👇 ನಮ್ಮ ಪುಟ ಲೈಕ್ 👍 ಮಾಡಿ 👇👇
👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆
ಯಾರಿಯಾನ್ ಸೇರಿದಂತೆ ಒಂದಷ್ಟು ಬಾಲಿವುಡ್ ಸಿನಿಮಾಗಳ ಮೂಲಕ ಯುವ ಸಮುದಾಯದ ಹಾಟ್ ಫೇವರಿಟ್ ನಟಿಯಾಗಿ ಗುರುತಿಸಿಕೊಂಡಿರುವಾಕೆ ರಕುಲ್ ಪ್ರೀತ್ ಸಿಂಗ್. ಕ್ಯೂಟ್ ಲುಕ್ಕಿನ ಮೂಲಕವೇ ಚೆಂದದ ಲವ್ಸ್ಟೋರಿಗಳ ಸಾಥ್ನಲ್ಲಿ ಫೇಮಸ್ಸಾಗಿರೋ ಈ ನಟಿಯೀಗ ಬಹುಭಾಷಾ ತಾರೆ. ತೆಲುಗು ತಮಿಳು ಸೇರಿದಂತೆ ನಾನಾ ಭಾಷೆಗಳಲ್ಲಿ ರಕುಲ್ ಮಿಂಚುತ್ತಿದ್ದಾಳೆ.
ಆದರೆ ಅದೇಕೋ ಈಕೆಯ ಬಗ್ಗೆ ಕೆಲ ನೆಗೆಟಿವ್ ಅಂಶಗಳ ಗಾಸಿಪ್ ಹರಡೋ ಮೂಲಕ ಮಾಧ್ಯಮಗಳೇ ರಕುಲ್ಳನ್ನು ತಮಿಳು ಹಾಗೂ ತೆಲುಗು ಚಿತ್ರ ರಂಗದಿಂದ ದೂರ ಮಾಡುತ್ತಿವೆಯಾ ಅಂತೊಂದು ಸಂಶಯ ರಕುಲ್ ಅಭಿಮಾನಿಗಳನ್ನು ಕಾಡಲಾರಂಭಿಸಿದೆ!
ತಮಿಳು ಭಾಷೆಯಲ್ಲಿಯೂ ರಕುಲ್ ಅಗಾಧ ಪ್ರಮಾಣದಲ್ಲಿ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾಳೆ. ಅವರೆಲ್ಲರೂ ಇತ್ತೀಚೆಗೆ ಹರಡಿಕೊಂಡಿದ್ದ ಒಂದು ಸುದ್ದಿಯಿಂದ ಖುಷಿಯಾಗಿದ್ದರು. ಯಾಕೆಂದರೆ ರಖುಲ್ ಸೆಲ್ವ ರಾಘವನ್ ನಿರ್ದೇಶನದ ವಿಜಯ್ ಅವರ ಮುಂದಿನ ಚಿತ್ರ ಹಾಗೂ ಮುರುಗದಾಸ್ ನಿರ್ದೇಶನದ ಸೂರ್ಯ ಅಭಿನಯದ ಮುಂದಿನ ಮತ್ತೊಂದು ಚಿತ್ರದಲ್ಲಿ ನಾಯಕಿಯಾಗಿ ನಟಿಸಲಿದ್ದಾಳೆಂಬ ಸುದ್ದಿ ಹರಿದಾಡಿತ್ತು. ಆದರೆ ಮಾಧ್ಯಮಗಳು ರಖುಲ್ ಈ ಚಿತ್ರಗಳಲ್ಲಿ ನಟಿಸಲು ಸಾಧ್ಯವೇ ಇಲ್ಲ. ಆ ವಕಾಶವನ್ನು ಅವಳೇ ಕಳೆದುಕೊಂಡಿದ್ದಾಳೆ ಅಂತೆಲ್ಲ ಓತಾಪ್ರೋತವಾಗಿ ಸುದ್ದಿ ಮಾಡಿದ್ದವು. ಅದಕ್ಕೆ ಸರಿಯಾಗಿ ವಿಜಯ್ ಸಿನಿಮಾಗೆ ಕೀರ್ತಿ ಸುರೇಶ್ ನಾಯಕಿಯಾಗಿ ಆಯ್ಕೆಯಾದಳಲ್ಲಾ? ಇದರಿಂದ ಮಾಧ್ಯಮಗಳ ಸುದ್ದಿಯೇ ನಿಜವೇನೋ ಅಂತ ರಕುಲ್ ಅಭಿಮಾನಿಗಳು ಆತಂಕಗೊಂಡಿದ್ದರು!
ಆದರೆ ರಕುಲ್ ವಿಜಯ್ ಮತ್ತು ಸೂರ್ಯ ಜೊತೆ ನಾಯಕಿಯಾಗಿ ನಟಿಸಲು ಸಾಧ್ಯವಾಗದಿರೋದಕ್ಕೆ ಅಸಲೀ ಕಾರಣಗಳೇ ಬೇರೆಯದ್ದಿವೆ!
ರಕುಲ್ ಪ್ರೀತ್ ಸಿಂಗ್ಗೆ ಈ ಎರಡೂ ಚಿತ್ರಗಳ ಆಫರ್ ಬಂದಿರೋದು ನಿಜ. ಆದರೆ ಅದಕ್ಕೂ ಮೊದಲೇ ಆಕೆ ಬೇರೆ ಚಿತ್ರಗಳನ್ನು ಒಪ್ಪಿಕೊಂಡಿದ್ದರಿಂದ ಡೇಟ್ಸ್ ಹೊಂದಿಕೆಯಾಗದ ಕಾರಣಗಳಿಂದ ಆಕೆ ಈ ಎರಡೂ ಚಿತ್ರಗಳಿಂದ ದೂರ ಉಳಿದ್ದಾಳೆ.
ಇಂಥಾದ್ದೊಂದು ಸತ್ಯ ಮರೆ ಮಾಚಿ ರಕುಲ್ ಬಗ್ಗೆ ಬೇರೆ ಥರದ ಪ್ರಚಾರದ ಟ್ರೆಂಡ್ ಶುರುವಾದದ್ದು ಮಹೇಶ್ ಬಾಬು ಅಭಿನಯದ ಸ್ಪೈಡರ್ ಚಿತ್ರದ ನಂತರ. ಆ ಚಿತ್ರ ನಿರೀಕ್ಷಿತ ಗೆಲುವು ಕಂಡಿರಲಿಲ್ಲ. ಆದರೆ ತೆಲುಗು ಮಾಧ್ಯಮಗಳು ಈ ಸೋಲಿಗೆ ರಕುಲ್ ಕೂಡಾ ಕಾರಣ ಎಂಬರ್ಥದಲ್ಲಿ ಸುದ್ದಿ ಮಾಡಿದ್ದವು. ಅದೇ ಈಗ ಮುಂದುವರೆದಿದೆ. ಇದು ತೆಲುಗು ಮತ್ತು ತಮಿಳಿನಲ್ಲಿ ರಖುಲ್ ಪ್ರೀತ್ಳ ಯಶಸ್ಸಿನ ಓಟಕ್ಕೆ ಬ್ರೇಕ್ ಹಾಕಿರೋದಂತೂ ನಿಜ!
copying or reproducing the above content in any format without approval is criminal offence and will be prosecuted in Bengaluru court © CINIBUZZ
👇 ನಮ್ಮ ಪುಟ ಲೈಕ್ 👍 ಮಾಡಿ 👇👇
👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆