One N Only Exclusive Cine Portal

ರಾಮೋಜಿ ಫಿಲಂ ಸಿಟಿಯಲ್ಲಿ ಕುರುಕ್ಷೇತ್ರದ ಫೋಟೋ ಶೂಟ್!

ಕನ್ನಡದ ಮಟ್ಟಿಗೆ ಬಾಹುಬಲಿ ಥರಾನೇ ಕ್ರೇಜ್ ಹುಟ್ಟಿಸೋ ಚಿತ್ರವೊಂದು ಬರಲಿದ್ಯಾ? ಸದ್ಯದ ಬೆಳವಣಿಗೆಗಳು ಹೌದು ಅನ್ನೋ ಸಂದರ್ಭಗಳನ್ನ ಸೃಷ್ಟಿಸಿವೆ. ಅಂದ್ಹಾಗೆ, ಈ ಥರದ್ದೊಂದು ನಿರೀಕ್ಷೆ ಹುಟ್ಟೋದಕ್ಕೆ ಕಾರಣವಾಗಿರೋದು ಮುನಿರತ್ನ ನಿರ್ಮಾಣದಲ್ಲಿ ಮೂಡಿ ಬರ‍್ತಿರೋ ಬಹುತಾರಾಗಣದ ಚಿತ್ರ ಕುರುಕ್ಷೇತ್ರ!
ಕಿಚ್ಚಾ ಸುದೀಪ್, ಯಶ್ ಸೇರ‍್ದಂತೆ ಕನ್ನಡದ ಸ್ಟಾರ್ ಹೀರೋಗಳೆಲ್ಲ ಒಂದಾಗ್ತಾರಂತೆ ಅಂತಾ ಕುತೂಹಲ ಹುಟ್ಟು ಹಾಕಿದ್ದು ಕುರುಕ್ಷೇತ್ರ ಚಿತ್ರ. ಕನ್ನಡದ ಅದ್ಯಾವ್ ಹೀರೋಗಳು ಇರ‍್ತಾರೋ ಗೊತ್ತಿಲ್ಲ: ಆದ್ರೆ ಈ ಚಿತ್ರದಲ್ಲಿ ಧುರ್ಯೋದನನ ಪಾತ್ರಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಿಕ್ಕಿಯಾಗಿದ್ದಾರೆ.
ಈಗ ಹೇಳೋಕೆ ಹೊರಟಿರೋ ಹೊಸಾ ವಿಚಾರ ಅಂದ್ರೆ, ಕುರುಕ್ಷೇತ್ರಕ್ಕಾಗಿ ಹೈದ್ರಾಬಾದಿನ ಪ್ರಸಿದ್ಧ ರಾಮೋಜಿರಾವ್ ಫಿಲಂ ಸಿಟಿಯಲ್ಲಿ ದರ್ಶನ್ ಅವ್ರ ಫೋಟೋ ಶೂಟ್ ನಡ್ದಿದೆ. ಈ ಮೂಲಕ ಈ ಚಿತ್ರಕ್ಕೆ ಅಧಿಕೃತವಾಗಿಯೇ ತಯಾರಿ ಆರಂಭವಾದಂತಾಗಿದೆ. ದರ್ಶನ್ ಅವರು ಎರಡು ದಿನಗಳ ಕಾಲ ಹೈದ್ರಾಬಾದಿನಲ್ಲಿದ್ದು ಸ್ಕ್ರೀನ್ ಟೆಸ್ಟ್, ಕಾಸ್ಟೂಮ್ ಟ್ರಯಲ್ ಸೇರಿದಂತೆ ಕುರುಕ್ಷೇತ್ರಕ್ಕಾಗಿ ಫೋಟೋ ಶೂಟ್ ಮುಗಿಸಿಬಂದಿದ್ದಾರೆ.

ನಾಗಣ್ಣ ನಿರ್ದೇಶನದ ಈ ಚಿತ್ರದಲ್ಲಿ ಸುದೀಪ್ ಸೇರಿದಂತೆ ಒಂದಷ್ಟು ಕನ್ನಡದ ಸ್ಟಾರ್‌ಗಳು ನಟಿಸ್ತಾರಂತೆ ಎಂಬ ಸುದ್ದಿ ಹರಡಿತ್ತಲ್ಲಾ? ಆದ್ರೆ ಈ ಬಗ್ಗೆ ಹೌದು ಸುಳ್ಳು ಎಂಬ ಗೊಂದಲದ ವಾತಾವರಣವೇ ಇದುವರೆಗೂ ಚಾಲ್ತೀಲಿದೆ. ಈ ನಡುವೆ ಚಿತ್ರತಂಡ ತಣ್ಣಗೆ ಬೇರೆಯದ್ದೇ ಪ್ಲಾನಿನಲ್ಲಿ ಬ್ಯುಸಿಯಾಗಿದೆ. ಒಂದು ಮೂಲದ ಪ್ರಕಾರ, ಕನ್ನಡದ ಸ್ಟಾರ್‌ಗಳು ನಟಿಸುತ್ತಾರೆಂದಿದ್ದ ಪಾತ್ರಕ್ಕೆ ದಕ್ಷಿಣದ ಸೂಪರ್ ಸ್ಟಾರ್‌ಗಳನ್ನು ಕರೆತರೋ ಪಯತ್ನಾನೂ ನಡೀತಿದೆ. ಹಾಗಾದ್ರೆ ಈ ಚಿತ್ರ ಬಿಗ್ ಹಿಟ್ಟಾಗೋದ್ರಲ್ಲಿ ಯಾವ್ದೇ ಡೌಟ್ ಇಲ್ಲ.
ಇದೀಗ ಭಾರೀ ಕಲೆಕ್ಷನ್ನು ದಾಖಲಿಸ್ತಿರೋ ಬಾಹುಬಲಿ ಚಿತ್ರ ಚಿತ್ರೀಕರಣವಾಗಿರೋದು ಇದೆ ರಾಮೋಜಿ ಫಿಲಂ ಸಿಟಿಯಲ್ಲಿ. ಅದೇ ಬಾಹುಬಲಿ ಸೆಟ್ಟಿನಲ್ಲೇ ದರ್ಶನ್ ಅವರ ಮೊದಲ ಪೋಟೋ ಶೂಟ್ ಕೂಡಾ ನಡೆದಿದೆ. ಇದು ಹೇಳಿ ಕೇಳಿ ಬಿಗ್ ಬಜೆಟ್ ಚಿತ್ರ. ದೊಡ್ಡ ತಾರಾಗಣಾನೂ ಇದೆ. ಹಿಗಿರೋದ್ರಿಂದ ಕುರುಕ್ಷೇತ್ರವೂ ಬಾಹುಬಲಿಯ ರೀತಿಯಲ್ಲೇ ಹವಾ ಸೃಷ್ಟುಸುತ್ತಾ ಅನ್ನೋ ಸಹಜ ನಿರೀಕ್ಷೆ ಪ್ರೇಕ್ಷಕರಲ್ಲಿದೆ!

Leave a Reply

Your email address will not be published. Required fields are marked *


CAPTCHA Image
Reload Image