One N Only Exclusive Cine Portal

ಮತ್ತೊಂದು ಕ್ರೈಂ ಥ್ರಿಲ್ಲರ್‍ಗೆ ರೆಡಿಯಾದ್ರು ಬಿಗ್‌ಬಿ ಮತ್ತು ತಾಪ್ಸಿ!

Image result for Amitabh and Tapsee

Image result for Amitabh and Tapsee
ಈ ಹಿಂದೆ `ಪಿಂಕ್ ಚಿತ್ರದ ಮೂಲಕ ತಾಪ್ಸಿ ಪನ್ನು ಮತ್ತು ಅಮಿತಬ್ ಬಚ್ಚನ್ ದೇಶ ವಿದೇಶಗಳಲ್ಲಿ ಪ್ರೇಕ್ಷಕರನ್ನು ಸೆಳೆದುಕೊಂಡ ರೀತಿ ಬಾಲಿವುಡ್ ಇತಿಹಾಸದಲ್ಲಿಯೇ ಬೆರಗಾಗಿ ಉಳಿದುಕೊಂಡಿದೆ. ಈ ಚಿತ್ರದಲ್ಲಿ ಬಿಗ್ ಬಿ ಮತ್ತು ತಾಪ್ಸಿ ಸ್ಪರ್ಧೆಗೆ ಬಿದ್ದಂತೆ ನಟಿಸಿದ್ದರು. ಇದರಿಂದಾಗಿಯೇ ಸೂರ್ಜಿತ್ ನಿರ್ದೇಶನದ ಈ ಚಿತ್ರ ರಾಷ್ಟ್ರ ಪ್ರಶಸ್ತಿಯೂ ಸೇರಿದಂತೆ ನಾನಾ ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು.
ಇಂಥಾ ಯಶಸ್ವೀ ಜೋಡಿಯಾದ ತಾಪ್ಸಿ ಮತ್ತು ಬಿಗ್ ಬಿ ಮತ್ತೊಂದು ಚಿತ್ರದಲ್ಲಿ ಜೊತೆಯಾಗಿ ನಟಿಸಲಿದ್ದಾರಾ? ಈ ಮೂಲಕ ಮತ್ತೊಮ್ಮೆ ವಿಶ್ವವೇ ಕಣ್ಣರಳಿಸಿ ನೋಡುವಂಥಾ ಚಿತ್ರವೊಂದು ಹೊರ ಬರಲಿದೆಯಾ? ಎಂಬೆಲ್ಲ ಪ್ರಶ್ನೆಗಳು ಸಿನಿ ಪ್ರೇಮಿಗಳನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿವೆ.
ಈಗ ಬಾಲಿವುಡ್‌ನಲ್ಲಿ ಹರಡಿಕೊಂಡಿರುವ ರೂಮರುಗಳನ್ನು ಆಧರಿಸಿ ಹೇಳುವುದಾದರೆ ಮತ್ತೆ ಈ ಜೋಡಿ ಮೋಡಿ ಮಾಡಲಿರೋದು ಪಕ್ಕಾ. ಸುಜಯ್ ಘೋಶ್ ನಿರ್ದೇಶನದ ಕ್ರೈಂ ಥ್ರಿಲ್ಲರ್ ಕಥಾನಕ ಹೊಂದಿರುವ ಚಿತ್ರದಲ್ಲಿ ತಾಪ್ಸಿ ಮತ್ತು ಬಿಗ್‌ಬಿ ನಟಿಸಲು ಬಹುತೇಕ ಒಪ್ಪಿಕೊಂಡಿದ್ದಾರಂತೆ. ಒಂದು ಸೂಕ್ಷ್ಮ ತಲ್ಲಣಗಳ ಬೆಚ್ಚಿ ಬೀಳಿಸುವ ಕಥಾ ಹಂದರ ಹೊಂದಿರೋ ಈ ಆಫರಿಗೆ ಬಿಗ್‌ಬಿ ಒಪ್ಪಿಕೊಂಡಿದ್ದಾರಂತೆ. ತಾಪ್ಸಿ ಕೂಡಾ ಪಿಂಕ್ ಚಿತ್ರದ ಭರ್ಜರಿ ಯಶಸ್ಸಿನ ನಂತರ ಮತ್ತೆ ಅಮಿತಾಬ್ ಜೊತೆ ನಟಿಸ ಬೇಕೆಂಬ ಹಂಬಲ ಹೊಂದಿದ್ದಳಂತೆ. ಅದು ಶೀಘ್ರದಲ್ಲಿಯೇ ಕೈಗೂಡುವ ಎಲ್ಲ ಲಕ್ಷಣಗಳೂ ಇವೆ.
ಸದ್ಯ ಅಮಿತಾಬ್ ರಿಶಿ ಕಪೂರ್ ಜೊತೆ ನಟಿಸಿರುವ ಉಮೇಶ್ ಶುಕ್ಲಾ ನಿರ್ದೇಶನದ ೧೦೨ ನಾಟೌಟ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ತಾಪ್ಸಿ ಪನ್ನು ಅನುರಾಗ್ ಕಶ್ಯಪ್ ನಿರ್ದೇಶನದ ಮನ್ಮರ್ಜಿಯಾನ್ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾಳೆ. ಇದೆಲ್ಲ ಮುಗಿದಾದ ನಂತರ ಸದರಿ ಚಿತ್ರ ಟೇಕಾರ್ಫ ಆಗಲಿದೆಯಂತೆ!

Image result for Amitabh and Tapsee

Image result for Amitabh and Tapsee

Related image

 

 

 

 

Leave a Reply

Your email address will not be published. Required fields are marked *


CAPTCHA Image
Reload Image