One N Only Exclusive Cine Portal

ನಿಂಬೇಹಣ್ಣಿನಂಥ ಹುಡುಗೀ ಬಂದ್ಲು ನೋಡು!

2 (1)ನಿರ್ದೇಶಕ ರವೀಂದ್ರನಾಥ್ ನಿರ್ದೇಶನದ, ರಮೇಶ್ ಅರವಿಂದ್ ಮತ್ತು ಬೇಬಿ ಯುವಿನಾ ನಟಿಸಿರುವ `ಪುಷ್ಪಕ ವಿಮಾನ ಚಿತ್ರದಲ್ಲಿ ಬಾಲಿವುಡ್ ಬೆಡಗಿ ಜೂಹಿ ಚಾವ್ಲಾ ಅವ್ರು ಮುಖ್ಯ ಪಾತ್ರವೊಂದರಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಓದಿದ್ದಿರಲ್ಲವೆ? ಈಗ ಅವರು ಈ ಚಿತ್ರದಲ್ಲಿ ಕಾಣಿಸಿಕೊಂಡಿರುವ ಎಕ್ಸ್ ಕ್ಲೂಸಿವ್ ಫೋಟೋಗಳನ್ನು ನಾವಿಲ್ಲಿ ನೀಡಿದ್ದೇವೆ.
ಸಿನಿಮಾ ಆರಂಭವಾಗೋ ಹೊತ್ತಿಗೆ ಜೂಹಿ ಚಾವ್ಲಾರನ್ನ ಅಪ್ರೋಚ್ ಮಾಡಲಾಗಿದೆ. ಚಿತ್ರತಂಡ ಅವ್ರಿಗೆ ಟೀಸರ್ ತೋರಿಸಿತ್ತು. ಆ ಮುದ್ದುಮುದ್ದಾದ ದೃಷ್ಯಾವಳಿ ಕಂಡು ಜೂಹಿ ಫಿದಾ ಆಗಿದ್ದರು. ಹೀಗೆ ಖುಷಿಗೊಂಡಿರೋ ಚಾವ್ಲಾ ಚಿತ್ರದ ಬಗ್ಗೆ ಮತ್ತಷ್ಟು ಮಾಹಿತಿ ಕೇಳಿದ್ದರು. ಜೂಹಿ ಇಷ್ಟೆಲ್ಲಾ ಇಂಟರೆಸ್ಟ್ ತೋರಿಸಿ ಕಡೆಗೂ ಪುಷ್ಪಕ ವಿಮಾನದ ಯಾನಕ್ಕೆ ಒಪ್ಪಿದ್ದರು.
ಜೂಹಿ ಚಾವ್ಲಾ ಕನಸುಗಾರ ರವಿಚಂದ್ರನ್ ಅಭಿನಯದ `ಪ್ರೇಮಲೋಕ, ಕಿಂದರಿ ಜೋಗಿ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿ ಕನ್ನಡಿಗರೆದೆಗೆ ಕಿಚ್ಚು ಹತ್ತಿಸಿದ್ದವರು. ಆ ನಂತರ ರವಿಚಂದ್ರನ್ ಅವರ `ಶಾಂತಿ ಕ್ರಾಂತಿ ಚಿತ್ರದ ನಂತರ ಜೂಹಿ ಮತ್ತೆ ಕನ್ನಡ ಚಿತ್ರಗಳಲ್ಲಿ ನಟಿಸಿರಲಿಲ್ಲ.
ಇದೀಗ ಬಹುತೇಕ ಚಿತ್ರೀಕರಣ ಪೂರ್ಣಗೊಳಿಸಿರೋ ಪುಷ್ಪಕ ವಿಮಾನ ಚಿತ್ರದ ಮುಖ್ಯ ಪಾತ್ರವೊಂದರಲ್ಲಿ ನಟಿಸೋ ಮೂಲಕ ಜೂಹಿ ಚಾವ್ಲಾರ ಪುನರಾಗಮನವಾಗಿದೆ.

Leave a Reply

Your email address will not be published. Required fields are marked *


CAPTCHA Image
Reload Image