One N Only Exclusive Cine Portal

ಬೇಸಿಗೆಯಲ್ಲಿ ಬಾಹುಬಲಿಯದ್ದೇ ಸಾಮ್ರಾಜ್ಯ

ಸಮ್ಮರ್ ಹಾಲಿಡೇಸ್ ಬಂತ್ರು ಅಂದ್ರೆ ಸಾಕು ಸಿನಿಮಾಗಳಿಗೆ ಬರವಿರೋದಿಲ್ಲ. ಬೇಸಿಗೆಕಾಲದ ರಜೆಯನ್ನ ಹೇಗೆ ಕ್ಯಾಚ್ ಮಾಡಿಕೊಳ್ಬೇಕು ಅಂತ ಸ್ಟಾರ್ ಹೀರೋಗಳ ಸಿನಿಮಾಗಳು ಒಂದರ ಮೇಲೊಂದು ರಿಲೀಸ್ ಆಗುತ್ವೆ. ಅದ್ರಂತೆ ರಾಜಮೌಳಿ ನಿರ್ದೇಶನದಲ್ಲಿ ಬರ್ತಿರೋ ಬಾಹುಬಲಿ ಕೂಡ ಸಮ್ಮರ್ ಗೆ ಬRobot-2-to-beat-Baahuabli-Recordsರೋಕೆ ರೆಡಿಯಾಗಿದೆ. ಇದರ ಜೊತೆಗೆ ರಜಿನಿ ಕೂಡ ರೋಬೊ ೨ ಆಗಿ ಬೆಸಿಗೆಯಲ್ಲೇ ತೆರೆಮೇಲೆ ಬರ್ತಾರೆ ಅನ್ನೋಸುದ್ದಿ ಇತ್ತು.
ಆದರೀಗ ಪ್ಲಾನ್ ಚೇಂಜ್ ಆಗಿದೆ. ಹೌದು ಈಗಾಗ್ಲೇ ಬಾಹುಬಲಿ ೨ ಸಿನಿಮಾ ಎಪ್ರೀಲ್ ೨೮ ರಂದು ಬೆಳ್ಳಿ ತೆರೆಮೇಲೆ ಬರುವುದಾಗಿ ಡೇಟ್ ಲಾಕ್ ಮಾಡಾಗಿದೆ. ಹಾಗಾಗಿ ರೋಬೋ ೨ ಅದೇ ತಿಂಗಳಲ್ಲೇ ಬಂದ್ರೆ ಕಷ್ಟವಾಗುತ್ತೆ ಅಂತಲೇ ಎಲ್ರೂ ತಿಳಿದಿದ್ರು. ಆದರೀಗ ರೋಬೋ ೨ ಟೀಮ್ ನಿಂದ ಕೂಡ ಕ್ಲಾರಿಟಿ ಸಿಕ್ಕಿರೋ ಕಾರಣ ಸಿನಿಪ್ರಿಯರು ಜೊತೆಗೆ ಸಿನಿಮಾ ಇಂಡಸ್ಟ್ರಿಯವ್ರು ನಿಟ್ಟುಸಿರು ಬಿಟ್ಟಿದ್ದಾರೆ.
ಹೌದು ರೋಬೋ ೨ ಸಿನಿಮಾ ದೀಪಾವಳಿ ಹಬ್ಬದದಿನ ತೆರೆಮೇಲೆ ಪಟಾಕಿ ಹೋಡೆಯೋಕೆ ಬರಲಿದ್ಯಂತೆ. ರೋಬೋ ೨ ಚಿತ್ರದ ಶೂಟಿಂಗ್ ಇನ್ನು ಬಾಕಿಯಿದೆ. ರಜಿನಿ ಹೆಲ್ತ್ ಅಪ್ ಸೆಟ್ ಆದ ಕಾರಣ ಶೂಟಿಂಗ್ ತಡವಾಯ್ತು. ಅಲ್ದೆ ಸಿನಿಮಾದ ಗ್ರಾಫಿಕ್ಸ್ ಗೆ ಜಾಸ್ತಿ ಸಯಮ ಬೇಕಾಗಿರೋದ್ರಿಂದ ಶಂಕರ್ ಈ ನಿರ್ಧಾರಕ್ಕೆ ಬಂದಿದ್ದಾರಂತೆ. ಇನ್ನು ಕಬಾಲಿ ಸ್ಟಾರ್ ಲೈನ್ ನಲ್ಲಿ ಇಲ್ಲ… ಓನ್ಲಿ ಬಾಹುಬಲಿಯದ್ದೇ ಸಮ್ಮರ್ ನಲ್ಲಿ ರಾಜ್ಯಭಾರ.. ಹಾಗಾಗಿ ಇದೀಗ ಬೇರೆ ಸಿನಿಮಾಗಳು ರಿಲೀಸ್ ಮಾಡೋದಕ್ಕೆ ಪ್ಲಾನ್ ಮಾಡ್ತಿದ್ದಾರಂತೆ.
-ನಕ್ಷತ್ರ

Leave a Reply

Your email address will not be published. Required fields are marked *


CAPTCHA Image
Reload Image