One N Only Exclusive Cine Portal

ಫಾರಿನ್ನಿಗೆ ಹೊರಟರು ಪುನೀತ್!

ಇತ್ತೀಚೆಗಷ್ಟೇ ಪುನೀತ್ ರಾಜ್ ಕುಮಾರ್ ಅವರ ಪರ್ಸನಲ್ ಲೈಫ್ ಬಗ್ಗೆ ‘ಸಿನಿಬಜ಼್’ ವಿಶೇಷ ಮಾಹಿತಿಯನ್ನು ನೀಡಿತ್ತು. ಈಗ ಅದಕ್ಕೆ ಪೂರಕವಾದ ಮತ್ತೊಂದು ವಿಚಾರ ಹೇಳ್ತೀವಿ ಕೇಳಿ…
ಪ್ರತೀ ವರ್ಷ ಬೇಸಿಗೆ ರಜೆ ಹೊತ್ತಿಗೆ ಬಿಡುವು ಮಾಡಿಕೊಂಡು ಮಕ್ಕಳೊಂದಿಗೆ ಪ್ರಯಾಣ ಹೊರಡೋದು ಪುನೀತ್ ಅಭ್ಯಾಸ. ಕಳೆದ ವರ್ಷ ಇದೇ ಸಮಯಕ್ಕೆ ರಣವಿಕ್ರಮ ಸಿನಿಮಾ ಬಿಡುಗಡೆಯಾಗಿತ್ತು. ಆ ಸಂದರ್ಭದಲ್ಲೂ ಪುನೀತ್ ವಿದೇಶ ಪ್ರಯಾಣದಲ್ಲಿದ್ದರು. ಇದೇ ತಿಂಗಳು ೨೨ಕ್ಕೆ ‘ಚಕ್ರವ್ಯೂಹ’ ತೆರೆಗೆ ಬರೋದು ಖಚಿತವಾಗಿದೆ. ಆದರೆ ಪುನೀತ್ ಏಪ್ರಿಲ್ ೧೩ಕ್ಕೆ ಫಾರಿನ್ ಟೂರ್ ಹೊರಟಿದ್ದಾರೆ. ಕಡೇಪಕ್ಷ ಎರಡು ವಾರಗಳಾದರೂ ಪ್ರವಾಸಕ್ಕೆ ಮೀಸಲಿರೋದರಿಂದ, ಸಿನಿಮಾ ಬಿಡುಗಡೆ ಸಮಯದಲ್ಲಿ ಚಿತ್ರತಂಡಕ್ಕೆ ಪುನೀತ್ ಗೈರು ಹಾಜರಿ ಕಾಡಬಹುದು.

Leave a Reply

Your email address will not be published. Required fields are marked *


CAPTCHA Image
Reload Image