One N Only Exclusive Cine Portal

ಪಡ್ಡೆಹೈಕ್ಳಿಗೆ ಜಗ್ಗಣ್ಣನ ಕಿವಿಮಾತು!

ಅದೇನೇ ಸಾಮಾಜಿಕ ಪಲ್ಲಟಗಳು ಸಂಭವಿಸಿದರೂ ಅದಕ್ಕೆ ಸಡನ್ನಾಗಿ ಫೇಸ್ ಬುಕ್ ಮೂಲಕ ಪ್ರತಿಕ್ರಿಯಿಸುವವರು ನವರಸ ನಾಯಕ ಜಗ್ಗೇಶ್. ಯದ್ವಾತದ್ವಾ ಬೈಕ್ ಓಡಿಸಿ ಹತ್ತೊಂಬತ್ತು ವರ್ಷದ ವಿದ್ಯಾರ್ಥಿಯೊಬ್ಬ ಶೇಷಾದ್ರಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ಪ್ರಾಣ ತೆತ್ತ ದಾರುಣದ ಬಗ್ಗೆ ಜಗ್ಗೇಶ್ ಪ್ರತಿಕ್ರಿಯಿಸಿ ಯುವ ಸುಮುದಾಯಕ್ಕೆ ಒಂದಷ್ಟು ಬುದ್ಧಿ ಮಾತನ್ನೂ ರವಾನಿಸಿದ್ದಾರೆ.

ಈಗಷ್ಟೇ ಕಣ್ಣು ಬಿಡುತ್ತಿರೋ ಹುಡುಗರ ಮೇಲೆ ಒಡಹುಟ್ಟಿದವರು, ಹೆತ್ತವರು ಮತ್ತು ದೇಶದ ಜವಾಬ್ದಾರಿಗಳಿರುತ್ತವೆ. ಮೊದಲು ಜವಾಬ್ದಾರಿ ಅರಿತು ನಿಮ್ಮ ಕಾಲ ಮೇಲೆ ನಿಂತುಕೊಳ್ಳಿ. ಹಾಗಾದಾಗ ನಿಮಗೆ ನೀವೇ ಚಕ್ರವರ್ತಿಯಂತಾಗುತ್ತೀರಿ. ಆ ನಂತರ ಸಂಗಾತಿಯ ಬಗ್ಗೆ ಕನಸು ಕಾಣಿ. ಆ ವಿಚಾರವಾಗಿ ಮುಂದುವರೆಯಿರಿ.
ಅದು ಬಿಟ್ಟು ಯಾರನ್ನೋ ಮೆಚ್ಚಿಸಲೆಂದು ವ್ಹೀಲಿಂಗ್‌ನಂಥಾ ದುಃಸ್ಸಾಹಸಕ್ಕೆ ಕೈ ಹಾಕಿದರೆ ಫಲಿತಾಂಶ ಘೋರವಾಗಿರುತ್ತದೆ. ನೋಡಿ, ಈಗ ಬಾಳಿ ಬದುಕಬೇಕಿದ್ದ ಹತ್ತೊಂಬತ್ತು ವರ್ಷದ ಹುಡುಗ ಹೆಣವಾಗಿದ್ದಾನೆ. ಆದರೆ ಅದುವರೆಗೆ ಜೊತೆಗಿದ್ದ ಒಬ್ಬನೇ ಒಬ್ಬ ಸಹಪಾಠಿಯೂ ಆತನ ಶವ ಎತ್ತಲೂ ಬರಲಿಲ್ಲ. ಬಂದಿದ್ದು ಶೇಶಾದ್ರಿಪುರ ಠಾಣೆಯ ಎಸ್ಸೈ ಕಾಂತರಾಜ್. ಕಣ್ಣೀರ ಕೋಡಿ ಹರಿಸಿದ್ದು ಹೆತ್ತವರು!
ಈಗ ಯೋಚಿಸಿ, ಇಂಥಾದ್ದರಿಂದ ನಷ್ಟ ಯಾರಿಗೆ? ಮೊದಲು ಹೆತ್ತವರಿಗಾಗಿ, ದೇಶಕ್ಕಾಗಿ ಬಾಳಿ. ಸಂಚಾರಿ ನಿಯಮಗಳನ್ನು ಪಾಲಿಸಿ ನೀವು ಸುರಕ್ಷಿತವಾಗಿರೋದರ ಮೂಲಕ ಪರರಿಗೂ ಮಾದರಿಯಾಗಿ…

Leave a Reply

Your email address will not be published. Required fields are marked *


CAPTCHA Image
Reload Image