One N Only Exclusive Cine Portal

ಬದುಕಿದೆ ಬಡಜೀವ…

NAgarahavu-8ನಾಗರಹಾವು ಸಿನಿಮಾ ತಂಡದ ಕಾಳಜಿಯಿಂದ ಸಾವು ಬದುಕಿನ ನಡುವೆ ತೊಯ್ದಾಡುತ್ತಿದ್ದ ಜೀವವೊಂದು ಪಾರಾಗಿದೆ. ಮೈಸೂರಿನ ಸರ್ಕಾರಿ ಶಾಲೆಯ ಹತ್ತನೇ ತರಗತಿಯ ಹುಡುಗಿ ಫಿರ್ದೋಸ್ ಬಾನು ಸದ್ಯ ನಾಗರಹಾವು ಚಿತ್ರ ತಂಡದ ನೆರವಿನಿಂದಲೇ ಉಸಿರುಳಿಸಿಕೊಂಡಿದ್ದಾಳೆ.
ಆಡಿಯೋ ರಿಲೀಸ್ ಕಾರ್ಯಕ್ರಮವನ್ನು ಅತ್ಯಂತ ಸರಳವಾಗಿ ಮಾಡಿ ಅದಕ್ಕೆಂದು ಖರ್ಚಾಗುತ್ತಿದ್ದ ಹಣವನ್ನು ಅಸಹಾಯಕ ರೋಗಿಗಳಿಗೆ ನೀಡುವ ಬಗ್ಗೆ ನಾಗರಹಾವು ನಿರ್ಮಾಪಕ ಸಾಜಿದ್ ಖುರೇಷಿ ಈ ಹಿಂದೆಯೇ ಹೇಳಿಕೊಂಡಿದ್ದರು. ಈ ಬಗ್ಗೆ ಮಾಧ್ಯಮಗಳಲ್ಲಿಯೂ ಸುದ್ದಿಯಾಗಿತ್ತು. ಸಿನಿಬಜ್ ಕೂಡಾ ಈ ನಿರ್ಧಾರವನ್ನು ಬೆಂಬಲಿಸಿ ವರದಿ ಪ್ರಕಟಿಸಿತ್ತು.
ಈ ನಡುವೆ ಮೈಸೂರಿನ ಬನ್ನಿ ಮಂಟಪದ ಉನ್ನತೀಕರಿಸಿದ ಸರ್ಕಾರಿ ಪ್ರೌಢ ಶಾಲೆಯ ಹತ್ತನೇ ತರಗತಿ ವದ್ಯಾರ್ಥಿನಿ ಫಿರ್ದೋಸ್ ಬಾನು ಏಕಾಏಕಿ ಅನಾರೋಗ್ಯಕ್ಕೀಡಾಗಿದ್ದಳು. ಮೈಪೂರಾ ಬಾತು ಹೋಗಿದ್ದ ಈಕೆಯನ್ನು ಆಸ್ಪತ್ರೆಗೆ ದಾಖಲಿಸಿದರೆ, ಎರಡೂ ಕಿಡ್ನಿಗಳು ಸಂಪೂರ್ಣ ಡ್ಯಾಮೇಜ್ ಆಗಿವೆ ಎಂಬ ಆಘಾತಕಾರಿ ರಿಪೋರ್ಟ್ ಬಂದಿತ್ತು.4e4b1fba-b786-4175-9278-e109ceb61a3d
ಆದರೆ, ಈ ಹುಡುಗಿಯ ತಂದೆ ಮಹಮದ್ ಸಲೀಂ ಬಡವರು. ಪ್ರತೀ ದಿನ ಡಯಾಲಿಸೀಸ್‌ಗೆ ಸಾವಿರಾರು ರೂಪಾಯಿ ಹೊಂಚುವುದು ಅವರಿಂದ ಸಾಧ್ಯವೇ ಇರಲಿಲ್ಲ. ಈ ಪಡಿಪಾಟಲು ಕಂಡ ಮೈಸೂರಿನ ಸರ್ಕಾರಿ ಶಾಲೆಯ ಕನ್ನಡ ಶಿಕ್ಷಕಿ ಸವಿತಾ ಸಿನಿಬಜ್‌ನಲ್ಲಿ ಬಂದಿದ್ದ ನಾಗರಹಾವು ಸಮಾಜ ಸೇವೆಯ ವರದಿ ಗಮನಿಸಿ ನಮ್ಮ ತಂಡವನ್ನು ಸಂಪರ್ಕಿಸಿದ್ದರು. ನಮ್ಮ ತಂಡದ ಕಡೆಯಿಂದ ನಾಗರಹಾವು ತಂಡಕ್ಕೆ ಈ ಬಗ್ಗೆ ಮಾಹಿತಿ ನೀಡಿದ್ದೆವು.
ಇದಾದ ದಿನದೊಪ್ಪತ್ತಿನಲ್ಲಿಯೇ ನಾಗರಹಾವು ತಂಡ ಆ ಬಾಲಕಿಯ ತಂದೆಯನ್ನು ಕರೆಸಿಕೊಂಡು ತಕ್ಷಣಕ್ಕೆ ಹಣದ ಸಹಾಯ ಮಾಡಿದೆ. ಆ ಹಣದಲ್ಲಿಯೇ ಆಪರೇಷನ್ ಮಾಡಿ ಹುಡುಗಿಯನ್ನು ಸದ್ಯ ಪ್ರಾಣಾಪಾಯದಿಂದ ಪಾರು ಮಾಡಲಾಗಿದೆ.

Leave a Reply

Your email address will not be published. Required fields are marked *


CAPTCHA Image
Reload Image