One N Only Exclusive Cine Portal

ಬುಲೆಟ್ಟಿಗೆ ಕಿಚ್ಚ ಹೇಳಿದ್ದೇನು ಗೊತ್ತಾ?

ಸಂಜೆಗತ್ತಲು ಕವಿಯುತ್ತಲೇ ಹುಚ್ಚು ಕೆದರಿಸಿಕೊಂಡವಂತೆ ಕಿಚ್ಚಾ ಸುದೀಪ್ ವಿರುದ್ಧ ಕೆರೆಯಲು ಹೋದ ಬುಲೆಟ್ ಪ್ರಕಾಶ ಸದ್ಯ ಸುಸ್ತೆದ್ದಿದ್ದಾನೆ. ಯಾವಾಗ ಏಕಾಏಕಿ ಸುದೀಪ್ ವಿರುದ್ಧ ಕೊಳಕು ಬಾಯಿ ತೆರೆದನೋ ಆ ಕ್ಷಣದಿಂದಲೇ ಚಿತ್ರರಂಗದ ಗಣ್ಯರ ಕಡೆಯಿಂದ ಪ್ರಕಾಶನಿಗೆ ಮಹಾ ಮಂಗಳಾರತಿ ಆರಂಭವಾಗಿತ್ತು. ಯಾಮಾರಿದರೆ ಮಾರನೇ ದಿನ ಮುಂಜಾವದ ಹೊತ್ತಿಗೆಲ್ಲ ಸುದೀಪ್ ಅಭಿಮಾನಿಗಳು ಪ್ರಸಾದ ವಿನಿಯೋಗವನ್ನೂ ಮಾಡಿಯಾರೆಂದು ಹೆದರಿದ ಬುಲೆಟ್ಟು ಈಗ ಥಂಡಾ ಹೊಡೆದಿದೆ.

ಆದರೆ, ಈತನ ಕೃತಜ್ಞ ಮೆಂಟಾಲಿಟಿಯ ಬಗ್ಗೆ ಮಾತ್ರ ಈಗಲೂ ಚಿತ್ರರಂಗದ ಮಂದಿ ಕಿಡಿ ಕಾರುತ್ತಲೇ ಇದ್ದಾರೆ.
ಈ ಪ್ರಕಾಶನದ್ದು ಹತ್ತಿದ ಏಣಿಯನ್ನು ಎಡಗಾಲಲ್ಲಿ ಒದೆಯೋ ಬುದ್ಧಿ. ತನಗೆ ಲಾಭವಾಗೋದಾದರೆ ತನ್ನ ಅಗಾಧ ಗಾತ್ರದ ದೇಹವನ್ನು ಯಾರ ಪದತಲದಲ್ಲಿಯಾದರೂ ತೊಪ್ಪೆಯಂತೆ ಚೆಲ್ಲಿಬಿಡಬಲ್ಲ ಈತ ಉಪಯೋಗ ಸಿಕ್ಕ ಬಳಿಕ ಥೇಟು ಗೊಬ್ರವಾಹನ. ಅಂಥಾದ್ದೊಂದು ಮೆಂಟಾಲಿಟಿ ಇಲ್ಲದೇ ಹೋಗಿದ್ದರೆ ಪ್ರಕಾಶ ಸುದೀಪ್ ವಿರುದ್ಧ ಮಾತಾಡಲು ಸಾಧ್ಯವೇ ಇರಲಿಲ್ಲ. ಯಾಕೆಂದರೆ ಕಷ್ಟ ಕಾಲದಲ್ಲಿ ಸುದೀಪ್ ಮಾಡಿದ್ದ ಉಪಕಾರವೇ ಅಂಥಾದ್ದಿದೆ.
ನಟನೆಯ ಗಂಧ ಗಾಳಿಯೇ ಗೊತ್ತಿಲ್ಲದ ಇವನಿಗೆ ವರ್ಷಾಂತರದ ಹಿಂದೆ ಹೀರೋ ಆಗುವ ತಲುಬು ಹತ್ತಿಕೊಂಡಿತ್ತು. ಐತಲಕ್ಕಡಿ ಎಂಬೋ ಆ ಚಿತ್ರದಲ್ಲಿ ಕನ್ನಡ ಚಿತ್ರರಂಗದ ಎಲ್ಲಾ ಸ್ಟಾರ್‌ಗಳೂ ಆಕ್ಟ್ ಮಾಡ್ತಾರೆ ಅಂತ ಪ್ರಕಾಶ ಹೋದಲ್ಲಿ ಬಂದಲ್ಲಿ ಒದರಾಡಿದ್ದ. ಆದರೆ ಸೂಪರ್ ಸ್ಟಾರ್‌ಗಳಲ್ಲಿ ಅಯ್ಯೋ ಅಂತ ಬಂದು ಅತಿಥಿ ಪಾತ್ರದಲ್ಲಿ ನಟಿಸಿದ್ದು ರವಿಚಂದ್ರನ್ ಮತ್ತು ಸುದೀಪ್ ಮಾತ್ರ. ದರ್ಶನ್ ಮತ್ತು ಪುನೀತ್ ಒಟ್ಟಿಗೇ ಬಂದು ಈ ಸಿನಿಮಾದ ಮುಹೂರ್ತಕ್ಕೆ ಚಾಲನೆ ನೀಡಿದ್ದರು. ಇನ್ನು ಈ ಚಿತ್ರದಲ್ಲಿ ನಟಿಸಿದ್ದಕ್ಕಾಗಿ ಸುದೀಪ್ ಅವರಿಗೆ ಬಿಡಿಗಾಸೂ ಬಂದಿರಲಿಲ್ಲ. ಅದನ್ನವರು ನಿರೀಕ್ಷೆಯೂ ಮಾಡಿರಲಿಲ್ಲ. ಆದರೆ ಅದೊಂದು ದಿನ ಏಕಾಏಕಿ ಪ್ರಕಾಶನ ಅಗಾಧ ದೇಹ ಸುದೀಪ್ ಮುಂದೆ ಪ್ರತ್ಯಕ್ಷವಾಗಿತ್ತು. ಹಾಗೆ ನಿಂತವನೇ ಒಂದೊಳ್ಳೆಯ ಮೊಬೈಲನ್ನು ಗಿಫ್ಟಾಗಿ ಕೊಡಲು ಮುಂದಾಗಿದ್ದ. ಆದರೆ ಅದನ್ನು ತೆಗೆದುಕೊಳ್ಳಲೊಪ್ಪದ ಸುದೀಪ್ ‘ಕಷ್ಟಪಟ್ಟು ಸಿನಿಮಾ ಮಾಡಿದ್ದೀಯ. ಇದೆಲ್ಲ ಏನೂ ಬೇಡ. ಒಳ್ಳೇದಾಗಲಿ ಅಂತ ಹಾರೈಸಿ ಕಳಿಸಿದ್ದರು.
ಕಷ್ಟಕಾಲದಲ್ಲಿ ಇಂಥಾದ್ದೊಂದು ಔದಾರ್ಯ ತೋರಿದ ಸುದೀಪ್ ಮೇಲೆಯೇ ಪ್ರಕಾಶ ಕೊಳಕು ಬಾಯಿ ತೆರೆದರೆ ಅಭಿಮಾನಿಗಳಿಗೆ ಬೇಸರಾಗದಿರುತ್ತಾ? ಹಾಗಂತ ಸುದೀಪ್ ವಿಚಾರದಲ್ಲಿ ಮಾತ್ರವೆಂದಲ್ಲ. ತನಗೆ ಸಹಾಯ ಮಾಡದೋರೆಲ್ಲರ ವಿಚಾರದಲ್ಲಿಯೂ ಪ್ರಕಾಶನದ್ದು ಇಂಥಾದ್ದೇ ಹರುಕು ವರ್ತನೆ. ಶಿವರಾಜ್ ಕುಮಾರ್, ದರ್ಶನ್, ಸುದೀಪ್… ಹೀಗೆ ಪ್ರಕಾಶ ಉಲ್ಟಾ ಹೊಡೆದವರ ಪಟ್ಟಿ ಬೇಜಾನ್ ದೊಡ್ಡದಿದೆ.
ಆದರೆ ಈ ಸಲ ಮಾತ್ರ ಬುಲೆಟ್ಟು ತಾನೇ ತಾನಾಗಿ ತನ್ನದೇ ಅನ್ನದ ತಟ್ಟೆಗೆ ಮಣ್ಣು ಹಾಕಿಕೊಂಡಿದ್ದಾನೆ!
ಅಂದಹಾಗೆ, ನಟನೆ ಅಂದರೇನು ಅಂತಲೇ ಗೊತ್ತಿಲ್ಲದ ಬುಲೆಟ್ ಪ್ರಕಾಶ ಆರಂಭದ ದಿನಗಳಲ್ಲಿ ಸಿನಿಮಾಗಳ ಛಾನ್ಸು ಗಿಟ್ಟಿಸಿದ್ದು ಹೇಗೆ ಅನ್ನೋದರ ಬಗ್ಗೆ ಮಜವಾದ ಕತೆಗಳಿವೆ. ಅದರ ಕುರಿತು ಮುಂದೊಂದು ದಿನ ತಿಳಿಸ್ತೀವಿ ಬಿಡಿ…

Leave a Reply

Your email address will not be published. Required fields are marked *


CAPTCHA Image
Reload Image