One N Only Exclusive Cine Portal

ನಿರ್ಮಾಪಕ ಸೈಯದ್, ವಿತರಕ ಮಂಜು ಹೇಳಿದ ಮಜವಾದ ಸಂಗತಿ!

ಯೋಗರಾಜ್ ಭಟ್ ಮತ್ತು ಗಣೇಶ್ ದಶಕಗಳ ನಂತರ ಒಂದಾಗಿರೋ ಮುಗುಳುನಗೆ ಚಿತ್ರದ ಕುರಿತಾಗಿ ಬಿಡುಗಡೆ ಪೂರ್ವದಲ್ಲಿಯೇ ಸಕಾರಾತ್ಮಕ ಅಲೆ ಜೋರಾಗಿದೆ. ಕೆಲ ಮಲ್ಟಿಫ್ಲೆಕ್ಸ್ ಮತ್ತು ಚಿತ್ರಮಂದಿರಗಳ ಮುಂಗಡ ಬುಕ್ಕಿಂಗ್‌ನಲ್ಲಿಯೇ ಗೆಲುವೆಂಬುದರ ಸ್ಪಷ್ಟ ಸೂಚನೆ ಕಂಡು ಚಿತ್ರ ತಂಡ ಹ್ಯಾಪಿ ಮೂಡಿನಲ್ಲಿದೆ!

ಈ ಚಿತ್ರದ ವಿತರಣಾ ಜವಾಬ್ದಾರಿ ಹೊತ್ತುಕೊಂಡಿರುವವರು ಜಾಕ್ ಮಂಜು. ಕೇವಲ ವಿತರಕ ಮಾತ್ರವಾಗಿರದೆ ಚಿತ್ರ ಶುರುವಾದಾಗಿಂದ ಈವರೆಗೂ ವಿವಿಧ ವಿಚಾರಗಳಲ್ಲಿ ಭಾಗಿಯಾಗಿರೋ ಮಂಜು ಅವರೇ ನಿರ್ಮಾಪಕ ಸೈಯದ್ ಅವರನ್ನು ಚಿತ್ರದ ಭಾಗವಾಗಿಸಿದ್ದಾರೆಂಬ ವಿಚಾರವೂ ಅವರ ಕಡೆಯಿಂದಲೇ ಹೊರ ಬಿದ್ದಿದೆ.
ಮುಗುಳುನಗೆ ಚಿತ್ರ ಆರಂಭದಲ್ಲಿ ಯೋಗರಾಜ್ ಮೂವೀಸ್ ಮತ್ತು ಗೋಲ್ಡನ್ ಮೂವೀಸ್ ಅಡಿಯಲ್ಲಿ ಶುರುವಾಗಿತ್ತು. ಆದರೆ ಆ ಹೊತ್ತಿಗಾಗಲೇ ನೋಟು ಅಮಾನ್ಯೀಕರಣವಾದ್ದರಿಂದ ಚಿತ್ರತಂಡ ಹಣ ಕಾಸಿನ ಮುಗ್ಗಟ್ಟು ಎದುರಿಸಿತ್ತು. ಆಗ ಇನ್ನೋರ್ವ ನಿರ್ಮಾಪಕರ ನೆರವು ಬೇಕೆಂದಾಗ ಜಾಕ್ ಮಂಜು ಅವರೇ ಕರೆ ತಂದಿದ್ದು ಸೈಯದ್ ಅವರನ್ನು.
ಈವತ್ತಿಗೆ ಸೈಯದ್ ಕೂಡಾ ಒಂದು ಚೆಂದದ ಚಿತ್ರ ನಿರ್ಮಾಣ ಮಾಡಿದ ಖುಷಿಯಲ್ಲಿದ್ದಾರೆ. ಸಾಮಾನ್ಯವಾಗಿ ಕನ್ನಡ ಚಿತ್ರಗಳಿಗೆ ಆರಂಭದಲ್ಲಿಯೇ ಥೇಟರುಗಳ ಸಮಸ್ಯೆ ಎದುರಾಗೋದು ಮಾಮೂಲು. ನಿರ್ಮಾಪಕರು ಮತ್ತು ವಿತರಕರು ಥೇಟರು ಮಾಲೀಕರೊಂದಿಗೆ ಗುದ್ದಾಡೋದೂ ಕೂಡಾ ಅಷ್ಟೇ ಮಾಮೂಲು. ಪರಭಾಷಾ ಚಿತ್ರಗಳಿಗೇ ಹೆಚ್ಚಾಗಿ ಮಣೆ ಹಾಕೋ ಕೆಲ ಥೇಟರು ಮಾಲೀಕರೇ ಈಗ `ನಮಗೂ ಒಂದೆರಡಯ ಶೋ ಕೊಡಿ ಅಂತ ತಾವೇ ಬೇಡಿಕೆ ಇಡುತ್ತಿರೋದು ಮುಗುಳುನಗೆಯ ಖದರ್ರನ್ನು ಸಾಬೀತು ಮಾಡುತ್ತಿದೆ.
ರಾಜ್ಯದ ನಾನಾ ಕಡೆಗಳಲ್ಲಿ ಚಿತ್ರಕ್ಕೆ ಬೇಡಿಕೆ ಇದೆಯಾದರೂ ಮಲ್ಟಿಪ್ಲೆಕ್ಸ್ ಸೇರಿ ಇನ್ನೂರ ಐವತ್ತು ಚಿತ್ರಮಂದಿರಗಳಲ್ಲಿ ಮುಗುಳುನಗೆ ಅರಳಿಕೊಳ್ಳಲಿದೆ. ಹೊರ ರಾಜ್ಯಗಳ ಹದಿನೆಂಟಕ್ಕೂ ಹೆಚ್ಚು ಕಡೆಗಳಲ್ಲಿಯೂ ಈ ಚಿತ್ರ ತೆರೆ ಕಾಣಲಿದೆ. ಇನ್ನುಳಿದಂತೆ ದುಬೈ ಸೇರಿದಂತೆ ಹಲವಾರು ದೇಶಗಳಿಂದ ಬೇಡಿಕೆ ಇದ್ದರೂ ಹದಿನೈದು ದಿನದ ಬಳಿಕ ಅಲ್ಲಿ ಬಿಡುಗಡೆ ಮಾಡಲು ಜಾಕ್ ಮಂಜು ನಿರ್ಧರಿಸಿದ್ದಾರಂತೆ.

Leave a Reply

Your email address will not be published. Required fields are marked *


CAPTCHA Image
Reload Image