One N Only Exclusive Cine Portal

ಮಂಕಾದಳೇಕೆ ಮಿಲ್ಕಿ ಬ್ಯೂಟಿ ತಮನ್ನಾ?

ತನ್ನ ಸ್ನಿಗ್ಧ ಸೌಂದರ್ಯದಿಂದಲೇ ಭಾಷೆಗಳನ್ನು ಮೀರಿ ಅಭಿಮಾನಿ ಬಳಗ ಹೊಂದಿರುವಾಕೆ ತಮನ್ನಾ ಭಾಟಿಯಾ. ತೆಲುಗು, ತಮಿಳು ಸೇರಿದಂತೆ ಬಹುತೇಕ ಭಾಷೆಗಳಲ್ಲಿ ನಟಿಸಿ ಬಾಲಿವುಡ್ಡಲ್ಲಿಯೂ ಸದ್ದು ಮಾಡಿದ್ದ ತಮನ್ನಾ ಇದೀಗ ಅಕ್ಷರಶಃ ಮಂಕಾಗಿದ್ದಾಳೆ! ಅರೇ, ಆಕೆ ನಟಿಸಿದ್ದ ಬಾಹುಬಲಿಯಂಥಾ ಚಿತ್ರವೇ ವಿಶ್ವಾಧ್ಯಂತ ಭರ್ಜರಿ ಗೆಲುವು ಕಂಡಿದೆ. ಹಾಗಿರೋವಾಗ ಆಕೆ ಮಂಕಾಗಲು ಕಾರಣವೇನೆಂಬ ಪ್ರಶ್ನೆ ಕಾಡೋದು ಸಹಜವೇ. ಆದರೆ ನಿಜಕ್ಕೂ ಈಗ ತಮನ್ನಾಳ ಬೇಡಿಕೆ ಕುಸಿದಿದೆ. ಆಕೆ ಒಂದೊಳ್ಳೆ ಚಿತ್ರದಲ್ಲಿ ನಟಿಸೋ ಅವಕಾಶ ಸಿಕ್ಕಿ ಭರ್ಜರಿ ಗೆಲುವೊಂದಕ್ಕಾಗಿ ಹಪಾಹಪಿಸುತ್ತಿದ್ದಾಳೆ.

ಬಾಹುಬಲಿ ಚಿತ್ರ ಅಷ್ಟು ದೊಡ್ಡ ಮಟ್ಟದಲ್ಲಿ ಹಿಟ್ ಆಗಿದ್ದರೂ ಅದರ ಅಲೆಯಲ್ಲಿ ಕೇಳಿ ಬರುತ್ತಿರೋದು ರಾಜಮೌಳಿ, ಪ್ರಭಾಸ್, ರಾಣಾ ದಗ್ಗುಬಾಟಿ, ರಮ್ಯಾ, ಅನುಷ್ಕಾ ಹೆಸರುಗಳು ಮಾತ್ರ. ಅಪ್ಪಿ ತಪ್ಪಿಯೂ ಬಾಹುಬಲಿ ಚಿತ್ರದ ವಿಚಾರದಲ್ಲಿ ತಮನ್ನಾ ಹೆಸರು ಕೇಳಿ ಬರೋದಿಲ್ಲ. ಇನ್ನು ತಮನ್ನಾ ಮಾತ್ರವೇ ಹೀರೋಯಿನ್ ಆಗಿರೋ ಚಿತ್ರ ಇತ್ತೀಚೆಗೆ ಗೆದ್ದ ಉದಾಹರಣೆಗಳೂ ಇಲ್ಲ. ಬಾಲಿವುಡ್ ಸೇರಿದಂತೆ ಎಲ್ಲ ಕಡೆಗಳಲ್ಲಿಯೂ ಈಕೆ ಕಳೆಗುಂದುತ್ತಿದ್ದಾಳೆ. ಇದೆಲ್ಲದರಿಂದಾಗಿ ತಮನ್ನಾ ಬೇಡಿಕೆ ಜರ್ರನೆ ಇಳಿಕೆ ಕಂಡಿದೆ. ಅದರ ಎಫೆಕ್ಟು ಯಾವ ಪರಿ ಇದೆ ಎಂದರೆ, ಒಂದು ಕಾಲದಲ್ಲಿ ಮುಗಿಬಿದ್ದು ಈಕೆಯ ಕಾಲ್‌ಶೀಟ್‌ಗಾಗಿ ಕಾದು ಕೂತಿದ್ದವರೂ ಈಗ ಬೇರೆಡೆ ಗಮನ ಹರಿಸಿದ್ದಾರೆ. ಹೊಸಾ ಅವಕಾಶಗಳು ಸಿಕ್ಕರೂ ಸಂಭಾವನೆ ಅರ್ಧಕ್ಕರ್ಧ ಕಡಿಮೆ ಮಾಡಿ ಪ್ರಪೋಸಲ್ ಮುಂದಿಡುತ್ತಿರೋದರಿಂದ ತಮನ್ನಾ ನಿಜಕ್ಕೂ ಕಂಗಾಲಾಗಿದ್ದಾಳಂತೆ!

Leave a Reply

Your email address will not be published. Required fields are marked *


CAPTCHA Image
Reload Image