One N Only Exclusive Cine Portal

ಫ್ರ್ರಾಡು ಪೂಜಾ ಇದೇನೇ ನಿನ್ನ ಪರಿಸ್ಥಿತಿ?!

ನಟಿ ಪೂಜಾಗಾಂಧಿಯ ಫ್ರಾಡ್ ಕೇಸುಗಳು ಒಂದರ ಹಿಂದೊಂದರಂತೆ ಜಾಹೀರಾಗುತ್ತಲೇ ಇವೆ. ಆದರೆ, ತನ್ನ ರಾಜಕೀಯ ಸೇರಿದಂತೆ ನಾನಾ ಸಂಪರ್ಕಗಳ ಮೂಲಕ ಲಕ್ಷ ಲಕ್ಷ ಮುಂಡಾ ಇಟ್ಟು, ನವರಂಗಿ ಆಟಗಳ ಮೂಲಕ ಬಚಾವಾಗುತ್ತಾ ಬಂದಿದ್ದ ಪೂಜಾ ಮೊನ್ನೆ ನಡೆದೊಂದು ಘಟನೆಯಿಂದ ಅಕ್ಷರಶಃ ಬೆಚ್ಚಿ ಬಿದ್ದಿದ್ದಾಳೆ. ಎಣ್ಣೆ ಪಾರ್ಟಿಯಲ್ಲಿ ತಂಗಿ ರಾಧಿಕಾ ಜೊತೆ ಲೈಟಾಗಿ ಟೈಟಾಗಿದ್ದ ಪೂಜಾ ಹತ್ತಾರು ಜನರೆದುರೇ ಮಹಾ ಅವಮಾನದಿಂದ ವಿಲಗುಟ್ಟಿದ್ದಾಳೆ!


ಒಂದ್ಯಾವುದೋ ಸಿನಿಮಾ ಘೋಷಣೆ ಮಾಡಿ, ಅದರದ್ದೊಂದು ಪೋಸ್ಟರು ಹಿಡಿದುಕೊಂಡೇ ಲಕ್ಷ ಲಕ್ಷ ಬಾಚುವ ಕಲೆ ಪೂಜಾಗೆ ಕರಗತ. ಹೀಗೆ ಸಾಲು ಸಾಲು ಪ್ರಾಜೆಕ್ಟುಗಳನ್ನು ಗೋತಾ ಹೊಡೆಸಿ ನಂತರ ಒಂದ್ಯಾವುದೋ ತೇಪೆ ಚಿತ್ರದ ನೆಪದಲ್ಲಿ ಸಾಲಗಾರರನ್ನೆಲ್ಲ ಕರೆದು ಗುಡ್ಡೆ ಹಾಕಿಕೊಂಡು ಮಂಗಾ ಮಾಡಿ ಕಳಿಸೋ ಕಲೆಯಲ್ಲಿಯೂ ಇವಳದ್ದು ಮಾಸ್ಟರ್ ಮೈಂಡು. ಆದರೆ ಮೊನ್ನೆ ಮಾತ್ರ ಪೂಜಾಳ ತಂತ್ರಗಾರಿಕೆ ಖುದ್ದು ಅವಳಿಗೇ ತಿರುಮಂತ್ರ ತೀಡಿದೆ.
ಆಂಧ್ರದಲ್ಲಿ ಮಾರ್ಕೆಟ್ಟು ಕಳೆದುಕೊಂಡಿರುವ ಜೆಡಿ ಚಕ್ರಚರ್ತಿ ಎನ್ನುವ ನಟ ಮತ್ತು ಪೂಜಾ ಗಾಂಧಿ ಸೇರಿ ಕನ್ನಡಿಗರನ್ನು ಯಾಮಾರಿಸಲು ಸಖತ್ತಾಗಿ ಸ್ಕೆಚ್ ಹಾಕಿದ್ದಾರೆ. ಇದೇ ಜೆಡಿ ಚಕ್ರವರ್ತಿ ಹಿಂದೊಮ್ಮೆ ‘ಕಾಂಟ್ರಾಕ್ಟ್’ ಹೆಸರಿನ ತೆಲುಗು ಸಿನಿಮಾವನ್ನು ಕನ್ನಡಕ್ಕೆ ಡಬ್ ಮಾಡಿ ವಂಚಿಸಲು ಹೋಗಿ ಸಿಗೇಬಿದ್ದಿದ್ದ. ಈಗ ಮತ್ತೆ ಪೂಜಾ ಗಾಂಧಿಯೊಡನೆ ಎಂಟ್ರಿ ಕೊಟ್ಟಿರುವ ಜೇಡಿ ತಾನು ಅದಾಗಲೇ ತೆಲುಗಿನಲ್ಲಿ ಸುತ್ತಿಟ್ಟಿರುವ ಸಿನಿಮಾಗಳನ್ನು ತಂದು ಕನ್ನಡದಲ್ಲಿ ಹೊಸದಾಗಿ ಶುರು ಮಾಡ್ತಿದೀವಿ ಅಂತಾ ಪುಂಗುತ್ತಿದ್ದಾನೆ.

ಈ ಸಿನಿಮಾಗಳ ಕುರಿತಾಗಿ ಪೂಜಾ ಗಾಂಧಿ ಅಶೋಕಾ ಹೊಟೇಲಿನಲ್ಲಿ ಪತ್ರಿಕಾ ಗೋಷ್ಟಿ ಕರೆದಿದ್ದಳು. ನಂತರ ರಾತ್ರಿ ಹೊತ್ತಲ್ಲಿ ಒಂದು ಎಣ್ಣೆ ಪಾರ್ಟಿಯನ್ನೂ ಅರೇಂಜ್ ಮಾಡಿದ್ದಳು. ಈ ಪಾರ್ಟಿಯಲ್ಲಿ ತನ್ನೆಲ್ಲಾ ಸಾಲಗಾರರಿಗೂ ಅಚ್ಚುಕಟ್ಟಾದ ವ್ಯವಸ್ಥೆಯನ್ನೇ ಮಾಡಿದ್ದಳು. ಆ ಸಾಲಿನಲ್ಲಿ ಕಪಾಲಿ ಮೋಹನ್ ಕೂಡಾ ಆಸೀನರಾಗಿದ್ದರು. ಪೂಜಾ ಗಾಂಧಿ ರಾಧಿಕಾಳ ಸಮೇತ ನೀಟಾಗಿ ಎಣ್ಣೆ ಹೊಡೆದು ವಾಲಾಡುತ್ತಿದ್ದಾಗಲೇ ಕಪಾಲಿ ಮೋಹನ್ ಕಡೆಯ ಒಂದಷ್ಟು ಹುಡುಗರು ಏಕಾಏಕಿ ರಾಧಿಕಾ ಮೇಲೆ ಮುರಕೊಂಡು ಬಿದ್ದು ಎಳೆದಾಡಿದ್ದರು. ಇದರಿಂದ ಎಣ್ಣೆ ಏಟು ಇಳಿದಂತಾಗಿ ರಾಧಿಕಾ ಅತ್ತೂ ಕರೆದು ರಂಪಾಟ ಮಾಡಿದ್ದೇ ಇಡೀ ಎಣ್ಣೆ ಪಾರ್ಟಿ ಅಲ್ಲೋಲಕಲ್ಲೋಲವಾಗಿತ್ತು!
ನಿಜ, ಕಪಾಲಿ ಮೋಹನ್ ಕಡೆಯವರು ಹೆಣ್ಣೊಬ್ಬಳ ಮೇಲೆ ಈ ಪರಿ ಮುರಕೊಂಡು ಬಿದ್ದದ್ದು ತಪ್ಪೇ. ಆದರೆ ಈ ಹಠಾತ್ ಘಟನಾವಳಿಯ ಹಿಂದೆ ಪೂಜಾ ಗಾಂಧಿಯ ಫ್ರಾಡು ಕಸುಬೇ ಪ್ರಧಾನ ಪಾತ್ರ ವಹಿಸಿದೆ ಎಂಬುದು ಗಮನೀಯ ವಿಚಾರ!
ಪೂಜಾ ಕಪಾಲಿ ಬಳಿ ಕೂಡಾ ಸಿನಿಮಾ ಮಾಡೋ ನೆವದಲ್ಲಿ ಕಾಸು ಪೀಕಿದ್ದಳು. ಇದಲ್ಲದೇ ದೊಡ್ಡ ಮೊತ್ತದಲ್ಲಿ ಚೀಟಿ ಕಾಸನ್ನು ಬಾಕಿ ಉಳಿಸಿಕೊಂಡಿದ್ದಳು. ಆದರೆ ಯಾವ ಕಾಸನ್ನೂ ವಾಪಾಸು ಕೊಡದೆ ತಾನು ಒಂದೇ ಏಟಿಗೆ ಹತ್ತಾರು ಸಿನಿಮಾ ಮಾಡೋದಾಗಿ ತಿರ್ಕೆ ದೌಲತ್ತು ತೋರಿಸಿದರೆ ಸಾಲ ಕೊಟ್ಟವರಿಗೆ ಉರಿ ಕಿತ್ತುಕೊಳ್ಳದಿರುತ್ತಾ? ಅದೇ ಉರಿ ಸದರಿ ಪಾರ್ಟಿಯಲ್ಲಿ ಅಲ್ಲೋಲ ಕಲ್ಲೋಲದ ಜೊತೆಗೆ ಅಸಹ್ಯ ಸೃಷ್ಠಿಯಾಗಲು ಕಾರಣ!
ವ್ಯವಹಾರದ ವಿಚಾರ ಹಾಳು ಬೀಳಲಿ. ಸಂಬಂಧಗಳ ವಿಚಾರವನ್ನೂ ಫ್ರಾಡ್‌ಗಿರಿಗೇ ಬಳಸಿಕೊಳ್ಳುವುದು ಪೂಜಾಳ ಬೆರಕೆ ವ್ಯಕ್ತಿತ್ವಕ್ಕೆ ಸ್ಪಷ್ಟ ಸಾಕ್ಷಿ. ಆನಂದ್ ಗೌಡ ಎಂಬಾತನೊಂದಿಗೆ ಎಂಗೇಜ್‌ಮೆಂಟ್ ಮಾಡಿಕೊಂಡು ಅದು ಮುರಿದು ಬಿದ್ದ ನಂತರ ರೌಡಿ ಬುಜ್ಜಿ ತಮ್ಮ ಪ್ರಶಾಂತ್ ಎಂಬಾತನ ಜೊತೆ ಹಲ್ಕಿರಿದವಳು ಪೂಜಾ. ಇನ್ನೇನು ಇಷ್ಟರಲ್ಲೇ ಮದುವೆ ಎಂಬಂತೆ ಪೋಸು ಕೊಟ್ಟದ್ದೇ ಬಂತು, ಈ ಸಂಬಂಧವೂ ಹಳಸಿಕೊಂಡಿದೆ ಅನ್ನಲಾಗುತ್ತಿದೆ. ಈಕೆಯ ಒಂದಷ್ಟು ಹಳೇ ಸಾಲಗಳನ್ನು ತೀರಿಸಿದ್ದ ಪ್ರಶಾಂತ್ ಪೂಜಾಗೆ ಕೊಟ್ಟಿದ್ದ ಫಾರ್ಚುನರ್ ಕಾರನ್ನು ಕಿತ್ತುಕೊಂಡಿರೋ ಸುದ್ದಿಯಿದೆ. ಹೀಗಾಗಿ ರಾಜಕಾರಣಿಯೊಬ್ಬರ ಹೆಸರಿನಲ್ಲಿರುವ ಮೆಣಸಿನಕಾಯಿ ಬಣ್ಣದ ಕಾರಿನಲ್ಲಿ ಸದ್ಯ ಪೂಜಾ ಗಾಂಧಿ ಓಡಾಡುವಂತಾಗಿದೆ!


ಟ್ರಾವೆಲ್ಸ್ ಏಜೆನ್ಸಿ ಜೊತೆಗೆ ಕಿಮ್ಸ್ ಆಸ್ಪತ್ರೆಯಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿದ್ದ ಡಾ. ಕಿರಣ್ ನನ್ನು ಪಟ್ಟಾಗಿ ಮುಂಡಾಯಿಸಿದ್ದ ಪೂಜಾ ಆತನಿಂದಲೂ ದೂರಾಗಿದ್ದಳು. ಇನ್ನು ಈಕೆಯ ತಂಗಿ ರಾಧಿಕಾ ಈಗೊಂದೂವರೆ ವರ್ಷದ ಹಿಂದೆ ದೆಹಲಿಯಲ್ಲಿ ರಾಜಸ್ಥಾನ ಮೂಲದ ಬ್ಯುಸಿನೆಸ್ ಮನ್ ಒಬ್ಬನ ಜೊತೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಳು. ಸುಧಾಕರ್ ಎಂಬ ಆ ಆಸಾಮಿ ನಂತರ ಬೆಂಗಳೂರಿಗೆ ಬಂದು ಈ ಅಕ್ಕ ತಂಗಿಯ ಪ್ರವರ ಕೆದಕಿ ಸುಸ್ತಾಗಿ ಹೋಗಿದ್ದಾನಂತೆ. ಅಲ್ಲಿಗೆ ಪೂಜಾ ತಂಗ್ಯವ್ವನ ಎಂಗೇಜ್‌ಮೆಂಟೂ ಗೋತಾ ಹೊಡೆದು ಆಕೆಯೀಗ ಬೆಂಗಳೂರ್ ಟು ಬಾಂಬೆ ಟ್ರಿಪ್ಪು ಹೊಡೆಯುತ್ತಾ ಪ್ರೊಡ್ಯೂಸರ್‌ಗಳನ್ನು ಹಿಡಿದು ತಂದು ಅಕ್ಕನಿಗೆ ನೆರವಾಗುತ್ತಿದ್ದಾಳೆಂಬ ಮಾತುಗಳಿವೆ!
ಇನ್ನು ಹುಟ್ಟಾ ಕುಡುಕನಾದ ಪೂಜಾಳ ತಂದೆ ಪವನ್ ಗಾಂಧಿಯಂತೂ ಮಗಳ ಕೈಯಿಂದಲೇ ಒಂದಷ್ಟು ಲಕ್ಷ ದೇಬಿಕೊಂಡು ಬೆಂಗಳೂರು ತೊರೆದು ತಿಂಗಳುಗಳೇ ಕಳೆದಿವೆ. ಈ ಪೂಜಾ ಮಾತ್ರ ಸಾಲದ ಮೇಲೆ ಸಾಲ ಸುಳ್ಳಿನ ಮೇಲೆ ಸುಳ್ಳು ಹೇಳುತ್ತಾ ಕಾಲ ಕಳೆಯುತ್ತಿದ್ದಾಳೆ. ಮೊನ್ನೆ ನಡೆದ ಘಟನೆ ನೋಡಿದರೆ ಪೂಜಾಳ ನಸೀಬು ಖರಾಬಾಗುವ ಸಕಲ ಲಕ್ಷಣಗಳೂ ಢಾಳಾಗಿಯೇ ಗೋಚರಿಸುತ್ತಿವೆ.

Leave a Reply

Your email address will not be published. Required fields are marked *


CAPTCHA Image
Reload Image