ಮಾಜಿ ಪ್ರೇಯಸಿಗೆ ಬಡಿದ ನಟ ಅರ್ಮಾನ್ ಅರೆಸ್ಟ್!

0
47

ಕಳೆದ ಸೀಜನ್ನಿನಲ್ಲಿ ಹಿಂದಿ ಬಿಗ್‌ಬಾಸ್ ಸ್ಪರ್ಧಿಗಳಾಗಿದ್ದವರ ಖಾಸಗಿ ಬದುಕಿನ ರಾಣಾ ರಂಪಗಳು ಈ ಕ್ಷಣಕ್ಕೂ ಚಾಲ್ತಿಯಲ್ಲಿವೆ. ಹೀಗಿರುವಾಗಲೇ ನಾಲಕ್ಕು ವರ್ಷಗಳ ಹಿಂದೆ ಬಿಗ್ ಬಾಸ್ ಸ್ಪರ್ಧಿಯಾಗಿದ್ದ ನಟ ಅರ್ಮಾನ್ ಮುಂಬೈ ಪೊಲೀಸರಿಂದ ಅರೆಸ್ಟಾಗೋ ಮೂಲಕ ಮತ್ತೆ ಸುದ್ದಿಯಲ್ಲಿದ್ದಾನೆ!

ಒಂದಷ್ಟಪು ಸಿನಿಮಾಗಳಲ್ಲಿ ನಟನಾಗಪಿದ್ದರೂಹೇಳಿಕೊಳ್ಳುವಂಥಾ ಯಾವ ಐಡೆಂಟಿಗಳೂ ಇಲ್ಲದಿದ್ದ ಎಣ್ಣೆ ಗಿರಾಕಿ ಅರ್ಮಾನ್. ಈತ ಆ ಕಾಲದಿಂದಲೂ ಸುದ್ದಿ ಮಾಡುತ್ತಿದ್ದದ್ದು ಅಫೇರುಗಳಿಂದ ಮತ್ತು ಒಂದರ ಹಿಂದೊಂದರಂತೆ ಹುಡುಗೀರನ್ನು ಬದಲಾಯಿಸಿ ಒಂದು ಕಡೆಯಿಂದ ಮಾಜೀ ಪ್ರೇಯಸಿಯರ ಮೇಲೆ ಹಲ್ಲೆ ನಡೆಸುವ ವಿಚಿತ್ರ ನಡವಳಿಕೆಗಳಿಂದಲೇ. ಇಂಥಾ ಸೈಕೋ ಕೈಗೆ ಸಿಕ್ಕು ಪಡ ಬಾರದ ಪಾಡು ಪಟ್ಟ ನೀರು ರಾಂಧವ ಎಂಬ ಮಾಡೆಲ್!

ಈ ನೀರು ರಾಂಧವ ಮತ್ತು ನಟ ಅರ್ಮಾನ್ ಕೊಹ್ಲಿ ನಡುವೆ ಐದಾರು ವರ್ಷಗಳ ಹಿಂದಿನಿಂಣದಲೇ ಅಫೇರಿತ್ತಂತೆ. ಆದರೆ ಈ ಸೈಕೋ ಕಾಟ ತಡೆದುಕೊಳ್ಳಲಾರದೆ ನೀರೂ ರಾಂಧವ ಈಗ್ಗೆ ವರ್ಷಗಳ ಹಿಂದೆ ಈತನಿಂದ ದೂರಾಗಿದ್ದಳು. ಆದರೂ ಕೂಡಾ ಯಾರೂ ಸಿಗದಿದ್ದಾಗ ಈಕೆಯ ಸನಿಹಕ್ಕೆ ಹಾತೊರೆದು ಕಾಟ ಕೊಡುತ್ತಿದ್ದವನು ಮೊನ್ನೆ ಎಣ್ಣೆ ಏಟಲ್ಲಿ ಏಕಾಏಕಿ ಆಕೆ ವಾಸವಿದ್ದ ಅಪಾರ್ಟ್ ಮೆಂಟಿನ ಪ್ಲಾಟಿಗೆ ನುಗ್ಗಿದ್ದಾನೆ. ನೀರೂಳನ್ನು ಮನೆಯಿಡೀ ಅಟ್ಟಾಡಿಸಿ ಮೆಟ್ಟಿಲುಗಳಿಂದ ಕೆಡವಿ ಒದ್ದಿದ್ದಾನೆ. ಸತ್ತೇ ಹೋಗುವ ಭಯದಿಂದ ಹೇಗೋ ತಪ್ಪಿಸಿಕೊಂಡು ಹೊರ ಬಂದ ನೀರೂ ರಾಂಧವ ಸೀದಾ ಪೊಲೀಸರತಿಗೆ ದೂರು ನೀಡಿದ್ದಾಳೆ.

ಸಾಂಟಾಕ್ರುಜ್ ಪೊಲೀಸ್ ಠಾಣಾ ಅಧಿಕಾರಿಗಳು ಕೇಸು ದಾಖಲಿಸಿಕೊಂಡು ಅಖಾಡಕ್ಕಿಳಿಯುವ ಹೊತ್ತಿಗೆಲ್ಲ ಚಾಲಾಕಿ ಅರ್ಮಾನ್ ಪರಾರಿಯಾಗಿದ್ದನಂತೆ. ಫೋನ್ ಇದ್ದರೆ ಆ ಮೂಲಕವೇ ಪೊಲೀಸರು ತನ್ನನ್ನು ಟ್ರೇಸ್ ಮಾಡುತ್ತಾರೆಂದರಿತ ಅರ್ಮಾನ್ ಫೋನನ್ನೂ ಕೂಡಾ ಸ್ವಿಚಾಫ್ ಮಾಡಿದ್ದ. ಆದರೆ ಅದು ಹೇಗೋ ಈತನನ್ನು ಟ್ರೇಸ್ ಮಾಡಿ ಹಿಡಿದಿರೋ ಪೊಲೀಸರು ಸೆಕ್ಷನ್ ೩೨೬ರಡಿಯಲ್ಲಿ ಕೇಸು ದಾಖಲಿಸಿಕೊಂಡು ಜೈಲಿಗೆ ಗದುಮಿದ್ದಾರಂತೆ!

LEAVE A REPLY

Please enter your comment!
Please enter your name here