One N Only Exclusive Cine Portal

ಬಹುನಿರೀಕ್ಷಿತ ಭಾರತೀಯ ಚಿತ್ರಗಳ ಪಟ್ಟಿಯಲ್ಲಿ ‘ಚಕ್ರವರ್ತಿಯೇ ಟಾಪ್!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ಚಕ್ರವರ್ತಿ ಕನ್ನಡನಾಡಿನ ಗಡಿಯನ್ನೂ ಡಾಟಿ ದೇಶಾಧ್ಯಂತ ಭಾರೀ ನಿರೀಕ್ಷೆ ಹುಟ್ಟು ಹಾಕಿದೆ. ಈ ಚಿತ್ರವೀಗ ಬಹುನಿರೀಕ್ಷಿತ ಭಾರತೀಯ ಚಿತ್ರಗಳ ಪಟ್ಟಿಯಲ್ಲಿ ಪ್ರಥಮ ಸ್ಥಾನದಲ್ಲಿದೆ!
ಇದು ಒಂದು ದಾಖಲೆಯಾದರೆ, ಬಾಹುಬಲಿ-2 ಚಿತ್ರವನ್ನೇ ಹಿಂದಿಕ್ಕಿ ನಿರೀಕ್ಷೆ ಹುಟ್ಟಿಸಿರೋದು ಚಕ್ರವರ್ತಿ ಚಿತ್ರದ ಮತ್ತೊಂದು ಸಾಧನೆ. ಯಾಕೆಂದರೆ ಬಹುನಿರೀಕ್ಷಿತ ಭಾರತೀಯ ಚಿತ್ರಗಳ ಪಟ್ಟಿಯಲ್ಲಿ ರಾಜಮೌಳಿ ನಿರ್ದೇಶನದ ಬಾಹುಬಲಿ-೨ ಚಿತ್ರ ಎರಡನೇ ಸ್ಥಾನದಲ್ಲಿದೆ!
ಭಾರೀ ಸದ್ದು ಮಾಡಿರೋ ಹಿಂದಿ ಚಿತ್ರಗಳೇ ಆ ನಂತರದ ಸ್ಥಾನದಲ್ಲಿವೆ. ಬಿಗ್‌ಬಿ ಅಮೀತಾಬ್ ಬಚ್ಚನ್ ಅಭಿನಯದ ಸರ್ಕಾರ್ ೩ ಚಿತ್ರ ಐದನೇ ಸ್ಥಾನದಲ್ಲಿದೆ. ಹಾಗೆ ನೋಡಿದರೆ ತೆಲುಗು ಮತ್ತು ಹಿಂದಿ ಚಿತ್ರಗಳ ವ್ಯಾಪ್ತಿ ಹೆಚ್ಚು. ಅಂಥಾ ವಾತಾವರಣದ ನಡುವೆಯೇ ಚಿಂತನ್ ನಿರ್ದೇಶನದ ಚಕ್ರವರ್ತಿ ಅವೆಲ್ಲವನ್ನೂ ಹಿಂದಿಕ್ಕಿ ಪ್ರಥಮ ಸ್ಥಾನದಲ್ಲಿರೋದು ಭಾರೀ ಯಶವೊಂದರ ಮುನ್ಸೂಚನೆಯಂತೆಯೇ ಕಾಣಿಸುತ್ತಿದೆ.

Leave a Reply

Your email address will not be published. Required fields are marked *


CAPTCHA Image
Reload Image