One N Only Exclusive Cine Portal

ಮನೋ ವೈಜ್ಞಾನಿಕ ಥ್ರಿಲ್ಲರ್ ಮೋಜೊ!

ಹೊಸಾ ಬಗೆಯ ಕಥೆ, ಚೆಂದದ ನಿರೂಪಣೆ ಮತ್ತು ಗುಣಮಟ್ಟವಿದ್ದರೆ ಎಂಥಾ ಪ್ರಯೋಗಗಳನ್ನಾದರೂ ಕನ್ನಡ ಪ್ರೇಕ್ಷಕರು ಗೆಲ್ಲಿಸುತ್ತಾರೆ… ಈಚಿನ ಬೆಳವಣಿಗೆಗಳಲ್ಲಿ ಇಂಥಾದ್ದೊಂದು ಭರವಸೆ ಸಿಕ್ಕಿರೋದರಿಂದಲೇ ಹೊಸಾ ಅಲೆಯ ಚಿತ್ರಗಳು ಒಂದರ ಹಿಂದೊಂದರಂತೆ ತಯಾರಾಗುತ್ತಿವೆ. ಇದೇ ಸಾಲಿನಲ್ಲಿ ಸಜ್ಜಾಗಿರೋ ಮತ್ತೊಂದು ಚಿತ್ರ ‘ಮೋಜೊ!
ಶ್ರೀಶ ಬೆಳಕವಾಡಿ ಅವರ ಚೊಚ್ಚಲ ನಿರ್ದೇಶನದ ಈ ಚಿತ್ರದಲ್ಲಿ ಒಂದು ರೋಚಕವಾದ ಮನೋ ವೈಜ್ಞಾನಿಕ ಕಥಾ ಎಳೆಯನ್ನಿಟ್ಟುಕೊಂಡು ಕಥೆ ಹೆಣೆಯಲಾಗಿದೆ. ಸಿಕ್ಸ್ತ್ ಸೆನ್ಸ್ ಎಂಬುದು ಈ ಚಿತ್ರದ ನಾಯಕನಿಗೆ ತನಗೂ ಒಂದು ಕೊಲೆಗೂ ಸಂಬಂಧ ಇದೆ ಎಂಬುದರ ಸುಳಿವು ಕೊಡುತ್ತದೆ. ಈ ಎಳೆಯ ರೋಚಕ ಜಾಡಿನಲ್ಲಿ ಚಿತ್ರಕಥೆ ಚಲಿಸುತ್ತದೆ.
ಇದಕ್ಕೂ ಮೊದಲು ‘ಕ’ ಎಂಬ ಚಿತ್ರದಲ್ಲಿ ನಟಿಸಿದ್ದ ಹಾಸನ ಮೂಲದ ಮನು ಈ ಚಿತ್ರದ ನಾಯಕ. ಅನುಷಾ ನಾಯಕಿ. ಮಿಕ್ಕಂತೆ ಈ ಚಿತ್ರವನ್ನು ಬಹುತೇಕ ರಂಗಭೂಮಿ ಕಲಾವಿದರನ್ನಿಟ್ಟುಕೊಂಡೇ ಅಣಿಗೊಳಿಸಲಾಗಿದೆ. ಆದ್ದರಿಂದಲೇ ನಾಟಕದ ಹಾಗೆಯೇ ಪಕ್ಕಾ ರಿಹರ್ಸಲ್ ನಡೆಸಿ ಅಚ್ಚುಕಟ್ಟಾಗಿ ಚಿತ್ರೀಕರಣ ಮುಗಿಸಿಕೊಂಡಿರೋ ಚಿತ್ರ ತಂಡ ಟ್ರೈಲರ್ ಬಿಡುಗಡೆಗೊಳಿಸಿದೆ.
ಈ ಹಿಂದೆ ಭಾರೀ ಹವಾ ಸೃಷ್ಟಿಸಿದ್ದ ಲಾಸ್ಟ್ ಬಸ್ ಚಿತ್ರದ ನಿರ್ದೇಶಕರಾಗಿದ್ದ ಜುಗಾರಿ ಅರವಿಂದ್ ಈ ಚಿತ್ರದ ಸಂಗೀತ ನಿರ್ದೇಶನ ಮಾಡಿದ್ದಾರೆ. ಪೋಸ್ಟರಿನಲ್ಲಿಯೇ ಕುತೂಹಲ ಕೆರಳಿಸಿದ್ದ ಈ ಚಿತ್ರ ಇದೀಗ ಟ್ರೈಲರ್ ಮೂಲಕ ಅದನ್ನು ಮತ್ತಷ್ಟು ತೀವ್ರವಾಗಿಸಿಕೊಂಡಿದೆ.

Leave a Reply

Your email address will not be published. Required fields are marked *


CAPTCHA Image
Reload Image