One N Only Exclusive Cine Portal

ರಾಮೋಜಿ ಸಿಟಿಯಲ್ಲಿ ಪವಿತ್ರ ದರ್ಶನ!

ಅದು ರಾಮೋಜಿ ಸ್ಟುಡಿಯೋದಲ್ಲಿ ನಡೆಯುತ್ತಿರುವ ‘ಕುರುಕ್ಷೇತ್ರ ಚಿತ್ರದ ಸೆಟ್ ನಲ್ಲಿ ಪವಿತ್ರಾ ಪಾಲ್ಗೊಂಡಿರೋದು… ದರ್ಶನ್ ಮತ್ತೊಬ್ಬ ನಟ ಅರ್ಜುನ್ ಸರ್ಜಾಗೆ ಪವಿತ್ರಾಳನ್ನು ಪರಿಚಯಿಸುತ್ತಿರುವ ಮತ್ತು ಪವಿತ್ರಾ ಸೆಟ್ ನಲ್ಲಿ ಕೈಕಟ್ಟಿ ಕೂತಿರುವ ಫೋಟೋಗಳು ಈಗ ಹೊರಬಿದ್ದಿವೆ.

ದರ್ಶನ್-ಪವಿತ್ರಾ ಗೌಡ – ಪದೇ ಪದೇ ಕೇಳಿಬರುತ್ತಿರುವ ಜೋಡಿ ಹೆಸರಿದು. ನಟಿ ಪವಿತ್ರಾ ಗೌಡ ಮತ್ತು ದರ್ಶನ್ ನಡುವೆ ‘ಏನೋ ಇದೆ… ಏನೇನೋ ಇದೆ… ಒಳಗೊಳಗೇ… ಅಂತಾ ಗಾಂಧಿನಗರದ ಮಂದಿ ರಾಗ ತೆಗೆದು ವರ್ಷವೇ ಕಳೆದುಹೋಯ್ತು. ಅದಾದ ನಂತರ ಮತ್ತೆ ಇವರಿಬ್ಬರ ಹೆಸರು ಕೇಳಿಬಂದಿದ್ದು ಕಳೆದ ವಾರ ಸ್ವತಃ ಪವಿತ್ರಾ ತನ್ನ ಫೇಸ್ ಬುಕ್ ಪ್ರೊಫೈಲಿಗೆ ದರ್ಶನ್ ಜೊತೆ ಇದ್ದ ಖಾಸಗಿ ಫೋಟೋವೊಂದನ್ನು ತಗುಲಿಸಿದಾಗ. ಈಗ ಮತ್ತೆ ಫೋಟೋ ಬಂದಿದೆ. ಅದು ರಾಮೋಜಿ ಸ್ಟುಡಿಯೋದಲ್ಲಿ ನಡೆಯುತ್ತಿರುವ ‘ಕುರುಕ್ಷೇತ್ರ ಚಿತ್ರದ ಸೆಟ್ ನಲ್ಲಿ ಪವಿತ್ರಾ ಪಾಲ್ಗೊಂಡಿರೋದು… ದರ್ಶನ್ ಮತ್ತೊಬ್ಬ ನಟ ಅರ್ಜುನ್ ಸರ್ಜಾಗೆ ಪವಿತ್ರಾಳನ್ನು ಪರಿಚಯಿಸುತ್ತಿರುವ ಮತ್ತು ಪವಿತ್ರಾ ಸೆಟ್ ನಲ್ಲಿ ಕೈಕಟ್ಟಿ ಕೂತಿರುವ ಫೋಟೋಗಳು ಈಗ ಹೊರಬಿದ್ದಿವೆ.
‘ವಾರಾಂತರದಿಂದ ದರ್ಶನ್ ಹೈದರಾಬಾದಿನಲ್ಲಿರೋದರಿಂದ ಪವಿತ್ರಾ ಅವರನ್ನು ಅಲ್ಲಿಗೇ ಕರೆಸಿಕೊಂಡಿದ್ದಾರೆ ಎನ್ನುತ್ತಿದೆ ಮೂಲ. ಅದೇನೇ ಇರಲಿ, ಏಕಾಏಕಿ ಇಬ್ಬರ ಸ್ನೇಹದ ಬಗ್ಗೆ ಸುದ್ದಿ ಹೊರಬಿದ್ದರೆ ಅಭಿಮಾನಿಗಳಿಗೂ ಜೀರ್ಣಿಸಿಕೊಳ್ಳೋದು ಕಷ್ಟ. ಈ ಕಾರಣಕ್ಕೆ ಚೂರು ಚೂರೇ ವಿಚಾರ ಲೀಕ್ ಆಗುತ್ತಿದೆ ಅನ್ನೋ ಮಾತು ಕೂಡಾ ಕೇಳಿಬರುತ್ತಿದೆ…
ಇದನ್ನು ನೋಡಿದವರು ‘ಒಳ್ಳೇದಾಗ್ಲಿ ಅಷ್ಟೇ ಅಂತಾ ಹೇಳುವಂತಾಗಿದೆ…

Leave a Reply

Your email address will not be published. Required fields are marked *


CAPTCHA Image
Reload Image