One N Only Exclusive Cine Portal

ಮಾಸ್ಟರ್‌ಪೀಸ್ ಗೆಲುವು ನಿಜಾನಾ?

ಸುದ್ದಿ ವಾಹಿನಿಗಳು ‘ಮಾಸ್ಟರ್ ಪೀಸ್ ಅಷ್ಟು ಕೋಟಿ ಗಳಿಕೆ ಮಾಡಿದೆ ದಾಖಲೆ ನಿರ್ಮಿಸಿದೆ’ ಎಂದು ಬ್ರೇಕಿಂಗ್ ನ್ಯೂಸ್ ಬಿತ್ತರಿಸುತ್ತಿವೆ. ಟೀವಿ ನೋಡಿ ವರದಿ ಮಾಡುವ ಪತ್ರಿಕೆಗಳೂ ಅದನ್ನೇ ಪುನರುಚ್ಚರಿಸುತ್ತಿವೆ. ಮಾಸ್ಟರ್ ಪೀಸ್ ಸಿನೆಮಾ ನಿಜಕ್ಕೂ ಕಲೆಕ್ಷನ್ ಮಾಡುತ್ತಿದೆಯಾ? ಇಷ್ಟೊಂದು ಭರ್ಜರಿ ಕಲೆಕ್ಷನ್ ಆಗುತ್ತಿದ್ದರೆ ಥಿಯೇಟರುಗಳ ಸಂಖ್ಯೆಯನ್ನೇಕೆ ಕಡಿಮೆ ಮಾಡುತ್ತಿದ್ದಾರೆ?- ಇಂಥವೆಲ್ಲಾ ಪ್ರಶ್ನೆಗಳು ಸಹಜವಾಗೇ ಮೂಡುತ್ತಿವೆ.
ಈ ನಡುವೆ ಮಾಧ್ಯಮ ಮತ್ತು ಮಾಸ್ಟರ್ ಪೀಸ್ ನಡುವೆ ಒಳಗೊಳಗೇ ಮುನಿಸು ಹೊಗೆಯಾಡುತ್ತಿದೆ. ‘ಮಾಸ್ಟರ್ ಪೀಸ್ ಚಿತ್ರದ ಸ್ಟಿಲ್‌ಗಳು ಬೇಕಿದ್ದವರು ನನ್ನ ಬಳಿ ಬಂದು ಸೈನ್ ಮಾಡಿ ತೆಗೆದುಕೊಂಡುಹೋಗಬೇಕು’ ಎಂದು ರಿಲೀಸ್‌ಗೂ ಮುನ್ನ ಯಶ್ ಫತ್ವಾ ಹೊರಡಿಸಿದ್ದು ಅನೇಕರ ಕೆಂಗಣ್ಣಿಗೆ ಕಾರಣವಾಗಿದೆ. ಈ ನಡುವೆ ಯಾರೋ ಕೆಲವು ಪತ್ರಕರ್ತರನ್ನು ಬಳಸಿ ತಮ್ಮ ಸಿನಿಮಾದ ಪಬ್ಲಿಸಿಟಿ ಹ್ಯಾಂಡಲ್ ಮಾಡಿಸುತ್ತಿದ್ದಾರೆ ಎನ್ನುವ ಅಸಮಧಾನ ಕೂಡಾ ವ್ಯಕ್ತವಾಗುತ್ತಿದೆ. ಇದೆಲ್ಲದರ ಸೈಡ್ ಎಫೆಕ್ಟ್ ಎನ್ನುವಂತೆ ಮಾಧ್ಯಮದವರೂ ‘ಮಾಸ್ಟರ್ ಪೀಸ್’ಗೆ ಅಘೋಷಿತ ಅಸಹಕಾರ ತೋರುತ್ತಿದ್ದಾರೆ. ಒಟ್ಟಾರೆ ಇವೆಲ್ಲದರ ನೇರ ಪರಿಣಾಮ ಸಿನಿಮಾ ತಂಡಕ್ಕೆ ತಾಕಿರುವುದಂತೂ ನಿಜ. ಹೀಗಾಗಿ ಖುದ್ದು ಮಾಸ್ಟರ್ ಪೀಸ್ ಚಿತ್ರದ ನಿರ್ದೇಶಕ ಮಂಜು ಮಾಂಡವ್ಯ ಮಾಧ್ಯಮದ ಕೆಲವರಿಗೆ ಫೋನು ಮಾಡಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಈ ನಡುವೆ ಇಂದು ಯಶ್ ಹುಟ್ಟುಹಬ್ಬವಿತ್ತಾದ್ದರಿಂದ ಟೀವಿ ವಾಹಿನಿಯ ವರದಿಗಾರರು ಯಶ್ ಮನೆ ಬಳಿ ಕವರೇಜ್‌ಗೆಂದು ಹೋಗಿದ್ದಾರೆ. ಕೆಲ ವಾಹಿನಿ ವರದಿಗಾರರು ಯಶ್ ಸಂದರ್ಶನ ಬಯಸಿದಾಗ, ಖುದ್ದು ಯಶ್ “ನೀವು ನಾನು ಬಾಡಿಗೆ ಗೃಹದ ವಿಚಾರದಲ್ಲಿ ನೆಗೆಟೀವ್ ಆಗಿ ಸುದ್ದಿ ಮಾಡಿದ್ದೀರ.. ನಿಮಗೆ ಇಂಟರ್ ವ್ಯೂ ಕೊಡಲ್ಲ ಹೋಗಿ” ಎಂಬ ಮಾತುಗಳನ್ನಾಡಿದರಂತೆ. ಇದರಿಂದ ಯಶ್ ಪ್ರಿಂಟ್ ಮೀಡಿಯಾ ಮಾತ್ರವಲ್ಲದೆ, ಎಲೆಕ್ಟ್ರಾನಿಕ್ ಮೀಡಿಯಾದವರನ್ನೂ ವಿರೋಧ ಕಟ್ಟಿಕೊಂಡಂತಾಗಿದೆ…
ಸದ್ಯದ ಮಟ್ಟಿಗೆ ಓಡುವ ಕುದುರೆಯಾಗಿರುವ ಯಶ್ ಗೆ ಇಂಥವೆಲ್ಲಾ ಬೇಕಾ? ಹುಟ್ಟು ಹಬ್ಬದ ಸಂದರ್ಭದಲ್ಲಾದರೂ ಯಶ್ ಒಂಚೂರು ಯೋಚಿಸಲಿ…

Leave a Reply

Your email address will not be published. Required fields are marked *


CAPTCHA Image
Reload Image