One N Only Exclusive Cine Portal

ಮೈಸೂರಲ್ಲಿ ವಿಲನ್!

ಲಂಡನ್ನು ಸೇರಿದಂತೆ ಜಗತ್ತಿನ ಯಾವ್ಯಾವುದೋ ಮೂಲೆಯಲ್ಲಿ ಶೂಟಿಂಗ್ ಮುಗಿಸಿಕೊಂಡುಬಂದಿರುವ `ದಿ ವಿಲನ್’ ಚಿತ್ರತಂಡ ಸದ್ಯ ಮೈಸೂರಿನಲ್ಲಿ ಬೀಡುಬಿಟ್ಟಿದೆ. ಆಮಿ ಜಾಕ್ಸನ್ ಮತ್ತು ಕಿಚ್ಚ ಸುದೀಪ್ ಇಬ್ಬರ ಕಾಂಬಿನೇಷನ್ ದೃಶ್ಯಗಳನ್ನು ನಿರ್ದೇಶಕ ಪ್ರೇಮ್ ಚಿತ್ರೀಕರಿಸಿಕೊಳ್ಳುತ್ತಿದ್ದಾರೆ.
ಶೂಟಿಂಗ್ ಬಿಡುವಿನ ವೇಳೆಯಲ್ಲಿ ಆಮಿ ರಸ್ತೆಯಲ್ಲಿ ಓಡಾಡುತ್ತಿದ್ದ ನಾಯಿಮರಿ, ಮೇಕೆಮರಿಗಳನ್ನೆಲ್ಲಾ ಹಿಡಿದುಕೊಂಡು ತನ್ನದೇ ಅಫಿಷಿಯಲ್ ಆಪ್ನಲ್ಲಿ ಅಪ್ ಲೋಡ್ ಮಾಡಿದ್ದಾಳೆ. ಸಾಮಾನ್ಯವಾಗಿ ಈ ಹಾಲಿವುಡ್ಡು, ಬಾಲಿವುಡ್ಡುಗಳಲ್ಲಿ ನಟಿಸಿದ ಹೀರೋಯಿನ್‌ಗಳು ಮನುಷ್ಯರನ್ನು ಸೋಕಿಸಿಕೊಳ್ಳಲೂ ಮುಜುಗರ ಪಡುತ್ತಾರೆ. ಆದರೆ ಆಮಿ ಪ್ರಾಣಿಗಳೊಂದಿಗೂ ಅನ್ಯೋನ್ಯವಾಗಿ ಬೆರೆಯುತ್ತಾ, ಅವುಗಳನ್ನು ಮುದ್ದಾಡುತ್ತಾ ತಾನು ಮಾನವೀಯತೆ ಇರುವ ನಟಿ ಎಂಬುದನ್ನು ಸಾಬೀತುಮಾಡಿದ್ದಾಳೆ!

Leave a Reply

Your email address will not be published. Required fields are marked *


CAPTCHA Image
Reload Image