One N Only Exclusive Cine Portal

ನಿಖಿಲ್ ಕುಮಾರಸ್ವಾಮಿ ಸೀತಾರಾಮ ಕಲ್ಯಾಣಕ್ಕೆ ಮುಹೂರ್ತ!

ಜಾಗ್ವಾರ್ ಚಿತ್ರದ ಮೂಲಕ ಭರವಸೆಯ ನಟನಾಗಿ ಹೊರ ಹೊಮ್ಮಿದ್ದ ನಿಖಿಲ್ ಕುಮಾರಸ್ವಾಮಿಯವರ ಮುಂದಿನ ಚಿತ್ರ ಯಾವುದೆಂಬ ಕುತೂಹಲಕ್ಕೆ ಇದೀಗ ಪೂರ್ಣ ವಿರಾಮ ಬಿದ್ದಿದೆ. ಅವರ ಎರಡನೇ ಚಿತ್ರ ಸೀತಾರಾಮ ಕಲ್ಯಾಣಕ್ಕೆ ಶಾಸ್ತ್ರೋಕ್ತವಾಗಿಯೇ ಮುಹೂರ್ತ ನಡೆಯೋ ಮೂಲಕ ಚಾಲನೆ ಸಿಕ್ಕಿದೆ.

ಈ ಚಿತ್ರವನ್ನು ಯಶಸ್ವೀ ನಿರ್ದೇಶಕರೆಂದೇ ಗುರುತಿಸಿಕೊಂಡಿರುವ ಎ ಹರ್ಷ ನಿರ್ದೇಶನ ಮಾಡುತ್ತಿದ್ದಾರೆ. ಚನ್ನಾಂಭಿಕ ಮೂವೀಸ್ ಲಾಂಛನದಡಿಯಲ್ಲಿ ಹೆಚ್‌ಡಿ ಕುಮಾರಸ್ವಾಮಿ ಅರ್ಪಿಸಿ, ಅನಿತಾ ಕುಮಾರಸ್ವಾಮಿ ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಬಸವನಗುಡಿಯ ಕಾರಂಜಿ ಆಂಜನೇಯಸ್ವಾಮಿ ಸನ್ನಿಧಾನದಲ್ಲಿ ಅದ್ದೂರಿ ಮುಹೂರ್ತ ಸಮಾರಂಭ ನೆರವೇರಿದೆ.
ತಮ್ಮ ಪುತ್ರನ ಎರಡನೇ ಸಿನಿಮಾಕ್ಕೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆರಂಭ ಫಲಕ ತೋರಿಸಿ ಶುಭ ಹಾರೈಸಿದರೆ, ನಿರ್ಮಾಪಕ ಮುನಿರತ್ನ ಕ್ಯಾಮೆರಾ ಚಾಲನೆ ಮಾಡಿದ್ದಾರೆ. ನಿಖಿಲ್ ಕುಮಾರಸ್ವಾಮಿಗೆ ಹೇಳಿ ಮಾಡಿಸಿದಂತಿರೋ ಚೆಂದದ ಚಿತ್ರ ಕಥೆಯೊಂದನ್ನು ಮಾಡಿಕೊಂಡಿರುವ ಹರ್ಷ ಈಗಾಗಲೇ ಪಕ್ಕಾ ಶೂಟಿಂಗ್ ಪ್ಲಾನಿಂಗ್ ಮಾಡಿಕೊಂಡಿದ್ದಾರೆ. ಏಳು ಕಡೆಗಳಲ್ಲಿ ವಿಶೇಷವಾದ ಸೆಟ್ ಹಾಕಲು ಈಗಾಗಲೇ ಸಂಪೂರ್ಣ ತಯಾರಿ ನಡೆದಿದೆ. ಇನ್ನುಳಿದಂತೆ ಹಾಸನ, ಮಂಡ್ಯ ಸಕಲೇಶಪುರ ಮುಂತಾದ ಸುಂದರ ತಾಣಗಳಲ್ಲಿ ಸೀತಾರಾಮ ಕಲ್ಯಾಣದ ಚಿತ್ರೀಕರಣ ನಡೆಯಲಿದೆ.
ಜಾಗ್ವಾರ್ ಚಿತ್ರವನ್ನು ಆಸುಪಾಸಿನ ಚಿತ್ರರಂಗಗಳವರೂ ಹುಬ್ಬೇರಿಸಿ ನೋಡುವಂತೆ ನಿರ್ಮಾಣ ಮಾಡಿದ್ದ ಕುಮಾರಸ್ವಾಮಿಯವರು ಈ ಚಿತ್ರದಲ್ಲಿಯೂ ಒಟ್ಟಾರೆ ಅದ್ದೂರಿ ತನಕ್ಕೆ ವಿಶೇಷ ಪ್ರಾಶಸ್ತ್ಯ ಕೊಡುತ್ತಿದ್ದಾರೆ. ಸುನೀಲ್ ಗೌಡ ಅವರ ನಿರ್ಮಾಣ ಮೇಲ್ವಿಚಾರಣೆ ಇರೋ ಸೀತಾರಾಮ ಕಲ್ಯಾಣ ರವಿ ಬಸ್ರೂರು ಅವರ ಸಂಗೀತದಿಂದ ಕಳೆಗಟ್ಟಲಿದೆ. ಇನ್ನುಳಿದಂತೆ ಸ್ವಾಮಿ ಛಾಯಾಗ್ರಹಣ, ರಾಮ್ ಲಕ್ಷಣ್ ಸಾಹಸ ನಿರ್ದೇಶನ, ದೀಪು ಎಸ್ ಕುಮಾರ್ ಸಂಕಲನ ಮತ್ತು ಮೋಹನ್ ಬಿ ಕೆರೆ ಕಲಾ ನಿರ್ದೇಶನದಲ್ಲಿ ಸೀತಾರಾಮ ಕಲ್ಯಾಣ ಮೂಡಿ ಬರಲಿದೆ.

Leave a Reply

Your email address will not be published. Required fields are marked *


CAPTCHA Image
Reload Image