One N Only Exclusive Cine Portal

ಬಾಲ್ಯದ ಘಮವನ್ನ ಬೊಗಸೆಗೆ ಸುರಿಯೋ ಸಿನಿಮಾ!


ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿದ್ದ ಡ್ರಾಮಾ ಜೂನಿಯರ್ಸ್ ಶೋನ ಪುಟ್ಟ ಪ್ರತಿಭೆಗಳನ್ನು ನೋಡಿ ಎಲ್ಲರೂ ಬೆರಗಾಗಿದ್ದರು. ಅಂಥಾ ಪ್ರತಿಭೆಗಳನ್ನೆಲ್ಲ ಒಟ್ಟಿಗೆ ಸೇರಿಸಿ ತಯಾರುಗೊಂಡಿರೋ ಚಿತ್ರ ‘ಎಳೆಯರು, ನಾವು ಗೆಳೆಯರು’. ಇದೀಗ ಒಂದು ಅಚ್ಚುಕಟ್ಟಾದ ಅದ್ದೂರಿ ಕಾರ್ಯಕ್ರಮದ ಮೂಲಕ ಈ ಚಿತ್ರದ ಹಾಡುಗಳು ಲೋಕಾರ್ಪಣೆಗೊಂಡಿವೆ.
ಅನೂಪ್ ಸಿಳೀನ್ ಸಂಗೀತ ಸಂಯೋಜನೆ ಮಾಡಿರುವ ಈ ಚಿತ್ರದ ಹಾಡುಗಳಿಗೆ ಹಿರಿಯ ಕವಿಕಳಾದ ಬಿ ಆರ್ ಲಕ್ಷ್ಮಣ ರಾವ್, ಎಂ ಎನ್ ವ್ಯಾಸ ರಾವ್ ಹಾಗೂ ಅರಸು ಅಂತಾರೆ ಸಾಹಿತ್ಯ ನೀಡಿದ್ದಾರೆ. ಇದುವರೆಗೂ ಎವರ್‌ಗ್ರೀನ್ ಅನ್ನಿಸುವಂಥಾ ಚಿತ್ರಗೀತೆಗಳನ್ನು ಬರೆದಿರೋ ಲಕ್ಷ್ಮಣ ರಾಯರು ಈ ಚಿತ್ರದ ಮೂಲಕ ಮಕ್ಕಳ ಚಿತ್ರವೊಂದಕ್ಕೆ ಹಾಡು ಬರೆದ ಖುಷಿಯಲ್ಲಿದ್ದಾರೆ. ಅನೂಪ್ ಸಿಳೀನ್ ಕೂಡಾ ಈ ಚಿತ್ರಕ್ಕೆ ಬಾಲ್ಯದ ಘಮ ಪಸರಿಸುವಂಥಾ ಸಂಗೀತದ ಸ್ಪರ್ಶ ನೀಡಿದ್ದಾರೆ.
ಡ್ರಾಮಾ ಜೂನಿಯರ್ಸ್‌ನ ಪುಟಾಣಿ ಪ್ರತಿಭೆಗಳೆಲ್ಲ ಖುದ್ದಾಗಿ ವೇದಿಕೆಗೆ ಬಂದು ತಂತಮ್ಮ ಪಾತ್ರದ ಬಗ್ಗೆ ಹೇಳಿಕೊಂಡ ಈ ಕಾರ್ಯಕ್ರಮದಲ್ಲಿ ಬಿ ಆರ್ ಲಕ್ಷ್ಮಣ ರಾವ್, ಈ ಚಿತ್ರಕ್ಕೆ ಸಂಭಾಷಣೆ ಬರೆದಿರುವ ರಿಚರ್ಡ್ ಲೂಯಿಸ್ ಕೂಡಾ ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ನಾವೆಲ್ಲರೂ ಆಧುನಿಕತೆಯ ಭರಾಟೆಯಲ್ಲಿ ಮರೆತು ಬಿಟ್ಟಿರುವ, ಈಗಿನ ಮಕ್ಕಳಿಗೆ ಮರೀಚಿಕೆಯಾಗಿರುವ ಮಧುರ ಕ್ಷಣಗಳನ್ನು ಈ ಚಿತ್ರ ಖಂಡಿತಾ ನೆನಪಾಗಿಸಿ ತುಂಬಿಕೊಡುತ್ತದೆ ಎಂಬ ಭರವಸೆಯನ್ನೂ ಕೂಡಾ ರಿಚರ್ಡ್ ಲೂಯಿಸಿ ಜಾಹೀರಾಗಿಸಿದ್ದಾರೆ.
ಡ್ರಾಮಾ ಜೂನಿಯರ್ಸ್‌ನ ಪ್ರತಿಭೆಗಳೇ ಇಲ್ಲಿನ ಸ್ಟಾರ‍್ಗಳು. ಅವರೆಲ್ಲರೂ ಭಿನ್ನವಾದ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆಕಾಶ ಪ್ರೊಡಕ್ಷನ್ ಸಂಸ್ಥೆಯಡಿ ಮೂಡಿ ಬಂದಿರುವ ಈ ಚಿತ್ರ ಮಕ್ಕಳಲ್ಲಿ ಅಡಕವಾಗಿರೋ ಸಾಹಸ ಪ್ರವೃತ್ತಿ ಸೇರಿದಂತೆ ನಾನಾ ಗುಣಗಳನ್ನು ರೋಚಕವಾಗಿ ಅನಾವರಣಗೊಳಿಸಲಾಗಿದೆಯಂತೆ.
ಇ ಪ್ರತಿಭೆಗಳ ಮೂಲಕ ಹೊಸಾ ಜಗತ್ತೊಂದನ್ನು ಪ್ರೇಕ್ಷಕರೆದುರು ಅನಾವರಣಗೊಳಿಸುವ ಉತ್ಸಾಹದಿಂದ ತಯಾರಾಗಿರುವ ಈ ಚಿತ್ರ ಥೇಟರುಗಳಲ್ಲಿ ಕಾಣಿಸಿಕೊಳ್ಳಲು ಇದೀಗ ಕ್ಷಣಗಣನೆ ಆರಂಭವಾಗಿದೆ.

Leave a Reply

Your email address will not be published. Required fields are marked *


CAPTCHA Image
Reload Image