One N Only Exclusive Cine Portal

‘ಲಕ್ಷ್ಮಣ’ನ ಗಾನಾ ಕೇಳಿದಿರಾ?

ಪ್ರೇಮ ಸ್ಮಾರಕಗಳು ಸಿನಿಲೋಕಕ್ಕೆ ಎವರ್ ಗ್ರೀನ್ ಸ್ಫೂರ್ತಿ. ಪ್ರೇಮ ಸ್ಮಾರಕಗಳಾದ ತಾಜ್ ಮಹಲ್, ಚಾರ್ ಮಿನಾರ್ ಹೆಸರುಗಳಲ್ಲಿ ಚಿತ್ರಗಳನ್ನು ನಿರ್ದೇಶಿಸಿರುವ ಆರ್.ಚಂದ್ರು ಬ್ರಹ್ಮ, ಮೈಲಾರಿ ಚಿತ್ರಗಳು ಸೇರಿದಂತೆ ಅನೇಕ ಕಮರ್ಷಿಯಲ್ ಸಿನಿಮಾಗಳನ್ನು ನಿರ್ದೇಶಿಸಿರುವವರು. ಇದೀಗ ಚಂದ್ರು ಪಕ್ಕ ಕಮರ್ಷಿಯಲ್ ಕಥೆಯೊಂದನ್ನಿಟ್ಟುಕೊಂಡು ಲಕ್ಷ್ಮಣ ಎಂಬ ಅದ್ದೂರಿ ಚಿತ್ರವೊಂದನ್ನು ನಿರ್ದೇಶಿಸುತ್ತಿದ್ದಾರೆ. ಹೆಚ್.ಎಂ. ರೇವಣ್ಣ ಅವರ ಪುತ್ರ ಅನೂಪ್ ಈ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಕ್ರೇಜಿಸ್ಟ್ರಾರ್ ರವಿಚಂದ್ರನ್ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ವಿಭಿನ್ನ ಕಥಾ ಹಂದರ, ಲವಲವಿಕೆಯ ನಿರೂಪಣಾ ಶೈಲಿಯಿಂದಲೇ ಹಿಟ್ ಸಿನಿಮಾ ಕೊಡುತ್ತಾ ಬಂದವರು ಚಂದ್ರು. ಆದುದರಿಂದಲೇ ಅವರದ್ದೊಂದು ಸಿನಿಮಾ ಬರಲಿದೆಯೆಂದರೆ ನಿರೀಕ್ಷೆ ಗರಿಗೆದರುವುದು ಸಹಜ.
ಸದ್ಯ ಲಕ್ಷ್ಮಣ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮವನ್ನು ತೀರಾ ಭಿನ್ನವಾಗಿ ನೆರವೇರಿಸಬೇಕೆಂದು ಚಂದ್ರು ತೀರ್ಮಾನಿಸಿದ್ದಾರೆ. ಈ ಬಾರಿ ಅವರ ಹುಟ್ಟೂರು ಶಿಡ್ಲಘಟ್ಟದಲ್ಲಿ ದೊಡ್ಡ ಸಮಾರಂಭ ನಡೆಸಿ ಅದ್ದೂರಿಯಾಗಿ ಹಾಡುಗಳನ್ನು ಲೋಕಾರ್ಪಣೆ ಮಾಡುವುದು ಚಂದ್ರು ಅವರ ಬಯಕೆ. ಈ ಕಾರಣದಿಂದ ಕಳೆದ ಒಂದೂವರೆ ತಿಂಗಳಿಂದ ಅದಕ್ಕೆ ಬೇಕಿರುವ ಪೂರ್ವ ತಯಾರಿ ನಡೆಸಿದ್ದಾರೆ. ಮೇ೧ ರ ಕಾರ್ಮಿಕ ದಿನಾಚರಣೆಯಂದು ಈ ಕಾರ್ಯಕ್ರಮ ಆಯೋಜಿಸಿದ್ದಾರೆ. ಕನ್ನಡ ಚಿತ್ರರಂಗದ ಅನೇಕ ಗಣ್ಯರು, ನಟ-ನಟಿಯರು ಆ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

Leave a Reply

Your email address will not be published. Required fields are marked *


CAPTCHA Image
Reload Image