One N Only Exclusive Cine Portal

ಮಯೂರ್ ಪಟೇಲ್ ಅಭಿನಯದ ‘ರಾಜೀವ ಆರಂಭ

ನಾಯಕ ಮಯೂರ್ ಪಟೇಲ್ ಅಭಿನಯದ ‘ರಾಜೀವ‘ ಚಿತ್ರದ ಮುಹೂರ್ತ ಸಮಾರಂಭ ವಿಜಯ ದಶಮಿಯ ಶುಭದಿನದಂದು ಬನ್ನೇರುಘಟ್ಟ ರಸ್ತೆಯಲ್ಲಿರುವ ಏಳುಮಂದ್ಯಮ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಪ್ರಥಮ ಸನ್ನಿವೇಶಕ್ಕೆ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಸತೀಶ್ ರೆಡ್ಡಿ ಅವರು ಆರಂಭ ಫಲಕ ತೋರಿದರು. ಮದನ್ ಪಟೇಲ್ ಅವರು ಕ್ಯಾಮೆರಾ ಚಾಲನೆ ಮಾಡಿದರು.
ಆರ್ ಆರ್ ಕೆ ಪ್ರೊಡಕ್ಷನ್ಸ್ ಲಾಂಛನದಲ್ಲಿ ಬಿ.ಎಂ.ರಮೇಶ್, ರಾಘವೇಂದ್ರ ರೆಡ್ಡಿ ಹಾಗೂ ಕಿರಣ್ ನಿರ್ಮಿಸುತ್ತಿರುವ ಈ ಚಿತ್ರವನ್ನು ಫ಼್ಲೈಯಿಂಗ್ ಕಿಂಗ್ ಮಂಜು ನಿರ್ದೇಶನ ಮಾಡುತ್ತಿದ್ದಾರೆ. ಕೆಲವು ಕಿರುಚಿತ್ರಗಳನ್ನು ನಿರ್ದೇಶಿಸಿ ಅನುಭವವಿರುವ ಮಂಜು ಅವರು ನಿರ್ದೇಶಕ ರಾಘವ್ ಲೋಕಿ ಅವರೊಡನೆ ಕೆಲಸ ಮಾಡಿದ್ದಾರೆ. ಅಕೋಬರ್ ಕೊನೆಯಿಂದ ಇಪ್ಪತ್ತೈದು ದಿನಗಳ ಕಾಲ ಕೋಲಾರ, ಬೆಂಗಳೂರು, ರಾಮನಗರ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ.
ಚಿತ್ರದಲ್ಲಿ ಐದು ಹಾಡುಗಳಿದ್ದು ಅನಿಲ್ ಅವರ ಸಂಗೀತ ನಿರ್ದೇಶನವಿದೆ. ಡಾ||ವಿ.ನಾಗೇಂದ್ರ ಪ್ರಸಾದ್ ಚಿತ್ರದ ಹಾಡುಗಳನ್ನು ರಚಿಸಿದ್ದಾರೆ. ಪೂರ್ಣಚಂದ್ರ ಬೈಕಾಡಿ ಛಾಯಾಗ್ರಹಣ ಈ ಚಿತ್ರಕ್ಕಿದೆ. ನಿರ್ಮಾಪಕ ಬಿ.ಎಂ.ರಮೇಶ್ ಅವರು ಬರೆದಿರುವ ಕಥೆಗೆ ಕೊಡಗಾನಹಳ್ಳಿ ರಾಮಯ್ಯ ಸಂಭಾಷಣೆ ಬರೆದಿದ್ದಾರೆ. ಮಯೂರ್ ಪಟೇಲ್ ನಾಯಕರಾಗಿ ನಟಿಸುತ್ತಿರುವ ಈ ಚಿತ್ರದಲ್ಲಿ ನಿರ್ದೇಶಕ ಮಂಜು ಅವರು ಅಭಿನಯಿಸುತ್ತಿದ್ದಾರೆ.

Leave a Reply

Your email address will not be published. Required fields are marked *


CAPTCHA Image
Reload Image