One N Only Exclusive Cine Portal

ಬಿಲ್ಡಪ್ ಟೈಟಲ್ ಕತೆ ಏನಾಯಿತು?

ಪ್ರಥಮ್ ನಿರ್ದೇಶನ ಮತ್ತು ನಟನೆಯಲ್ಲಿ ಬಿಲ್ಡಪ್ ಹೆಸರಿನ ಸಿನಿಮಾ ಆರಂಭವಾಗುವ ವಿಚಾರವನ್ನು ಪ್ರಕಟಿಸಿದ್ದೆವು. ನಂತರ ಅದು ದೊಡ್ಡ ಸುದ್ದಿಯೂ ಆಗಿತ್ತು. ನಂತರ ಶೀರ್ಷಿಕೆ ವಿಚಾರದಲ್ಲಿ ಒಂದಷ್ಟು ಸಮಸ್ಯೆಗಳು ಉಂಡಾಗಿದ್ದವು. ಈಗ ಆ ಸಮಸ್ಯೆ ಬಗೆಹರಿದಿದೆಯಾ? ಎಂಬಿತ್ಯಾದಿ ವಿವರಗಳನ್ನು ಸ್ವತಃ ಪ್ರಥಮ್ ಸಿನಿಬಜ಼್’ನೊಂದಿಗೆ ಹಂಚಿಕೊಂಡಿದ್ದಾರೆ. ಅವರದ್ದೇ ಮಾತುಗಳು ಇಲ್ಲಿವೆ…

ನನ್ನ ಮುಂದಿನ ಚಿತ್ರಕ್ಕೆ ಟೈಟಲ್ ಸಮಸ್ಯೆಯಾಗಿತ್ತು. buildup ಶೀರ್ಷಿಕೆ ಅಂತಿಮವಾಗಿದ್ರು ಅದು ಬೇರೊಬ್ಬರ ಹೆಸರಲ್ಲಿತ್ತು. ಒಂದು ಅದ್ಭುತವಾದ ಕತೆಯನ್ನು ಉದಯ್ ಮೆಹ್ತಾ ರವರು ಮಾಡಿಸಿ ಕೊಟ್ಟಾಗ, ನಿರ್ದೇಶನ ಸಂಭಾಷಣೆ ಎಲ್ಲಾ ವಿಚಾರದಲ್ಲು ಪಕ್ಕಾ ಮಾಡಿಕೊಂಡೆ ಅಖಾಡಕ್ಕೆ ಇಳಿಯುವ ಸಿದ್ಧತೆ ಮಾಡಿಕೊಂಡೆ. ಅತ್ಯಂತ ಹಾಸ್ಯ ಮತ್ತು ಥ್ರಿಲ್ಲಿಂಗ್ ಕತೆ ಇರುವ ಅದಾಗಲೆ ಕೃಷ್ಣ ಎಂಬುವವರ ಬಳಿ ಇತ್ತು. ಈ ಚಿತ್ರಕ್ಕೆ ಅದರ ಹೊರತು ಬೇರೆ ಹೆಸರು ಸ್ಯುಕ್ತವಲ್ಲದ ಕಾರಣ ಅವರ ಬಳಿ ಖುದ್ದು ನಾನೇ ಮನವಿ ಮಾಡಿಕೊಂಡೆ.ಅವರ ಮಗನಿಗೆ ನಾನೆಂದರೆ ಬಹಳ ಇಷ್ಟವಂತೆ. ಅವರ ಸಿನಿಮಾ ತಯಾರಿಕೆಯಲ್ಲಿದ್ದಾಗ ನಾನೇ ಖುದ್ದು ಕೇಳಿ ಆ ಶೀರ್ಷಿಕೆ ಮಹತ್ವ ಅವರಿಗೆ ತಿಳಿಸಿದಾಗ “ಪ್ರಥಮ್’s buildup” ಬಹಳ ಖುಷಿಯಿಂದಲೆ ನನಗೆ ಕೊಟ್ಟರು. ಇನ್ನು ನಿರ್ಮಾಪಕರು ಅಂಧ್ರಾ ಮುಲದ ಬಹು ದೊಡ್ಡ ಉದ್ಯಮಿ.ಅವರು ನಾನು ನನ್ನ style ಲಿ ಹೇಳಿದ ಕತೆಗೆ ಫ಼ುಲ್ ಖುಷಿ ಆಗಿ ಶರತ್ತು ಒಂದನ್ನ ಮುಂದಿಟ್ಟರು. ಅದೇನೆಂದರೆ ಇದನ್ನ ಮೂರೂ ಭಾಷೆಯಲ್ಲಿ ಏಕಕಾಲದಲ್ಲಿ ಚಿತ್ರೀಕರಣ ಮಾಡಬೇಕು ಅಂತ ಕತೆಯಲ್ಲಿ ಬರುವ ಬಹು ಮುಖ್ಯ ಪಾತ್ರಕ್ಕೆ ದಕ್ಷಿಣ ಭಾರತದ ಪ್ರಖ್ಯಾತ ನಟಿಯನ್ನು ಮೂರೂ ಭಾಷೆಗೆ ಸಲ್ಲುವಂತಹವರನ್ನು ಕನ್ನಡಕ್ಕೆ ಪರಿಚಯಿಸುವ ಇರಾದೆ ಆ ನಿರ್ಮಾಪಕರದ್ದು,ನನಗೆ ಕನ್ನಡ ಬಿಟ್ಟು ಬೇರೆ ಭಾಷೆ ಅಷ್ಟು ಗೊತ್ತಿಲ್ಲ.

ಅನ್ಯ ಭಾಷಾ ಜನರ ಮೇಲೆ ಸ್ವಲ್ಪವೂ ಹಿಡಿತವಿಲ್ಲ. ಸಾಧ್ಯವೇ ಇಲ್ಲ ಎಂದು ಬಿಟ್ಟೆ. ಕಡೆಗೆ ಒಂದು ನಿರ್ಧಾರಕ್ಕೆ ಬರಲಾಗಿ ಕನ್ನಡದಲ್ಲಿ ಬೇರೆ ನಿರ್ಮಾಪಕರು ಈ ಸಿನಿಮಾ ಮಾಡುವಂತೆಯೂ ಇತರ ಭಾಷೆಗಳಲ್ಲಿ ನೀವು ಬೇರೆ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳುವ ನಿರ್ಧಾರ ಮಾಡಲಾಗಿದೆ Y.S.R productions ನ ಅಡಿಯಲ್ಲಿ ರಮೇಶ್,ಹಾಗು ಪ್ರಥಮ್ ರ ಆಪ್ತ ಗೆಳೆಯರು ಸೇರಿ ನಿರ್ಮಿಸುತ್ತಿರುವ ಈ ಸಿನಿಮಾ ಗೆ ಟೈಟಲ್ ಸಮಸ್ಯೆ ಇಂದ ಮುಕ್ತಿ ಸಿಕ್ಕಿದೆ. ಇದರ ಮೂಲಕ ನಾನು ಕಲಿತ ಪಾಠ ಏನೆಂದರೆ ಪ್ರೀತಿಯಿಂದ ವ್ಯವಹರಿಸಿದರೆ ಎಲ್ಲವೂ ನಮ್ಮ ಕೈ ಅಳತೆಯಲ್ಲಿಯೇ ಇದೆ. ಅಹಂಕಾರ, ದರ್ಪಕ್ಕಿಂತ ಸ್ನೇಹ ವಿಶ್ವಾಸ ಸಂಬಂಧಗಳನ್ನ ಗಟ್ಟಿಗೊಳಿಸಲಿದೆ ಅಂತ ಇನ್ನು ತಾರಗಣದಲ್ಲಿ ಅಪರೂಪದ ನಟರೊಬ್ಬರು ಮತ್ತೆ ಬಣ್ಣ ಹಚ್ಚಲಿದ್ದಾರೆ. ಕುರಿ ಪ್ರತಾಪ್ ಚಿತ್ರದ ಬಹುಮುಖ್ಯ ಪಾತ್ರಧಾರಿ.ಓಮ್ ಪ್ರಕಾಶ್ ರಾವ್, ಭರ್ಜರಿ ಚೇತನ್,ಸಿಂಪಲ್ ಸುನಿ,ನಾಗತಿಹಳ್ಳಿ ಚಂದ್ರಶೇಖರ್ ರವರ ಸಾಹಿತ್ಯವಿರಲಿದೆ.ಆ ಬಹು ಭಾಷಾ ನಟಿ ಯಾರೆಂದು shooting set ಇಂದಲೇ ಅವರ ಜೊತೆ ಲೈವ್ ಮಾಡಲಿದ್ದೇನೆ‌. ಅಲ್ಲಿಯವರೆಗೂ ನಿರೀಕ್ಷೆ ಇರಲಿ. ಅದ್ಭುತ ಅನ್ನುವಂತಹ ಕತೆ ಕೊಟ್ಟ ಉದಯ್ ಮೆಹ್ತಾ ಹಾಗು ಅವರ ಶ್ರೀಮತಿ ವಾಸವಿ ಮೆಹ್ತಾ ರವರಿಗೆ ಧನ್ಯವಾದಗಳು.

Leave a Reply

Your email address will not be published. Required fields are marked *


CAPTCHA Image
Reload Image