One N Only Exclusive Cine Portal

ಪ್ರಕಾಶನ ಬುಡದಲ್ಲಿ ಭಯದ ಬುಲ್ಲೆಟ್ಟು ಕಿತ್ತುಕೊಂಡಿದೆ!

`ದೊಡ್ಡ ನಟನ ಸಣ್ಣತನವನ್ನ ಬಯಲು ಮಾಡುತ್ತೇನೆ. ಸ್ಯಾಂಡಲ್‌ವುಡ್‌ನಲ್ಲಿ ಭಿನ್ನಮತ, ಗುಂಪುಗಾರಿಕೆಗೆ ಕಾರಣ ಯಾರು ಅಂತ ಮಾಧ್ಯಮಗಳಿಗೆ ನಾಳೆ ಹೇಳ್ತೀನಿ. ದೀಪ ಆರುವ ಮೊದಲು ಜೋರಾಗಿ ಉರಿಯುತ್ತೆ. ನೋಡ್ತಿರಿ ನಾಳೆ ಚಿತ್ರರಂಗದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಯಾಗುತ್ತೆ… ಹೀಗೊಂದು ಪೆಕರು ಮಾತಿನ ಮೂಲಕವೇ ಅದ್ಯಾವುದೋ ಮೂಲೆಯಲ್ಲಿ ಜೋಮು ಹಿಡಿದು ಮಲಗಿದ್ದ ಕರಡಿಯಂತೆ ಥಟಕ್ಕನೆದ್ದು ಸುದ್ದಿ ವಾಹಿನಿಯೊಂದಕ್ಕೆ ಬೊಜ್ಜು ಮೈ ಕುಲುಕಿಸಿ ಮಾತಾಡಿದವನು ಬುಲೆಟ್ ಪ್ರಕಾಶ.

ಈ ಬುಲೆಟ್ಟಿನ ಬುಡದಲ್ಲಿರೋ ಬಗ್ಗಡ ಎಂಥಾದ್ದೆಂಬುದು ಗಾಂಧಿನಗರಕ್ಕೇ ಗೊತ್ತಿರೋ ವಿಚಾರ. ಒಂದು ಕಾಲದಲ್ಲಿ ತನ್ನ ಅಗಾಧ ದೇಹವನ್ನೇ ವೆಪನ್ನಿನಂತೆ ಬಳಸಿಕೊಂಡು ಕಾಟನ್ ಪೇಟೆ ಸೀಮೆಯಲ್ಲಿ ಸಣ್ಣಗೆ ಪುಢಾರಿಗಿರಿ ಮಾಡಿಕೊಂಡಿದ್ದ ಬುಲ್ಲೆಟ್ಟು ನಟ ಅಂತ ಗುರುತಿಸಿಕೊಂಡಿದ್ದು ಸ್ಯಾಂಡಲ್ ವುಡ್ಡಿನ ಅಸಲೀ ದುರಂತ. ಇಂಥವನು ಎಂಥಾ ಡಬಲ್ ಗೇಮ್ ಆಸಾಮಿ ಎಂಬ ವಿಚಾರ ಚಿತ್ರರಂಗದ ಎಲ್ಲರಿಗೂ ಗೊತ್ತಿರೋ ವಿಚಾರವೇ. ಈ ಥರದ ವ್ಯಕ್ತಿತ್ವದ ಬುಲ್ಲೆಟ್ಟು ಸದ್ಯ ಗುರಿ ಮಾಡಿದ್ದದ್ದು ಕಿಚ್ಚಾ ಸುದೀಪ್‌ರನ್ನು. ಅಷ್ಟಕ್ಕೂ ಕಿಚ್ಚನನ್ನು ಬಹಿರಂಗವಾಗಿ ಎದುರು ಹಾಕಿಕೊಳ್ಳುವ ತಾಕತ್ತು, ಹರಕತ್ತು ಪ್ರಕಾಶನಿಗೇನಿದೆ? ಅಂತ ಹುಡುಕ ಹೋದರೆ ಬುಲೆಟ್ಟು ಪ್ರಕಾಶನ ಬಕೀಟು ವರಸೆ ಸ್ಪಷ್ಟವಾಗಿ ಜಾಹೀರಾಗುತ್ತದೆ!
ಈ ಬುಲೆಟ್ಟು ಮೊನ್ನೆ ದಿನ ಏಕಾಏಕಿ ಕನ್ನಡ ಚಿತ್ರರಂಗದ ದೊಡ್ಡ ನಟನ ಸಣ್ಣತನವನ್ನು ಬಹಿರಂಗಗೊಳಿಸೋದಾಗಿ ಫೇಸ್ ಬುಕ್ಕಲ್ಲಿ ಮುಲುಕ್ಯಾಡಿದ್ದ. ಇದನ್ನು ಕಂಡಿದ್ದೇ ಸುದ್ದಿ ವಾಹಿನಿಯೊಂದು ಸಂಪರ್ಕಿಸಿದಾಗ ನಾಳೆ ತಾನು ಹಾಕಲಿರೋ ಬಾಂಬಿನಿಂದ ಇಡೀ ಚಿತ್ರರಂಗವೇ ಬೆಚ್ಚಿ ಬೀಳುತ್ತೆ ಎಂಬರ್ಥದಲ್ಲಿ ಒದರಾಡಿದ್ದ. ನಂತರ ಚಾಲಾಕಿ ಆಂಕರ್ ಕೆದಕುತ್ತಲೇ ಇವನ ಟಾರ್ಗೆಟ್ ಕಿಚ್ಚಾ ಸುದೀಪ್ ಎಂಬ ವಿಚಾರ ಎಲ್ಲರಿಗೂ ಸ್ಪಷ್ಟವಾಗಿತ್ತು. ಆದರೆ ಮಾರನೇ ದಿನ ನೂರೈವತ್ತೂ ಚಿಲ್ಲರೆ ಕೆಜಿ ತೂಕದ ಬುಲ್ಲೆಟ್ಟಿನ ಛತ್ರಿ ಬುದ್ಧಿ ಜಾಹೀರಾಗಿತ್ತು. ಬಾಂಬು ಹಾಕಲು ನಿಂತಿದ್ದ ಪ್ರಕಾಶನ ಬುಡದಲ್ಲಿ ಅಕ್ಷರಶಃ ಭಯ ಕಿತ್ತುಕೊಂಡಿತ್ತು. ಯಾಕೆಂದರೆ, ಕಿಚ್ಚಾ ಸುದೀಪ್ ಅಭಿಮಾನಿಗಳು ಆ ರೇಂಜಿಗೆ ಮಾಂಜಾ ಕೊಟ್ಟಿದ್ದರು. ಚಿತ್ರರಂಗದ ಕೆಲ ಹಿರಿಯರು ಫೋನು ಮಾಡಿ ಬುಲ್ಲೆಟ್ಟಿನ ಮುಖಕ್ಕೆ ಕ್ಯಾಕರಿಸಿ ಉಗಿದಿದ್ದರು. ಇದೆಲ್ಲದರಿಂದ ಕಂಗಾಲಾದ ಪ್ರಕಾಶ ಮಾರನೇ ದಿನ ಜೋಲು ಮೋರೆ ಹಾಕಿಕೊಂಡು `ನಾನು ಎಮೋಷನಲ್ ಆಗಿ ಹಾಗೆಲ್ಲ ಮಾತಾಡಿದೆ. ಯಾರನ್ನೂ ನೋಯಿಸೋ ಉದ್ದೇಶ ನಂಗಿಲ್ಲ. ಯಾರಿಗಾದ್ರೂ ನೋವಾಗಿದ್ರೆ ಕ್ಷಮೆ ಕೇಳುತ್ತೇನೆ ಅಂತ ಮಳ್ಳನಂತಾಡಿದ್ದಾನೆ. ಅದೆಲ್ಲ ಇರಲಿ ಬಿಡಯ್ಯ ಬುಲೆಟ್ಟು, ನಿನ್ನ ನೋವೇನು ಹೇಳು ಅಂದರೆ ಆಗಲೂ ಪ್ರಕಾಶನ ಜೋಲು ಮೋರೆಯಲ್ಲಿ ಯಾವ ಗೆರೆಗಳೂ ಕದಲುತ್ತಿಲ್ಲ.
ಅಷ್ಟಕ್ಕೂ ಬುಲೆಟ್ ಪ್ರಕಾಶನೆಂಬ ಅರೆಬೆಂದ ನಟ ಹೀಗೆ ಏಕಾಏಕಿ ಎಗರಾಡಲು ಕಾರಣವಾಗಿದ್ದದ್ದು ಅವನ ಪ್ರಚಾರದ ಖಯಾಲಿ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್‌ರನ್ನು ಹೇಗಾದರೂ ಓಲೈಸಿಕೊಂಡು ಮತ್ತೆ ಅವರ ಕ್ಯಾಂಪಿಗೆ ಸೇರಿಕೊಳ್ಳುವ ಹುನ್ನಾರ. ಬುಲೆಟ್ ಪ್ರಕಾಶ್ ವಿಚಾರದಲ್ಲಿ ದರ್ಶನ್ ಮೊದಲಿನಿಂದಲೂ ಉದಾರ ಮನೋಭಾವ ಹೊಂದಿದ್ದಾರೆ. ತಾವು ನಟಿಸುವ ಪ್ರತಿಯೊಂದು ಚಿತ್ರದಲ್ಲೂ ಬುಲೆಟ್ ಪ್ರಕಾಶ್‌ಗೆ ಖಾಯಂ ಅವಕಾಶವಿರುವಂತೆ ನೋಡಿಕೊಂಡು ಬಂದಿದ್ದಾರೆ. ಛಾನ್ಸು ಕೊಡಿಸುವುದರ ಜೊತೆಗೆ ಅತ್ಯುತ್ತಮ ಸಂಭಾವನೆಯನ್ನೂ ಕೊಡಿಸಿದ್ದಾರೆ. ಹೆಚ್ಚೂಕಮ್ಮಿ ಬುಲೆಟ್ ಪ್ರಕಾಶ್ ಎಂಬ ನಟ ಈವರೆಗೆ ಚಿತ್ರರಂಗದಲ್ಲಿ ಉಳಿಯಲು ಛಾಲೆಂಜಿಂಗ್ ಸ್ಟಾರ್ ದರ್ಶನ್ ಪರೋಕ್ಷವಾಗಿ ಕಾರಣರಾಗಿದ್ದಾರೆ. ಇಂಥ ದರ್ಶನ್ ಸಹೋದರ ದಿನಕರ್ ಜೊತೆಗೇ ಕಿತ್ತಾಡಿಕೊಂಡ ಬುಲೆಟ್ಟನ್ನು ದರ್ಶನ್ ಪಾಳೆಯ ಬುಡಕ್ಕೊದ್ದು ಹೊರ ಹಾಕಿತ್ತು. ಆ ನಂತರ ನಟನೆಗೂ ಅವಕಾಶವಿಲ್ಲದೆ ನೊಣ ಹೊಡೆಯಲಾರಂಭಿಸಿದ್ದ ಪ್ರಕಾಶನಿಗೆ ಆಪ್ಯಾಯವಾಗಿ ಕಂಡಿದ್ದು ದರ್ಶನ್ ಮತ್ತು ಸುದೀಪ್ ನಡುವೆ ಹೊತ್ತಿಕೊಂಡಿದ್ದ ಇತ್ತೀಚಿನ ವೈಮನಸ್ಯ!
ಇಂಥಾ ಸಂದರ್ಭದಲ್ಲಿ ಸುದೀಪ್ ಅವರ ಮೇಲೆ ಹೀನಾ ಮಾನ ಆರೋಪ ಮಾಡಿ ಪ್ರಚಾರ ಗಿಟ್ಟಿಸಿಕೊಳ್ಳುವುದು, ಸುದೀಪ್ ಅಭಿಮಾನಿಗಳು ಅಟ್ಟಾಡಿಸಲು ಬಂದಾಗ ತನ್ನ ದೈತ್ಯ ದೇಹವನ್ನು ಡಿ ಕಂಪೆನಿಯೊಳಗೆ ಲ್ಯಾಂಡು ಮಾಡಿ ದರ್ಶನ್ ಮುಂದೆ ನಿಂತು `ಗೆಳೆಯಾ, ಈವತ್ತು ನಿಂಗೂ ನಂಗೂ ಹಳಸಿಕೊಂಡಿರಬಹುದು. ಆದ್ರೆ ಯಾರಾದ್ರೂ ನಿನ್ ಬಗ್ಗೆ ಏನೇನೋ ಅಂತಿದ್ರೆ ಕಳ್ಳು ಚುರ್ ಅಂದಂಗಾಯ್ತದೆ ಅಂತೆಲ್ಲ ಸೆಂಟಿಮೆಂಟ್ ಕ್ರಿಯೇಟ್ ಮಾಡಿ ದರ್ಶನ್‌ಗೆ ಹತ್ತಿರಾಗೋ ಎಲ್ಲ ತಯಾರಿಯನ್ನೂ ನಡೆಸಿಕೊಂಡಿದ್ದ. ಆದರೆ ಚಿತ್ರರಂಗದ ಹಿರಿಯರು ಯಾವಾಗ ಮುಚ್ಚಿಕೊಂಡಿರುವಂತೆ ಗದರಿದರೋ ಆಗ ಪ್ರಕಾಶನ ಬುಡದಲ್ಲಿ ಭಯದ ಬುಲ್ಲೆಟ್ಟು ಕಿತ್ತುಕೊಂಡಿದೆ.
ಯಾವಾಗ ಪ್ರಕಾಶನನ್ನು ದರ್ಶನ್ ಟೀಮು ಹೊರ ಹಾಕಿತು ನೋಡಿ? ಆವಾಗಿನಿಂದ ಚಿತ್ರರಂಗದಲ್ಲಿ ಯಾರೆಂದರೆ ಯಾರೂ ಇವನಿಗೆ ಮರ್ಯಾದೆ ಕೊಡುತ್ತಿಲ್ಲ. ಅವಕಾಶವೂ ಗೋತಾ ಹೊಡೆದಿದೆ. ಇದಾದ ನಂತರ ಸಾಕಷ್ಟು ಸಲ ಹತ್ತಿರಾಗಲು ನೋಡಿದರೂ ದರ್ಶನ್ ಅವಾಯ್ಡ್ ಮಾಡುತ್ತಿದ್ದಾರೆ. ಅಷ್ಟರಲ್ಲಿಯೇ ಈತ ಸುದೀಪ್ ವಿರುದ್ಧ ತೊಡೆ ತಟ್ಟುವ ವ್ಯರ್ಥ ಪ್ರಯತ್ನ ಮಾಡಿ ಇರೋ ಅನ್ನಕ್ಕೂ ಮಣ್ಣು ಹಾಕಿಕೊಂಡಿದ್ದಾನೆ. ಇಷ್ಟಕ್ಕೂ ಬುಲೆಟ್ ಪ್ರಕಾಶ್‌ಗೆ ದರ್ಶನ್ ಅಥವಾ ಸುದೀಪ್ ಬಗ್ಗೆ ಮಾತಾಡುವ ಯೋಗ್ಯತೆಯಾದರೂ ಎಲ್ಲಿದೆ? ಹೀಗಿರುವಾಗ ಇನ್ನು ಮುಂದೆ ಬುಲೆಟ್ ಪ್ರಕಾಶನಿಗೆ ಈಶ್ವರಪ್ಪನ ತೊಪ್ಪೆ ಬಳಿಯುವ ಕೆಲಸವೇ ಗಟ್ಟಿ!

Leave a Reply

Your email address will not be published. Required fields are marked *


CAPTCHA Image
Reload Image