ಚಿತ್ರದಲ್ಲಿಯೇ ಅವರು ಆ ಕನಸನ್ನು ನನಸು ಮಾಡಿಕೊಂಡಿದ್ದಾರೆ.

Continue Reading

cbn

ಅಂಬಿ ಜೊತೆ ಶಿವಣ್ಣ!

Published

on

ಅಂಬಿ ನಿಂಗೆ ವಯಸಾಯ್ತೋ ಚಿತ್ರವೀಗ ರಾಜ್ಯಾದ್ಯಂತ ಯಶಸ್ವೀ ಪ್ರದಶನ ಕಾಣುತ್ತಿದೆ. ಅಂಬರೀಶ್ ಅವರ ಸಹಜಾಭಿನಯ, ಇಡೀ ಚಿತ್ರವನ್ನು ರೀಮೇಕ್ ಎಂಬ ಭಾವವೇ ಕಾಡದಂತೆ ನಿರ್ದೇಶನ ಮಾಡಿರೋ ಗುರುದತ್ತ ಗಾಣಿಗರ ಕಸುಬುದಾರಿಕೆ… ಇವೆಲ್ಲವೂ ಸೇರಿ ಈ ಚಿತ್ರ ಹೌಸ್‌ಫುಲ್ ಪ್ರದರ್ಶನ ಕಾಣುವಂತೆ ಮಾಡಿದೆ. ಕನ್ನಡ ಚಿತ್ರರಂಗದ ತಾರೆಯರೂ ಕೂಡಾ ಅಂಬಿ ನಿಂಗೆ ವಯಸಾಯ್ತೋ ಚಿತ್ರವನ್ನು ವೀಕ್ಷಿಸಿ ಮುಕ್ತ ಕಂಠದಿಂದ ಮೆಚ್ಚಿಕೊಳ್ಳುತ್ತಿದ್ದಾರೆ.

ಇದೀಗ ತಮ್ಮ ಚಿತ್ರಗಳ ಚಿತ್ರೀಕರಣಕ್ಕೊಂದು ಬ್ರೇಕ್ ಕೊಟ್ಟು ಈ ಚಿತ್ರವನ್ನು ನೋಡಲು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮುಂದಾಗಿದ್ದಾರೆ. ಇಂದು ಮಧ್ಯಾಹ್ನ ೧.೩೦ಕ್ಕೆ ಶಿವಣ್ಣ ಒರಾಯನ್ ಮಾಲ್‌ನಲ್ಲಿ ಅಂಬಿ ನಿಂಗೆ ವಯಸಾಯ್ತೋ ಚಿತ್ರವನ್ನು ವೀಕ್ಷಿಸಲಿದ್ದಾರೆ. ಇವರ ಜೊತೆಗೆ ಕನ್ನಡದ ಯುವ ನಿರ್ದೇಶಕರಾದ ಸಂತೋಷ್ ಆನಂದ್‌ರಾಮ್, ತರುಣ್ ಸುಧೀರ್, ಪವನ್ ಒಡೆಯರ್ ಸೇರಿದಂತೆ ಕೆಸಿಸಿ ಸದಸ್ಯರೆಲ್ಲರೂ ಈ ಸಿನಿಮಾವನ್ನು ವೀಕ್ಷಿಸಲಿದ್ದಾರೆ.

ಈಗಾಗಲೇ ಕನ್ನಡದ ಬಹುತೇಕ ನಟ ನಟಿಯರು ಈ ಚಿತ್ರವನ್ನು ವೀಕ್ಷಿಸಿದ್ದಾರೆ. ಅಂಬರೀಶ್ ಅವರ ಸಹಜಾಭಿನಯಕ್ಕೆ ಮನ ಸೋತಿದ್ದಾರೆ. ರೀಮೇಕ್ ಬಗ್ಗೆ ಇರೋ ಭಾವನೆಗಳನ್ನು ಬುಡ ಮೇಲು ಮಾಡುವಂತೆ ಕಥೆಯನ್ನು ನೇಟಿವಿಟಿಗೆ ಒಗ್ಗಿಸಿಕೊಂಡು ದೃಶ್ಯ ಕಟ್ಟಿರುವ ಗುರುದತ್ ಬಗ್ಗೆಯೂ ಎಲ್ಲರಲ್ಲಿಯೂ ಮೆಚ್ಚುಗೆ ಇದೆ. ಈ ಮೂಲಕವೇ ಕನ್ನಡ ಚಿತ್ರರಂಗಕ್ಕೊಬ್ಬ ಪ್ರತಿಭಾವಂತ ಯುವ ನಿರ್ದೇಶಕನ ಆಗಮನವಾಗಿದೆ ಎಂಬ ಅಭಿಪ್ರಾಯಗಳೇ ಎಲ್ಲೆಡೆ ಕೇಳಿ ಬರುತ್ತಿವೆ.

ಒಟ್ಟಾರೆಯಾಗಿ ಅಂಬಿ ಈ ಚಿತ್ರದ ಮೂಲಕ ಮತ್ತೊಮ್ಮೆ ನಾಯಕನಾಗಿ ಪ್ರೇಕ್ಷಕರನ್ನು ಆವರಿಸಿಕೊಂಡಿದ್ದಾರೆ. ಕಿಚ್ಚಾ ಸುದೀಪ್ ತಮ್ಮೆಲ್ಲ ಕೆಲಸ ಕಾರ್ಯಗಳ ನಡುವೆಯೂ ಈ ಚಿತ್ರವನ್ನು ಬಲು ಆಸ್ಥೆಯಿಂದ ಪೊರೆದಿದ್ದರು. ನಿರ್ಮಾಣದ ಜೊತೆಗೆ ಜ್ಯೂನಿಯರ್ ಅಂಬಿಯಾಗಿಯೂ ನಟಿಸಿದ್ದರು. ಇಮೇಜುಗಳಾಚೆಗಿನ ಅವರ ನಟನೆಯೂ ಜನ ಮನ ಗೆದ್ದಿದೆ. ಈ ಮೂಲಕ ಗುರುದತ್ ಗಾಣಿಗ ಮೇಲೆ ಅವರಿಟ್ಟಿದ್ದ ನಂಬಿಕೆಯೂ ನಿಜವಾಗಿದೆ.

Continue Reading

Trending

Copyright © 2018 Cinibuzz