One N Only Exclusive Cine Portal

ಮೋಹನ್ ಮನೆಹಾಳನಾಗಿದ್ದೇಕೆ?

ಬಿಗ್‌ಬಾಸ್ ಮನೆಯಲ್ಲಿ ಕಡೇ ತನಕ ಸ್ಪರ್ಧೆ ನೀಡಿ ಹೊರ ಬಂದಿದ್ದವರು ಮೋಹನ್. ಸಾಮಾನ್ಯವಾಗಿ ಬಿಗ್‌ಬಾಸ್ ಮನೆ ಸೇರಿ ಹೊರ ಬಂದವರ ಮುಂದಿನ ನಡೆ ಏನು ಎಂಬುದರ ಬಗೆಗೊಂದು ಕುತೂಹಲ ಇದ್ದೇ ಇರುತ್ತದೆ. ಕಾಮಿಡಿ ನಟನಾಗಿ ಚಿತ್ರರಂಗಕ್ಕೆ ಅಡಿಯಿರಿಸಿ ನಂತರ ಸಂಭಾಷಣೆ, ನಿರ್ದೇಶನ ಸೇರಿದಂತೆ ಹಲವಾರು ಪ್ರಯತ್ನಗಳಲ್ಲಿ ಕಳೆದು ಹೋಗಿದ್ದ ಮೋಹನ್ ಮುಂದೇನು ಮಾಡುತ್ತಾರೆಂಬ ಕ್ಯೂರಿಯಾಸಿಟಿ ಬಹುತೇಕರಲ್ಲಿತ್ತು.
ಅದಕ್ಕೀಗ ಸ್ವತಃ ಮೋಹನ್ ಅವರೇ ಉತ್ತರ ನೀಡಿದ್ದಾರೆ. ಆ ಉತ್ತರವೇ ಮೋಹನ್ ಮತ್ತೆ ಟ್ರ್ಯಾಕಿಗೆ ಬರುತ್ತಿರೋದರ ಸ್ಪಷ್ಟ ಸೂಚನೆಯೂ ಸಿಕ್ಕಿದೆ!
ಮೋಹನ್ ಒಂದು ಪಕ್ಕಾ ಕಾಮಿಡಿ ಚಿತ್ರ ಮಾಡಲು ಸಂಪೂರ್ಣ ತಯಾರಿ ಮಾಡಿಕೊಂಡಿದ್ದಾರೆ. `ಮನೆಗೊಬ್ಬ ಮನೆಹಾಳ ಎಂಬುದು ಅದರ ಟೈಟಲ್ಲು. ಈ ಹಿಂದೆ ಬೇರೆ ಬೇರೆ ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರ ಮಾಡಿಕೊಂಡಿದ್ದ ಮೋಹನ್ ಅವರ ಟ್ಯಾಲೆಂಟು ಗುರುತಿಸಿ ಹೀರೋ ಆಗಲು ಅವಕಾಶ ಮಾಡಿಕೊಟ್ಟಿದ್ದ ನಿರ್ಮಾಪಕ ಬಿ.ಎನ್ ಗಂಗಾಧರ್ ಅವರೇ ಈ ಚಿತ್ರವನ್ನೂ ನಿರ್ಮಾಣ ಮಾಡುತ್ತಿದ್ದಾರೆ.
ಮೋಹನ್ ಆರಂಭದಲ್ಲಿಯೇ ಕಾಮಿಡಿ ನಟನಾಗಿ ಸದ್ದು ಮಾಡಿದ್ದವರು. ಅವರನ್ನು ಅಂಥಾದ್ದೇ ಪಾತ್ರಗಳಲ್ಲಿ ಕಾಣಲು ಜನ ಬಹು ಕಾಲದಿಂದ ತವಕಿಸುತ್ತಲೇ ಇದ್ದರು. ಬಹಳಷ್ಟು ಜನ ಕಾಮಿಡಿ ಚಿತ್ರವೊಂದನ್ನ ಮಾಡಿ ಅಂತ ಮೋಹನ್‌ಗೆ ಪದೇ ಪದೆ ದುಂಬಾಲು ಬೀಳುತ್ತಿದ್ದರಂತೆ. ಇದೀಗ ಅಂಥಾ ಪ್ರೀತಿಯ ಒತ್ತಾಸೆಗೆ ಮಣಿದಿರೋ ಮೋಹನ್ ಪಕ್ಕಾ ಕಾಮಿಡಿ ಸಬ್ಜೆಕ್ಟ್ ಒಂದನ್ನು ಆಯ್ಕೆ ಮಾಡಿಕೊಂಡು ಸ್ಕ್ರಿಪ್ಟ್ ಕಾರ್ಯ ಪೂರ್ಣಗೊಳಿಸಿ ಇತರೇ ಕೆಲಸಗಳಿಗೆ ಚಾಲನೆ ನೀಡಿದ್ದಾರೆ.

I AM BACK WITH A COMEDY GUYS….NEED ALL UR WISHES

Posted by Mohan Shankar on Wednesday, 1 March 2017

Leave a Reply

Your email address will not be published. Required fields are marked *


CAPTCHA Image
Reload Image