One N Only Exclusive Cine Portal

ಮೂರನೇ ಮದುವೆ!

ಮೂಲಗಳ ಪ್ರಕಾರ ಇವತ್ತು ಬೆಂಗಳೂರಿನ ಸಬ್ ರಿಜಿಸ್ಟ್ರಾರ್ ಕಛೇರಿಯಲ್ಲಿ ರಘು ಮುಖರ್ಜಿ ಮತ್ತು ಅನು ಪ್ರಭಾಕರ್ ರಿಜಿಸ್ಟರ್ ಮ್ಯಾರೇಜ್ ಆಗುತ್ತಿದ್ದಾರೆ. ಈ ತಾರಾ ಜೋಡಿಯ ಮದುವೆಯನ್ನು ಸ್ವತಃ ಅನು ಪ್ರಭಾಕರ್ ತಾಯಿ ಗಾಯತ್ರಿ ಪ್ರಭಾಕರ್ ನಿಂತು ನಡೆಸಿಕೊಡಲಿದ್ದಾರೆ. ನಂತರ ಕೊಲ್ಲೂರಿಗೆ ತೆರಳಿ ಅಲ್ಲಿ ಸಾಂಪ್ರದಾಯಿಕವಾಗಿ ಮದುವೆಯಾಗಲಿದ್ದಾರಂತೆ.
ಬ್ರೇಕ್ ಅಪ್ ಆಗಿದ್ದೇಕೆ?
೨೦೧೧ರ ಮಾರ್ಚ್ ೧ರಂದು ಕೃಷ್ಣ ಕುಮಾರ್ ಮತ್ತು ಅನುಪ್ರಭಾಕರ್ ವಿವಾಹವಾಗಿತ್ತು. ಜನವರಿ ೨೦೧೪ರ ಹೊತ್ತಿಗೆ ಈ ಜೋಡಿ ಪ್ರತ್ಯೇಕಗೊಂಡಿತ್ತು. ಅನು ಪ್ರಭಾಕರ್ ಪ್ರಕಾರ ‘ಕೃಷ್ಣ ಕುಮಾರ್ ನನ್ನನ್ನು ತೀವ್ರವಾಗಿ ಅನುಮಾನಿಸುತ್ತಾರೆ’ ಎನ್ನುವ ಆರೋಪ ಕೇಳಿಬರುತ್ತಿತ್ತು. ಅದಕ್ಕೆ ಪೂರಕವಾಗಿ ಈ ಇಬ್ಬರ ನಡುವೆ ಹಲವಾರು ಘಟನೆಗಳು ಆಗಾಗ ನಡೆಯುತ್ತಿದ್ದವು.
ಅನು ಪ್ರಭಾಕರ್ ಹೆಸರು ಮೇಲಿಂದ ಮೇಲೆ ಬೇರೆ ಬೇರೆ ನಟ, ನಿರ್ಮಾಪಕ, ಉದ್ಯಮಿಗಳ ಜೊತೆ ತಳುಕುಹಾಕಿಕೊಳ್ಳುತ್ತಿತ್ತು. ಅನು ಪ್ರಭಾಕರ್ ಕಾರಣಕ್ಕಾಗಿ ಕೆಲವು ದೊಡ್ಡ ನಟರ ಖಾಸಗೀ ಬದುಕಿನಲ್ಲೂ ಬಿರುಗಾಳಿಯೆದ್ದ ಬಗ್ಗೆ ದಟ್ಟವಾದ ಗಾಳಿಸುದ್ದಿಗಳಿವೆ.
ಈ ಕುರಿತಾಗಿ ಅನು ಪ್ರಭಾಕರ್ ಮತ್ತು ಕೃಷ್ಣ ಕುಮಾರ್ ನಡುವೆ ಸಾಕಷ್ಟು ಕಿತ್ತಾಟಗಳಾಗುತ್ತಿದ್ದವು. ಅನು ಪ್ರಭಾಕರ್ ‘ಅನುಮಾನಿಸುತ್ತಿದ್ದಾರೆ’ ಎಂದು ಪತಿಯ ಮೇಲೆ ಆರೋಪಿಸುತ್ತಿದ್ದರು. ಕಡೆಗೊಂದು ದಿನ ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕರು, ವಿತರಕರು ಮತ್ತು ಜಯಂತಿ ಅವರ ಹಿತೈಶಿಗಳೆಲ್ಲಾ ಕೂತು ಈ ದಂಪತಿಗೆ ವಿಚ್ಛೇದನದ ಮೊರೆ ಹೋಗುವಂತೆ ಮಾಡಿದ್ದರು.
ಕಡೆಗೆ ಒಂದು ಕೋಟಿ ರುಪಾಯಿಗಳ ಜೀವನಾಂಶ ಕೊಟ್ಟು ಕೃಷ್ಣಕುಮಾರ್ ಅನು ಜೊತೆಗಿನ ಸಂಬಂಧದಿಂದ ಕಳಚಿಕೊಂಡಿದ್ದರು.

ರಘು ಹಿನ್ನೆಲೆ
ಸಿನಿಮಾಗಳಲ್ಲಿ ಲವರ್ ಬಾಯ್ ಆಗಿ ಕಾಣಿಸಿಕೊಳ್ಳುವ, ತೀರಾ ಸಾಫ್ಟ್ ಎನಿಸುವ ಮತ್ತು ಅಷ್ಟೇ ಸರಳವಾಗಿ ನಟಿಸುವ ರಘು ಮುಖರ್ಜಿಯ ಖಾಸಗೀ ಬದುಕು ಅಷ್ಟೇನೂ ತಿಳಿಯಾಗಿಲ್ಲ. ರಘು ಮುಖರ್ಜಿ ಕೂಡಾ ಈ ಹಿಂದೆ ಎರಡು ಮದುವೆಗಳನ್ನಾಗಿದ್ದರು ಅನ್ನೋ ಮಾತಿದೆ.
ಮೊದಲು ಚೆನ್ನೈನಲ್ಲಿ ದೀಪಾ ಎನ್ನುವಾಕೆಯನ್ನು ವರಿಸಿದ್ದ ರಘು ನಂತರ ಭಾವನಾ ಮುಖರ್ಜಿಯನ್ನು ಮದುವೆಯಾಗಿದ್ದರು.
ಚೆನ್ನೈನಲ್ಲಿ ದೀಪಾಗೆ ಭಯಂಕರ ಕಿರುಕುಳ ಕೊಟ್ಟು ಅದು ದೊಡ್ಡ ರಾದ್ದಾಂತವಾಗಿತ್ತು. ೨೦೦೫ರ ಡಿಸೆಂಬರ್ ತಿಂಗಳಲ್ಲಿ ಚೆನ್ನೈನ ಗುಂಡಿ ಪೊಲೀಸರು ಬೆಂಗಳೂರಿಗೆ ಬಂದು ಯಲಹಂಕ ಪೊಲೀಸರ ಸಹಾಯ ಪಡೆದು ರಘು ಮುಖರ್ಜಿಯನ್ನು ಅರೆಸ್ಟ್ ಮಾಡಿ ಕರೆದೊಯ್ದಿದ್ದರು. ಅದೊಂದು ದಿನ ರಘು ಮುಖರ್ಜಿ ಆತ್ಮಹತ್ಯೆಗೂ ಪ್ರಯತ್ನಿಸಿದ್ದರು.
ಇತ್ತೀಚೆಗೆ ರಘು ಮುಖರ್ಜಿ ಕನ್ನಡದ ನಟಿಯೊಂದಿಗೆ ‘ಸಿಂಪಲ್ಲಾಗ್’ ಓಡಾಡಿಕೊಂಡಿದ್ದಾನೆ. ಚೆನ್ನೈನ ಕಾಫಿ ಬಾರ್ ಗಳಲ್ಲಿ ಈ ಇಬ್ಬರೂ ಕಾಣಿಸಿಕೊಳ್ಳುತ್ತಾ ಇರುತ್ತಾರೆ. ಈ ಇಬ್ಬರೂ ಮದುವೆಯಾದರೂ ಆಗಬಹುದು ಅನ್ನೋ ಮಾತಿತ್ತು. ಆದರೆ ಅಂತಿಮವಾಗಿ ಅನು ಪ್ರಭಾಕರ್ ಜೊತೆ ರಘು ಮದುವೆಗೆ ನಿಂತಿರುವುದು ಅಚ್ಛರಿಯ ವಿಚಾರವಾಗಿದೆ.
ಈ ಬಗ್ಗೆ ಇನ್ನಷ್ಟು ಮಾಹಿತಿ ಕೊಡ್ತೀವಿ ಮುಂದಿನ ಪೋಸ್ಟ್ ನಲ್ಲಿ…

Leave a Reply

Your email address will not be published. Required fields are marked *


CAPTCHA Image
Reload Image