One N Only Exclusive Cine Portal

ಮುಂಗಾರುಮಳೆ v/s ಮುಂಗಾರುಮಳೆ

Mungaru-1ಮುಂಗಾರು ಮಳೆ-೨. ಸಾಮಾನ್ಯವಾಗಿ ಒಂದು ಸಿನಿಮಾ ಹಿಟ್ ಆದರೆ ಅದರ ಸೀಕ್ವೆಲ್ ಅನ್ನು ಅದೇ ಸಿನಿಮಾದ ನಿರ್ದೇಶಕರೇ ಕೈಗೆತ್ತಿಕೊಳ್ಳುತ್ತಾರೆ. `ಮುಂಗಾರು ಮಳೆ ನಿರ್ದೇಶಕ ಯೋಗರಾಜ್ ಭಟ್ ಅವರಿಗೆ ಪ್ರಚಂಡ ಯಶಸ್ಸು ತಂದುಕೊಟ್ಟ ಸಿನಿಮಾ. ಮನಸ್ಸು ಮಾಡಿದ್ದರೆ ಭಟ್ಟರೇ ಅದರ ಮುಂದುವರಿದ ಭಾಗವನ್ನು ತೆಗೆದು, ತಮ್ಮದೇ ಸಿನಿಮಾದ ಹೆಸರಿನ ಗೆಲುವಿನ ಕ್ರೆಡಿಟ್ಟನ್ನು ಮುಂದುವರೆಸಬಹುದಿತ್ತು. ಆದರೆ ಶಶಾಂಕ್ ಮುಂಗಾರು ಮಳೆ-೨ ಹೆಸರಿನ ಸಿನಿಮಾ ಆರಂಭಿಸಿದರು. ಮುಂಗಾರು ಮಳೆಯ ಕಾರ್ಯಕಾರಿ ನಿರ್ಮಾಪಕರು ಈ ಸಿನಿಮಾವನ್ನು ನಿರ್ಮಿಸುತ್ತಿರುವ ಕಾರಣಕ್ಕೆ ಮತ್ತದೇ ಹೆಸರನ್ನು ಬಳಸಿಕೊಂಡರೋ ಅಥವಾ ಪ್ರಚಾರಕ್ಕೆ ಅನುಕೂಲವಾಗುತ್ತದೆ ಅನ್ನೋ ಕಾರಣಕ್ಕೆ ಸ್ವತಃ ಶಶಾಂಕ್ `ಮುಂಗಾರು ಮಳೆ’ಗೆ ಕೈ ಒಡ್ಡಿದರೋ ಗೊತ್ತಿಲ್ಲ. ಒಟ್ಟಿನಲ್ಲಿ ಈ ಸಿನಿಮಾ ಈಗ ಬಿಡುಗಡೆ ಹಂತಕ್ಕೆ ತಲುಪಿದೆ. ಸೆನ್ಸಾರ್ ನಿಂದ ಯು ಸರ್ಟಿಫಿಕೇಟ್ ಕೂಡ ಸಿಕ್ಕಿದೆ.
ಮುಂಗಾರು ಮಳೆ ಚಿತ್ರದ ಕುರಿತು ಎರಡು ಬಗೆಯ ಮಾತುಗಳು ಕೇಳಿಬರುತ್ತಿವೆ. ಮೊದಲನೆಯದು `ಈ ಸಿನಿಮಾದ ಕಥೆ ಅತ್ಯದ್ಭುತವಾಗಿದೆ. ಭಟ್ಟರ ಮಳೆಯನ್ನೇ ಮೀರಿಸುವಂತಿದೆ’ ಅಂತಾ. ಇನ್ನೊಂದೆಡೆ `ಓಹೋ ಅನ್ನುವಂಥದ್ದೇನೂ ಇಲ್ಲ. ಅಲ್ಲಿ ಪ್ರೀತಂ ಗುಬ್ಬಿ ಬರೆದಿದ್ದ ಕಥೆಯಲ್ಲಿ ಬೆಂಗಳೂರಿನಲ್ಲಿ ಆರಂಭವಾದ ಕಥೆ ಕೊಡಗಿಗೆ ಟ್ರಾವಲ್ ಮಾಡುತ್ತದೆ. ಇಲ್ಲಿ ರಾಜಸ್ಥಾನದ ಮರಳುಗಾಡಿಗೆ ಪ್ರಯಾಣ ಬೆಳೆಸುತ್ತದೆ. ಇಡೀ ಸಿನಿಮಾವನ್ನು ತೀರಾ ಕಾವ್ಯಾತ್ಮಕವಾಗಿ ನಿರೂಪಿಸಿದ್ದಾರೆ’ ಎನ್ನುವ ಮಾತು ಕೇಳಿಬರುತ್ತಿವೆ. ಎರಡರಲ್ಲಿ ಯಾವುದು ನಿಜವಾದರೂ ಅಂತಿಮವಾಗಿ ಸಿನಿಮಾ ಜನರಿಗೆ ರುಚಿಸಬೇಕು ಅಷ್ಟೇ. ಶಶಾಂಕ್’ಗೆ ಮಧ್ಯಮವರ್ಗದ ಜನರ ನಾಡಿ ಮಿಡಿದ ಏನನ್ನೋದು ಗೊತ್ತು. ಈ ನಿಟ್ಟಿನಲ್ಲಿ ನೋಡಿದರೆ ಜನ ಮೆಚ್ಚುವಂತೆ ಸಿನಿಮಾ ಮೂಡಿಬಂದಿರೋ ಸಾಧ್ಯತೆ ಹೆಚ್ಚು.mungaru
ಒಟ್ಟಾರೆ ನೋಡಿದರೆ ಮುಂಗಾರು ಮಳೆ ಅಂತಾ ಹೆಸರಿಟ್ಟುಕೊಂಡಿರುವ ಕಾರಣಕ್ಕಾದರೂ ಶಶಾಂಕ್ ಈ ಸಿನಿಮಾವನ್ನು ಗೆಲ್ಲಿಸಲೇ ಬೇಕಾದ ಅನಿವಾರ್ಯತೆ ಇದೆ. ಜನ ಭಟ್ಟರ ಮಳೆಗೆ `ಅದ್ಭುತ’ ಅಂತಾ ಈಗಾಗಲೇ ಸರ್ಟಿಫಿಕೇಟ್ ನೀಡಿಬಿಟ್ಟಿರೋದರಿಂದ, ಶಶಾಂಕ್’ರ ಮಳೆ `ಅತ್ಯದ್ಭುತ’ ಅನ್ನಿಸಿಕೊಳ್ಳಲೇಬೇಕಿದೆ. ಒಂದು ವೇಳೆ ಆ ಸಿನಿಮಾದ ರೇಂಜಿಗೆ ಜನಕ್ಕೆ ಇದು ರುಚಿಸಲಿಲ್ಲ ಅಂತಿಟ್ಟುಕೊಳ್ಳಿ `ಮಳೆ ಹೆಸರನ್ನು ಹಾಳು ಮಾಡಿದರು’ ಅನ್ನೋ ಹಣೆಪಟ್ಟಿ ಶಶಾಂಕ್’ಗೆ ತಗುಲಿಕೊಳ್ಳೋದು ಗ್ಯಾರೆಂಟಿ.
ಈ ಎಲ್ಲದರ ನಡುವೆ ಎರಡೂ ಚಿತ್ರದ ಹೀರೋ ಗಣೇಶ್’ಗೆ ಪ್ರಾಮಾಣಿಕವಾದ ಗೆಲುವಿನ ಅವಶ್ಯಕತೆ ತುಸು ಹೆಚ್ಚಾಗೇ ಇದೆ. ಈ ವರೆಗೆ ಗಣೇಶ್ ಸಿನಿಮಾಗಳನ್ನು ಮಾಡಿದ ಅನೇಕರು ಸುಖಾ ಸುಮ್ಮನೇ `ಗೆದ್ದೆವು’ ಅಂತಾ ಬೀಗಿದ್ದಾರೆ. ಅದು ನಿಜಕ್ಕೂ ಗೆಲುವಾ ಅನ್ನೋದು ಸ್ವತಃ ಗಣೇಶ್ ಅವರ ಅಂತರಾತ್ಮಕ್ಕೆ ಗೊತ್ತಿರೋ ವಿಚಾರ. ಹೀಗಾಗಿ ಮುಂಗಾರು ಮಳೆ ಎಂಥ ಯಶಸ್ಸು ತಂದುಕೊಟ್ಟಿತೋ ಅದೇ ಬಗೆಯಲ್ಲಿ ಈ ಮಳೆಯೂ ಗಣೇಶ್ ಕೈಹಿಡಿಯಬೇಕಿದೆ.
ಶಶಾಂಕ್ ಪ್ರತಿಯೊಂದರಲ್ಲಿಯೂ ಪ್ರಚಾರ ಪಡೆಯೋದರಲ್ಲಿ ನಿಸ್ಸೀಮರು. ಚಿತ್ರದ ಒಟ್ಟಾರೆ ತೂಕಕ್ಕಿಂತಲೂ ಒಂದಷ್ಟು ಪಟ್ಟು ಹೈಪು ಕ್ರಿಯೇಟ್ ಮಾಡೋದರಲ್ಲಿಯೂ ಇವರದ್ದು ಟ್ಯಾಲೆಂಟೆಡ್ ನಡಾವಳಿಗಳಿವೆ. ಹಾಗಿರೋದರಿಂದ ಈವತ್ತು ಮುಂಗಾರು ಮಳೆ-೨ ಬಗ್ಗೆ ಹರಡಿರೋ ಪಾಸಿಟಿವ್ ಸುದ್ದಿಗಳ ಬಗೆಗೂ ಪ್ರೇಕ್ಷಕರು ಒಂದು ಅನುಮಾನ ಇಟ್ಟುಕೊಂಡಿರೋದಂತೂ ಸತ್ಯ. ಒಂದು ವೇಳೆ ನಿರೀಕ್ಷೆಯಂತೆಯೇ ಸಿನಿಮಾ ಗೆದ್ದರೆ ಗಣೇಶ್ ಪಾಲಿಗೆ ಮಳೆ ಮರುಜೀವ ನೀಡಿದಂತಾಗುತ್ತದೆ. ಶಶಾಂಕ್ ಹಾರಾಟಕ್ಕೆ ರೆಕ್ಕೆ ಬಲಿತಂತಾಗುತ್ತದೆ!

Leave a Reply

Your email address will not be published. Required fields are marked *


CAPTCHA Image
Reload Image