One N Only Exclusive Cine Portal

ಫಾರ್ಚುನರ್ ಚಿತ್ರದ ಮೋಷನ್ ಪೋಸ್ಟರ್ ಅನಾವರಣ!

ಮಂಜುನಾಥ್ ನಿರ್ದೇಶನದ, ದಿಗಂತ್, ಸೋನುಗೌಡ ಮುಂತಾದವರು  ನಟಿಸಿರುವ ‘ಫಾರ್ಚುನರ್ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಯಾವುದೇ ಸದ್ದುಗದ್ದಲಗಳೂ ಇಲ್ಲದೆ ಅರ್ಧಕ್ಕೂ ಹೆಚ್ಚು ಭಾಗ ಚಿತ್ರೀಕರಣ ಪೂರೈಸಿಕೊಂಡಿರೋ ಚಿತ್ರ ತಂಡ ಇನ್ನೇನು ಕೆಲವೇ ದಿನಗಳಲ್ಲಿ ಚೆಂದದ ಹಾಡುಗಳನ್ನು ಕೇಳಿಸೋ ಖುಷಿಯಲ್ಲಿದೆ. ಇದೀಗ ಮೋಷನ್ ಪೋಸ್ಟರ್ ಬಿಡುಗಡೆ ಮಾಡೋ ನೆಪದಲ್ಲಿ ಚಿತ್ರತಂಡ ಕೆಲವಾರು ಅಂಶಗಳನ್ನು ಪ್ರೇಕ್ಷಕರ ಮುಂದೆ ಬಿಚ್ಚಿಟ್ಟಿದೆ.

ಅಂದಹಾಗೆ ಈ ಚಿತ್ರವನ್ನು ಕಾಸ್ಮೆಟಿಕ್ ಕಂಪೆನಿ ಮಾಲೀಕರಾದ ರಾಜೇಶ್, ಭರತ್, ದಿನೇಶ್, ಆನಂದ್, ಸುರೇಂದ್ರ ನಿರ್ಮಾಣ ಮಾಡಿದ್ದಾರೆ. ಚೆಂದದೊಂದು ಕನ್ನಡ ಚಿತ್ರವನ್ನು ಮಾಡಬೇಕೆಂಬ ಬಹು ಕಾಲದ ಆಸೆ ಹೊತ್ತಿದ್ದ ಇವರೆಲ್ಲ ಪ್ರೇಕ್ಷಕರ ಮನ ಗೆಲ್ಲುವಂಥಾದ್ದೊಂದು ಚಿತ್ರ ನಿರ್ಮಾಣ ಮಾಡಿದ ಖುಷಿಯಲ್ಲಿದ್ದಾರೆ.

ಅಂದಹಾಗೆ ಈ ಚಿತ್ರ ಫ್ಯಾಮಿಲಿ, ಕಾಮಿಡಿ ಅಂಶಗಳನ್ನು ಒಳಗೊಂಡಿದೆಯಂತೆ. ಹಣ ಅಂತಸ್ತು ಮತ್ತು ಅಹಂಕಾರಗಳಿಂದಲೇ ಪ್ರೀತಿಯನ್ನು ಗೆದ್ದುಕೊಂಡ ಮನುಷ್ಯನೊಬ್ಬ ಪ್ರೀತಿಯನ್ನು ಉಳಿಸಿಕೊಳ್ಳಲು ಏನೇನೆಲ್ಲ ಬೇಕಾಗುತ್ತದೆ ಎಂಬ ಸೂಕ್ಷ್ಮ ವಿಚಾರದ ಸುತ್ತಲೇ ಈ ಚಿತ್ರದ ಕಥೆಯನ್ನು ರೋಚಕವಾಗಿ ಕಟ್ಟಿಕೊಡಲಾಗಿದೆಯಂತೆ. ಯಾವುದ್ಯಾವುದೋ ವಿಚಾರಗಳ ಬಗ್ಗೆ ಆಲೋಚಿಸುತ್ತಾ ಎನೇನೋ ಕನಸು ಕಂಡ ನಾಯಕನಿಗೆ ಎಂತೆಂಥಾ ಸ್ಥಿತಿಗಳೆದುರಾಗುತ್ತಾವೆಂಬುದನ್ನೂ ಈ ಚಿತ್ರದ ಮೂಲಕ ತೆರೆದಿಡಲಾಗಿದೆಯಂತೆ.
ಈ ಚಿತ್ರವನ್ನು ನಿರ್ದೇಶನ ಮಾಡುತ್ತಿರುವವರು ಮಂಜುನಾಥ್. ಇದು ಅವರ ಪಾಲಿಗೆ ಮೊದಲ ಅನುಭವ. ಮೂಲತಃ ಹೊಳೆನರಸೀಪುರದವರಾದ ಮಂಜುನಾಥ್ ರಂUಭೂಮಿಯಿಂದ ಬಂದವರು. ಚಿತ್ರರಂಗದಲ್ಲಿ ಒಂದಿಷ್ಟು ಕೆಲಸ ಮಾಡಿರೋ ಅವರು ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೆಶಕರಾಗಿದ್ದಾರೆ. 
ಈಗಾಗಲೇ ಬೆಂಗಳೂರಿನ ಸುತ್ತಮುತ್ತ ಎಪ್ಪತ್ತು ಭಾಗ ಚಿತ್ರೀಕರಣ ನಡೆಸಿರೋ ಫಾರ್ಚುನರ್ ಚಿತ್ರದ ಐದು ಹಾಡುಗಳಿಗೆ ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಆ ಆರು ಹಾಡುಗಳು ಇಷ್ಟರಲ್ಲೇ ಬಿಡುಗಡೆಯಾಗಲಿವೆಯಂತೆ. ಇನ್ನುಳಿದಂತೆ ಎಂ ಎಸ್ ನರಸಿಂಹಮೂರ್ತಿ ಸಂಭಾಷಣೆ, ಮಧುಸೂಧನ್ ಕ್ಯಾಮೆರಾ ಈ ಚಿತ್ರಕ್ಕಿದೆ.

Leave a Reply

Your email address will not be published. Required fields are marked *


CAPTCHA Image
Reload Image