One N Only Exclusive Cine Portal

ಮಲ್ಯಾ ಸ್ಥಾನಕ್ಕೆ ರಮ್ಯಾ?

ಹೆಂಡದ ದೊರೆ ವಿಜಯ್ ಮಲ್ಯಾ ಈಗಾಗಲೇ ಬ್ಯಾಂಕ್‌ಗಳಿಗೆ ಟೋಪಿ ಹಾಕಿ ವಿದೇಶಕ್ಕೆ ಹಾರಿದ್ದಾರೆ. ಈ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕು ಎಂಬುದು ಇನ್ನೂ ಚರ್ಚೆ ನಡೆಯುವ ಮುನ್ನವೇ ರಮ್ಯಾಗೆ ಒಂದು ಸ್ಥಾನ ನೀಡಬೇಕು ಎಂಬ ಅಣತಿ ಹೈಕಮಾಂಡ್‌ನಿಂದ ಬಂದಿರುವುದರಿಂದ ಮಲ್ಯಾ ಸ್ಥಾನಕ್ಕೆ ರಮ್ಯಾರನ್ನು ಆಯ್ಕೆ ಮಾಡುವುದು ಸೂಕ್ತ. ಇದರಿಂದ ಹೈಕಮಾಂಡ್ ಕೃಪಾಕಟಾಕ್ಷವೂ ಸಿಗುತ್ತೆ. ನಮ್ಮ ಅಭಿಲಾಷೆಯೂ ಈಡೇರುತ್ತೆ ಎಂದು ತೀರ್ಮಾನಿಸಿದ್ದಾರೆ. ಇದಕ್ಕೆ ಕಾರಣ ಇಷ್ಟೇ ಆಯನೂರು ಮಂಜುನಾಥ್ ಹಾಗೂ ವೆಂಕಯ್ಯ ನಾಯ್ಡು ಸ್ಥಾನಗಳೆರಡೂ ಬಿಜೆಪಿಯದು. ಈಗಿರೋದು ಕಾಂಗ್ರೆಸ್‌ನಿಂದ ಆಸ್ಕರ್ ಫರ್ನಾಂಡೀಸ್‌ದು ಮಾತ್ರ. ಆಸ್ಕರ್ ಫರ್ನಾಂಡೀಸ್ ಸೋನಿಯಾಗಾಂಧಿ ಜೊತೆಗೆ ಚೆನ್ನಾಗಿದ್ದಾರೆ. ಜೊತೆಗೆ ಅವರ ಹಿರಿಯ ಕಾಂಗ್ರೆಸಿಗರು. ಹೀಗಾಗಿ ಅವರಿಗೆ ಸ್ಥಾನ ತಪ್ಪಿಸಿ ಬೇರೆಯವರಿಗೆ ಕೊಡಲು ತೀರ್ಮಾನಿಸುವುದು ಅಷ್ಟು ಸುಲಭದ ಮಾತಲ್ಲ. ಹೀಗಾಗಿ ರಮ್ಯಾರನ್ನು ಮಲ್ಯಾ ಸ್ಥಾನಕ್ಕೇ ಆಯ್ಕೆ ಮಾಡುವುದು ಸೂಕ್ತ ಎನ್ನುವ ತೀರ್ಮಾನಕ್ಕೆ ಬಂದಿದ್ದಾರೆ. ಆದರೆ ಇದರಲ್ಲಿ ರಾಜ್ಯ ನಾಯಕರ ತೀರ್ಮಾನ ಏನು ಎಂಬುದನ್ನು ಇದೂವರೆಗೆ ಯಾರೂ ಕೇಳಿಲ್ಲ. ಆದ್ರೆ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಿಲ್ಲ. ಮೊದಲೇ ಕಾಂಗ್ರೆಸ್‌ನ ರಾಜ್ಯ ನಾಯಕರು ರಮ್ಯಾ ಎಂದರೆ ಸಾಕು ಮೂಗು ಮುರೀತಾರೆ. ಅದಕ್ಕೆ ಕಾರಣ ರಮ್ಯಾ ವಯ್ಯಾರ. ಯಾರಿಗೂ ಕ್ಯಾರೆ ಎನ್ನದೆ ವರ್ತಿಸುವ ರಮ್ಯಾಳಿಗೆ ಸಹನೆ ಇಲ್ಲ. ರಾಜಕಾರಣದ ಗಂಧ ಗಾಳಿ ಗೊತ್ತಿಲ್ಲ. ಅಂಥವಳನ್ನು ರಾಜಕಾರಣಕ್ಕೆ ತಂದ ಪುಣ್ಯಾತ್ಮರಿಗೆ ಶರಣುಶರಣಾರ್ತಿ ಎನ್ನುತ್ತಿದ್ದಾರೆ.
ರಮ್ಯಾಳಿಗೆ ರಾಜ್ಯದಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಿಎಂ ಎಸ್.ಎಂ.ಕೃಷ್ಣಾ ಕೃಪಾಕಟಾಕ್ಷವಿದೆ. ಇದರಿಂದಾಗಿ ರಮ್ಯಾ ರಾಜ್ಯದಲ್ಲಿ ಆಡಿದ್ದೇ ಆಟ ಆಗಿದೆ. ಸ್ಥಳೀಯ ರಾಜಕಾರಣಕ್ಕೆ ಎಲ್ಲ ನಾಯಕರು ವಿರೋಧ ವ್ಯಕ್ತಪಡಿಸುತ್ತಿರುವುದರಿಂದ ಡಿ.ಕೆ. ಶಿವಕುಮಾರ್ ಆಗಲಿ, ಕೃಷ್ಣಾ ಆಗಲಿ ರಮ್ಯಾಗೆ ಬಹಿರಂಗವಾಗಿ ಬೆಂಬಲಿಸುತ್ತಿಲ್ಲ. ಇದಕ್ಕೆ ಇಷ್ಟೇ ಈಗಾಗಲೇ ಡಿ.ಕೆ.ಶಿವಕುಮಾರ್‌ಗೆ ಸೆಡ್ಡು ಹೊಡೆದು ನಿಂತಿದ್ದ ತೇಜಸ್ವಿನಿರಮೇಶ್ ನೆನಪಾಗುತ್ತಾರೆ. ಸಾಮಾನ್ಯವಾಗಿ ಸಚಿವ ಡಿ.ಕೆ.ಶಿವಕುಮಾರ್ ಆಗಲಿ ಮಾಜಿ ಸಿಎಂ ಎಸ್.ಎಂ.ಕೃಷ್ಣಾ ಆಗಲಿ ಮಹಿಳಾ ರಾಜಕೀಯ ನಾಯಕರಿಗೆ ಅಷ್ಟಾಗಿ ಬೆಂಬಲಿಸೋದಿಲ್ಲ. ಈಗಾಗಲೇ ಮಾಜಿ ಪ್ರಧಾನಿ ದೇವೇಗೌಡರನ್ನು ಒಮ್ಮೆ ಮಣಿಸಲು ತೇಜಸ್ವಿನಿ ಶ್ರೀರಮೇಶ್ ಎಂಬ ಪ್ರತಿಭೆಯನ್ನು ತಂದು ಕಣಕ್ಕಿಳಿಸಿದರು. ಆಗ ಅದ್ಹೇಗೋ ತೇಜಸ್ವಿನಿ ಲೋಕಸಭೆಗೆ ದೇವೇಗೌಡರ ವಿರುದ್ಧವೇ ಗೆದ್ದು ಬಿಟ್ಟರು. ಆದ್ರೆ ಅದಾದ ನಂತರದ ರಾಜಕೀಯ ಬೆಳವಣಿಗೆಯಿಂದಾಗಿ ತೇಜಸ್ವಿನಿ ಸಚಿವ ಡಿ.ಕೆ.ಶಿವಕುಮಾರ್‌ಗೇನೇ ಸೆಡ್ಡು ಹೊಡೆದು ನಿಂತರು.
ಡಿ.ಕೆ.ಶಿವಕುಮಾರ್ ಅವರಿಗೆ ಬಹಿರಂಗವಾಗಿ ಸೆಡ್ಡು ಹೊಡೆದು ನಿಂತ ತೇಜಸ್ವಿನಿ, ಡಿ.ಕೆ.ಶಿವಕುಮಾರ್ ಅವರನ್ನು ಬಾಯಿಗೆ ಬಂದಂತೆ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದರು. ದೇವೇಗೌಡರಂತ ರಾಜಕೀಯ ಧುರೀಣರನ್ನೇ ಎದುರುಹಾಕಿಕೊಂಡು ಅವರ ಎದುರು ತೇಜಸ್ವಿನಿಯನ್ನ ಗೆಲ್ಲಿಸಿದರೂ ಕೊನೆಗೆ ಅವರೇ ತಮಗೆ ವಿರುದ್ಧವಾಗಿ ನಿಂತಿದ್ದರಿಂದ ಡಿ.ಕೆ.ಶಿವಕುಮಾರ್ ಅವರಿಗೆ ಈ ಹೆಣ್ಣೈಕ್ಳ ಸಹವಾಸವೇ ಬೇಡ ಎಂಬ ನಿರ್ಧಾರಕ್ಕೆ ಬಂದ್ರು. ಹೀಗಾಗಿ ಆನಂತರ ಯಾವ ಹೆಣ್ಣು ಮಕ್ಕಳಿಗೂ ಅವರು ಬೆಂಬಲ ಕೊಡಲೇ ಇಲ್ಲ. ಆದ್ರೆ ಈಗ ರಮ್ಯಾ ವಿಚಾರ ಹಾಗಲ್ಲ. ರಮ್ಯಾ ಎಸ್.ಎಂ.ಕೃಷ್ಣಾ ಅವರ ಸಂಬಂಧಿ. ಹೀಗಾಗಿ ರಾಜಕೀಯ ರಂಗದಲ್ಲಿ ರಮ್ಯಾ ಕಾಂಗ್ರೆಸ್ ಬಿಟ್ಟು ಬೇರೆ ಪಕ್ಷಕ್ಕೆ ಹೋಗುವ ಪ್ರಮೆಯವೇ ಇಲ್ಲ. ಇದರಿಂದಾಗಿಯೇ ರಮ್ಯಾಗೆ ಈ ಇಬ್ಬರೂ ನಾಯಕರು ಬೆಂಬಲ ನೀಡುತ್ತಿದ್ಧಾರೆ. ಆದರೆ ರಮ್ಯಾಳ ವರ್ತನೆಯಿಂದಾಗಿ ರಾಜ್ಯ ನಾಯಕರಿಗೆ ಇರುಸುಮುರುಸು. ಹೀಗಾಗಿ ರಮ್ಯಾಳನ್ನು ಬಹಿರಂಗವಾಗಿ ಯಾರೂ ಸಮರ್ಥಿಸಿಕೊಳ್ಳುತ್ತಿಲ್ಲ. ಬದಲಿಗೆ ನೇರವಾಗಿ ಯುವ ನಾಯಕರ ರಾಹುಲ್ ಸಂಪರ್ಕಕ್ಕೆ ಬಿಟ್ಟಿದ್ದರಿಂದ ರಮ್ಯಾ ರಾಜಕಾರಣವೆಲ್ಲ ದೆಹಲಿಯಲ್ಲೇ ನಡೆಯುತ್ತಿದೆ…

Leave a Reply

Your email address will not be published. Required fields are marked *


CAPTCHA Image
Reload Image