One N Only Exclusive Cine Portal

ರಮ್ಯಾ ಆಸ್ಪತ್ರೆಗೆ ದಾಖಲು!

ನಟಿ ಕಂ ರಾಜಕಾರಣಿ ರಮ್ಯಾಗೆ ಹೊಟ್ಟೆ ಕೆಟ್ಟಂತಾಗಿದೆ. ಬೆಳಬೆಳಗ್ಗೇನೇ ಹೊಟ್ಟೆನೋವು, ವಾಮಿಟ್ಟು ಲೂಸ್ ಮೋಷನ್ನು ಶುರುವಾಗಿತ್ತಂತೆ. ಮಧ್ಯಾಹ್ನದ ಹೊತ್ತಿಗೆ ಅದು ವಿಪರೀತವಾದಾಗ ಸೀದಾ ಹೋಗಿ ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಗ ವೈದ್ಯರು ಸಂಪೂರ್ಣ ತಪಾಸಣೆ ಮಾಡಿ ‘ಇದು ಫುಡ್ ಪಾಯ್ಸನ್’ ಅಂತಾ ತಿಳಿಸಿದ್ದಾರೆ. ತೀರಾ ಗಂಭೀರವಾದ ಸಮಸ್ಯೆಯೇನೂ ಇಲ್ಲ ಎಂದು ಕೂಡಾ ಹೇಳಿದ್ದಾರಂತೆ. ಆಸ್ಪತ್ರೆಯವರು ‘ಮಧ್ಯಾಹ್ನ ಬಂದ ರಮ್ಯಾ ಸಂಜೆ ಹೊತ್ತಿಗೆ ಡಿಸ್ಚಾರ್ಜ್ ಆಗಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ ಮೂಲಗಳ ಪ್ರಕಾರ ಇನ್ನೂ ಒಂದು ದಿನಗಳ ಕಾಲ ರಮ್ಯಾ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯಲಿದ್ದಾರಂತೆ. ಒಂದು ವೇಳೆ ರಮ್ಯಾ ವಿಕ್ರಂ ಆಸ್ಪತ್ರೆಯಲ್ಲೇ ಇರುವ ವಿಚಾರ ವಾಹಿನಿಗಳಿಗೆ ಗೊತ್ತಾದರೆ, ಚುನಾವಣೆ ಸುದ್ದಿಯನ್ನು ಸೈಡಿಗೆ ಹಾಕಿ, ರಮ್ಯಾಗೆ ಲೂಜ್ ಮೋಷನ್ ವಿಚಾರವನ್ನು ನೇರಪ್ರಸಾರದಲ್ಲಿ ಹರಿಯಬಿಡುತ್ತಾರೆ ಎನ್ನುವ ಕಾರಣಕ್ಕೆ ಗೌಪ್ಯವಾಗಿರಿಸಿದ್ದಾರಂತೆ.
ಅದೆಲ್ಲ ಏನೇ ಆಗಲಿ, ಸ್ಯಾಂಡಲ್ ವುಡ್ ಮಾಜಿ ಕ್ವೀನ್ ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಹಾರೈಸೋಣ…

Leave a Reply

Your email address will not be published. Required fields are marked *


CAPTCHA Image
Reload Image