One N Only Exclusive Cine Portal

ಬಿಗ್‌ಬಾಸ್ ಮನೆಗೆ ಅಕುಲ್ ಎಂಟ್ರಿ!

ಬಿಗ್‌ಬಾಸ್ ಮನೆಗೆ ದೇವ್ರಂಥಾ ಮನುಷ್ಯ ಚಿತ್ರದ ನಾಯಕಿ ವೈಷ್ಣವಿ ಎಂಟ್ರಿ ಕೊಟ್ಟಿದ್ದಾರೆ. ಬಿಗ್ ಬಾಸ್ ಪ್ರೇಕ್ಷಕರ ಪಾಲಿಗೆ ಮತ್ತೊಂದು ಅಚ್ಚರಿಯ ವಿಚಾರವೆಂದರೆ, ನಾಳೆ ಈ ಹಿಂದೆ ಬಿಗ್ ಬಾಸ್ ವಿನ್ನರ್ ಆಗಿದ್ದ ಅಕುಲ್ ಬಾಲಾಜಿ ಬಿಗ್‌ಬಾಸ್ ಮನೆಯೊಳಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈಗಾಗಲೇ ಐವತ್ತು ದಿನ ಪೂರೈಸಿಕೊಂಡು ಹಲವರು ಹೊರಗೆ ಬಂದಿದ್ದಾರೆ. ಇಂಥ ಸಮಯದಲ್ಲಿ ಬಿಗ್ ಬಾಸ್ ಮನೆಯೊಳಗೆ ಆವರಿಸಬಹುದಾದ ಶೂನ್ಯತೆಯನ್ನು ಬ್ಯಾಲೆನ್ಸ್ ಮಾಡಲು ಬಹುಶಃ ಹೊರಗಿನ ಸೆಲಬ್ರೆಟಿಗಳನ್ನು ಒಳಗೆ ಬಿಡಲಾಗುತ್ತಿದೆ. ಅಕುಲ್ ಬಾಲಾಜಿ ಒಳಗೆ ಹೋದ ದಿನದೊಪ್ಪತ್ತಿಗೇ ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕ ಕಂಡ ಡಿಫರೆಂಟು ವ್ಯಕ್ತಿತ್ವದ ಪ್ರಥಮ್ ಕೂಡಾ ಮನೆ ಪ್ರವೇಶಿಸಲಿದ್ದಾರೆನ್ನುವ ಮಾತುಗಳೂ ಕೇಳಿಬರುತ್ತಿವೆ. ಹಾಗೆ ನೋಡಿದರೆ ಕಿರಿಕ್ ಕೀರ್ತಿ ಅವರ ಜೊತೆಗೇ ಪ್ರಥಮ್ ಕೂಡಾ ಪಾಲ್ಗೊಳ್ಳಬೇಕಿತ್ತಂತೆ. ಅದ್ಯಾವ ಕಾರಣಕ್ಕೆ ಅಂತಾ ಗೊತ್ತಿಲ್ಲ ಪ್ಲಾನು ಸ್ವಲ್ಪ ಅದಲುಬದಲಾಗಿ, ಈಗ ಅಕುಲ್ ಜೊತೆಗೆ ಪ್ರಥಮ ಪ್ರವೇಶವಾಗಲಿದೆ.
ಅಕುಲ್ ಆಗಲಿ, ಪ್ರಥಮ್ ಆಗಲಿ, ಈ ಹಿಂದೆ ಅವರು ಸ್ಪರ್ಧಿಗಳಾಗಿ ಬಿಗ್ ಬಾಸ್ ಮನೆಗೆ ಹೋಗಿದ್ದಾಗಿನ ಸಂದರ್ಭವೇ ಬೇರೆಯಿತ್ತು. ಆದರೀಗ ಇಬ್ಬರೂ ಸಾಕಷ್ಟು ಬ್ಯುಸೀ ಇದ್ದಾರೆ. ಅವರಿಗೇ ಆದಂಥ ಜವಾಬ್ದಾರಿಗಳಿವೆ. ಪ್ರಥಮ್ ಅಂತೂ ಒಂದರ ಹಿಂದೊಂದು ಸಿನಿಮಾಗಳನ್ನು ಒಪ್ಪಿಕೊಂಡು ಬಿಡುವಿಲ್ಲದ ನಟನಾಗಿಬಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಇಬ್ಬರೂ ಬಿಗ್ ಬಾಸ್ ಮನೆಯಲ್ಲಿ ಯಾವ ರೀತಿ ನಡೆದುಕೊಳ್ಳುತ್ತಾರೆ ಅನ್ನೋದು ಬಹುಮುಖ್ಯವಾಗುತ್ತದೆ.

 

Leave a Reply

Your email address will not be published. Required fields are marked *


CAPTCHA Image
Reload Image