One N Only Exclusive Cine Portal

ಬಿಗ್‌ಬಾಸ್ ಮನೇಲಿ ಮಾರ್ಧನಿಸಿದ ಕನ್ನಡ ಕಲರವ!

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಹಾಡಿನ ಮೂಲಕ ಚಂದನ್‌ಶೆಟ್ಟಿ ಮೋಡಿ!
ಕರ್ನಾಟಕದ ತುಂಬೆಲ್ಲಾ ಇದೀಗ ಕನ್ನಡ ರಾಜ್ಯೋತ್ಸವದ ಸಂಭ್ರಮ ಹರಡಿಕೊಂಡಿದೆ. ಆದರೆ ಹೊರ ಜಗತ್ತಿನ ಯಾವ ಸಂಪರ್ಕವೂ ಇಲ್ಲದೆ ಬಿಗ್‌ಬಾಸ್ ಮನೆಯೊಳಗಿರೋ ಮಂದಿಗೂ ಈ ಕರುನಾಡ ಸಂಭ್ರಮವನ್ನು ಅನುಭವಿಸೋ ಯಥೇಚ್ಛ ಅವಕಾಶ ಲಭಿಸಿದೆ. ಟಾಸ್ಕ್ ಜಂಜಾಟಗಳ ನಡುವೆಯೂ ಸ್ಪರ್ಧಿಗಳು ಹಾಡಿ, ಕುಣಿದು ಖುಷಿಪಟ್ಟಿದ್ದಾರೆ!
ಸೆಲೆಬ್ರಿಟಿಯಾಗಿ ಬಿಗ್‌ಬಾಸ್ ಮನೆ ಸೇರಿದರೂ ಅಂಥಾ ಯಾವ ಹಮ್ಮು ಬಿಮ್ಮೂ ಇಲ್ಲದೆ ಪ್ರೇಕ್ಷಕರ ಮನ ಗೆದ್ದಿರೋ ಚಂದನ್ ಶೆಟ್ಟಿ ಇದೀಗ ಕನ್ನಡದ ಹಾಡೊಂದರ ಮೂಲಕ ಬಿಗ್‌ಬಾಸ್ ಮನೆಯೊಳಗೆ ಸದ್ದು ಮಾಡಿದ್ದಾರೆ. ಕನ್ನಡ ನಮ್ಮಮ್ಮ ಎಂಬ ತಮ್ಮದೇ ರ್‍ಯಾಪ್ ಶೈಲಿಯ ಹಾಡನ್ನು ಎಲ್ಲ ಸದಸ್ಯರನ್ನೂ ಒಗ್ಗೂಡಿಸಿ ಹಾಡಿ ಕುಣಿಯೋ ಮೂಲಕ ಚಂದನ್ ಮನೆ ಮಂದಿಯ ಮೂಡನ್ನು ಕೊಂಚ ತಿಳಿಗೊಳಿಸಿದ್ದಾರೆ.
ಒಂದು ವೈಮನಸ್ಯ ಬಗೆಹರಿದೇಟಿಗೆ ಮತ್ಯಾವುದೋ ತಕರಾರಿನ ಕಾರ್ಮೋಡ ಬಿಗ್‌ಬಾಸ್ ಮನೆಯನ್ನು ಸದಾ ಕವುಚಿಕೊಂಡಿರುತ್ತೆ. ಇಲ್ಲಿನ ಸ್ಪರ್ಧಿಗಳು ಪ್ರತೀ ನಡವಳಿಕೆಯನ್ನೂ ಕೂಡಾ ಪಕ್ಕಾ ಗೆಲುವಿನ ಲೆಕ್ಕಾಚಾರ, ಭಿನ್ನಾಭಿಪ್ರಾಯಗಳ ಮಾನದಂಡದ ಮೂಲಕವೇ ಅನುಸರಿಸುತ್ತಾರೆ. ಆದರೆ ಕನ್ನಡ ರಾಜ್ಯೋತ್ಸವದ ನೆಪದಲ್ಲಿ ಕೆಲ ಕಾಲ ಬಿಗ್‌ಬಾಸ್ ಮನೆಗೇ ಹೊಸಾ ಕಳೆ ಬಂದಿದ್ದಂತೂ ಸುಳ್ಳಲ್ಲ!

copying or reproducing the above content in any format without approval is criminal offence and will be prosecuted in Bengaluru court © CINIBUZZ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Leave a Reply

Your email address will not be published. Required fields are marked *


CAPTCHA Image
Reload Image