One N Only Exclusive Cine Portal

ಬ್ರೇಕಿಂಗ್ ನ್ಯೂಸ್ : ಮಗದೊಮ್ಮೆ ಬರುತ್ತಿದೆ ನಾಗರಹಾವು…!

ನಾಗರಹಾವು… ಅದೇನು ಶಕ್ತಿನಪ್ಪಾ ಈ ಹೆಸರಿಗೆ….
ಇದೇನಿದು ಇದ್ದಕ್ಕಿದ್ದಂತೆ ನಾಗರಹಾವನ್ನು ನೆನಪಿಸ್ತಿದೀವಿ ಅಂದುಕೊಂಡ್ರಾ?
ಹೌದು ಸಾಹಸಸಿಂಹ ವಿಷ್ಣುವರ್ಧನ್ ಪೂರ್ಣಪ್ರಮಾಣದಲ್ಲಿ ಹೀರೋ ಆಗಿ ನಟಿಸಿದ್ದ ಮೊದಲ ಸಿನಿಮಾ ನಾಗರಹಾವು. ಹಾಗೆ ಬುಸ್ಸೆಂದು ಪರದೆ ಸೀಳಿಬಂದ ನಾಗರಹಾವು ಸೃಷ್ಟಿಸಿದ ಇತಿಹಾಸ ದೊಡ್ಡದು. ನಂತರ ದಶಕದ ಹಿಂದೆ ಅದೇ ಹೆಸರಿನಲ್ಲಿ ಉಪೇಂದ್ರ ನಟಿಸಿದ ಮತ್ತೊಂದು ಚಿತ್ರ ತೆರೆಗೆ ಬಂತು. ಈಗ ಮಗದೊಮ್ಮೆ ‘ನಾಗರಹಾವು’ ಅನ್ನೋ ಹೆಸರಿನದ್ದೇ ಚಿತ್ರವೊಂದು ತೆರೆಗೆ ಬರಲು ರೆಡಿಯಾಗಿದೆ.
ಈ ಚಿತ್ರದಲ್ಲಿ ಮೋಹಕತಾರೆ, ಕಿರಿಕ್ ಸ್ಟಾರ್ ಇತ್ಯಾದಿ ಹೆಸರುಗಳಿಂದ ಫೇಮಸ್ಸಾಗಿರುವ ರಮ್ಯಾ ಮತ್ತು ದಿಗಂತ್ ಒಟ್ಟಿಗೇ ನಟಿಸಿದ್ದಾರೆ. ಟಿ.ಎನ್. ಸೀತಾರಾಮ್ ನಿರ್ದೇಶನದ ಮೀರಾ ಮಾಧವ ರಾಘವ ಚಿತ್ರದ ನಂತರ ಈ ಜೋಡಿ ಕಾಣಿಸಿಕೊಳ್ಳುತ್ತಿರುವ ಎರಡನೇ ಚಿತ್ರವಿದು. ಈ ಚಿತ್ರವನ್ನು ತೆಲುಗಿನ ಮೇರು ನಿರ್ದೇಶಕ ಕೋಡಿ ರಾಮಕೃಷ್ಣ ನಿರ್ದೇಶಿಸಿದ್ದಾರೆ. ತೆಲುಗು ಮತ್ತು ತಮಿಳಿನಲ್ಲಿ ನೂರೈವತ್ತಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ದೇಶಿಸಿರುವ ಕೋಡಿ ರಾಮಕೃಷ್ಣ ಇತ್ತೀಚಿನ ವರ್ಷಗಳಲ್ಲಿ ಅರುಂಧತಿ ಎನ್ನುವ ಸಿನಿಮಾದಿಂದ ಹೆಚ್ಚು ಪ್ರಚಾರ ಪಡೆದಿದ್ದರು. ಹಾಗೆ ನೋಡಿದರೆ ಈ ಚಿತ್ರ ಮೂರ‍್ನಾಲ್ಕು ವರ್ಷಗಳ ಹಿಂದೆಯೇ ನಾಗರಹಾವು ಸಿನಿಮಾ ತೆರೆಗೆ ಬರಬೇಕಿತ್ತು. ಆದರೆ ಮಹತ್ವದ ಕಾರಣದಿಂದ ಚಿತ್ರ ತೆರೆಗೆ ಬರುವುದು ತಡವಾಯಿತು. ಈ ಚಿತ್ರ ಲೇಟಾಗಿ ರಿಲೀಸಾಗುತ್ತಿರುವುದರ ಹಿಂದೆ ದೊಡ್ಡ ಕಥೆಯೇ ಇದೆ. ಅಸಲಿಗೆ ಈ ನಾಗರಹಾವು ಚಿತ್ರದಲ್ಲಿ ಕನ್ನಡದ ಧೀಮಂತ ನಟರೊಬ್ಬರು ವಿಶೇಷ ಮತ್ತು ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. ಯಾರು ಆ ನಟ? ಏನದರ ಗುಟ್ಟು? ಈ ಎಲ್ಲಾ ವಿವರವನ್ನೂ ಶೀಘ್ರದಲ್ಲೇ ನಿಮ್ಮೆದುರು ತಂದಿಡುತ್ತೇವೆ.

 

ಹೊಸ ವರ್ಷದ ಹೊಸ್ತಿಲಿಗೇ cinibuzz ಅಧಿಕೃತವಾಗಿ ಹೊರಹೊಮ್ಮಲಿದೆ. ನೀವೆಲ್ಲ ನಮ್ಮೊಂದಿಗಿರಿ…

Leave a Reply

Your email address will not be published. Required fields are marked *


CAPTCHA Image
Reload Image