One N Only Exclusive Cine Portal

ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟ ಕಿರಿಕ್ ಮೇಸ್ಟ್ರು!

ಸಣ್ಣ ಸಣ್ಣ ಮನಸ್ತಾಪಗಳೇ ಪ್ರತೀ ಸ್ಪರ್ಧಿಗಳೊಳಗೂ ಅಗ್ನಿಕುಂಡವಾಗಿ ನಿಗಿನಿಗಿಸುತ್ತಿದೆ. ಆದರೆ ಅದೆಲ್ಲವನ್ನೂ ಅದುಮಿಟ್ಟುಕೊಂಡು ಟಾಸ್ಕ್‌ಗಳಲ್ಲಿ ಒಂದಾಗುತ್ತಾ., ಮಿಕ್ಕ ಅವಧಿಯಲ್ಲಿ ಜಗಳಾಡುತ್ತಾ ಬಿಗ್‌ಬಾಸ್ ಬದುಕು ಹೇಗೋ ಮುಂದುವರೆಯುತ್ತಿದೆ.
ಮನೆಯೊಳಗಿನ ಜನರ ಸಂಖ್ಯೆ ಕಡಿಮೆಯಾಗುತ್ತಲೇ ತಕರಾರುಗಳ ತೀವ್ರತೆಯೂ ಅತಿಯಾಗುತ್ತಿದೆ. ಇಂಥಾ ಹೊತ್ತಲ್ಲಿ ಪ್ರೇಕ್ಷಕರಿಗೆ ಕೊಂಚ ರಿಲೀಫು ನೀಡುವ ಸಲುವಾಗಿ ವೈಲ್ಡ್ ಕಾರ್ಡ್ ಎಂಟ್ರಿ ಪರ್ವ ಶುರುವಾಗಿದೆ. ಇದರಲ್ಲಿ ಮೊದಲನೆಯದ್ದಾಗಿ ಕಿರಿಕ್ ಕೀರ್ತಿ ಖ್ಯಾತಿಯ ಕೀರ್ತಿ ಶಂಕರಘಟ್ಟ ಎಂಟ್ರಿ ಕೊಟ್ಟಿದ್ದಾರೆ.
ಅಚ್ಚರಿದಾಯಕವಾಗಿ ಕಿರಿಕ್ ಎಂಟ್ರಿಯಾಗುತ್ತಲೇ ಶಾಲಾ ದಿನಗಳ ಟಾಸ್ಕ್ ಆರಂಭವಾಗಿತ್ತು. ಸ್ಪರ್ಧಿಗಳೆಲ್ಲ ಯೂನಿಫಾರ್‍ಮ್ ಹಾಕಿಕೊಂಡು ಶಾಲಾ ಮಕ್ಕಳ ಗೆಟಪ್ಪಿನಲ್ಲಿದ್ದರೆ ಕಿರಿಕ್ ಕೀರ್ತಿ ಮೇಸ್ಟರ ಗೆಟಪ್ಪಿನಲ್ಲಿ ಬಂದು ರಂಜಿಸಿದ್ದಾರೆ. ಇದರಿಂದ ಬಿಗ್‌ಬಾಸ್ ಪ್ರೇಕ್ಷಕರು ಕೊಂಚ ನಿರಾಳವಾದಂತಿದೆ!

Leave a Reply

Your email address will not be published. Required fields are marked *


CAPTCHA Image
Reload Image