Connect with us

cbn

ಲೀಡರ್‌ಗೆ ವೀರ್ ‘ಸಮರ್ಥ’ ಸಂಗೀತದ ಸಾಥ್!

Published

on

ಇನ್ನೊಂದು ದಿನ ಕಳೆದರೆ ಶಿವರಾಜ್ ಕುಮಾರ್ ಅಭಿನಯದ `ಮಾಸ್ ಲೀಡರ್ ಚಿತ್ರ ತೆರೆ ಕಾಣಲಿದೆ. ಆರಂಭದಿಂದ ಈ ವರೆಗೂ ಒಂದಲ್ಲ ಒಂದು ಕಾರಣದಿಂದ ಕೌತುಕದ ಕೇಂದ್ರ ಬಿಂದುವಾಗಿದ್ದ ಈ ಚಿತ್ರ ಸದ್ಯ ಸದ್ದು ಮಾಡುತ್ತಿರೋದು ಸುಂದರವಾದ ಹಾಡುಗಳಿಂದ. ವೀರ್ ಸಮರ್ಥ್ ಅವರ ಸಂಗೀತ ಸಂಯೋಜನೆಯ ಎಲ್ಲ ಹಾಡುಗಳೂ ಸಹ ವಿಶೇಷ ಫೀಲ್ ನೀಡೋ ಮೂಲಕ ಎಲ್ಲರನ್ನು ಆವರಿಸಿಕೊಂಡಿರೋದು ಲೀಡರ್ ಚಿತ್ರದ ಲೇಟೆಸ್ಟ್ ಮೋಡಿ!

ಒಂದು ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಲು ಒಪ್ಪಿಕೊಂಡರೆ ಅದನ್ನು ಸಂಪೂರ್ಣವಾಗಿ ಆವಾಹಿಸಿಕೊಂಡು ಧ್ಯಾನದಂತೆ ಮಗ್ನರಾಗೋದು ವೀರ್ ಸಮರ್ಥ್ ಅವರ ಹೆಚ್ಚುಗಾರಿಕೆ. ಈಗಾಗಲೇ ಕನ್ನಡ ಚಿತ್ರರಂಗದ ಬಹು ಬೇಡಿಕೆಯ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಅವರು ಹತ್ತಾರು ಚಿತ್ರಗಳಿಗೆ ಸುಮಧುರ ಹಾಡುಗಳಿಗೆ ಜೀವ ತುಂಬಿದ್ದಾರೆ. ಆದರೆ ಲೀಡರ್ ಅವರ ಪಾಲಿಗೆ ಮೊದಲ ದೊಡ್ಡ ಮಟ್ಟದ ಮಾಸ್ ಚಿತ್ರ.
ಆದ್ದರಿಂದಲೇ ಈ ಚಿತ್ರಕ್ಕಾಗಿ ವೀರ್ ಸಮರ್ಥ್ ಅಚ್ಚರಿದಾಯಕವಾಗಿಯೇ ಸಮಯ ವಿನಿಯೋಗಿಸಿದ್ದಾರೆ. ಅಷ್ಟಕ್ಕೂ ಲೀಡರ್ ಚಿತ್ರಕ್ಕೆ ಅವರು ಸಂಗೀತ ನಿರ್ದೇಶನ ಮಾಡಲು ಒಪ್ಪಿಕೊಂಡಿದ್ದು ೨೦೧೪ರ ಸೆಪ್ಟಂಬರ್ ತಿಂಗಳಲ್ಲಿ. ಆ ಹೊತ್ತಿಗಿನ್ನೂ ಚಿತ್ರ ಟೈಟಲ್ಲು ನಿಕ್ಕಿ ಮಾಡಿಕೊಳ್ಳೋ ಆರಂಭಿಕ ಹಂತದಲ್ಲಿತ್ತು. ಶಿವಣ್ಣ ಈ ಚಿತ್ರಕ್ಕೆ ಒಪ್ಪಿಕೊಂಡಿದ್ದರೂ ಡೇಟ್ ಇನ್ನೂ ಪಕ್ಕಾ ಆಗಿರಲಿಲ್ಲ. ಆದರೆ ವೀರ್ ಸಮರ್ಥ್ ಅದಾಗಲೇ ತಮ್ಮ ಕೆಲಸಕ್ಕೆ ಚಾಲನೆ ನೀಡಿದ್ದರು!
ಹಾಗೆ ಕೆಲಸ ಆರಂಭಿಸಿದ ವೀರ್ ಸಮರ್ಥ್ ಅವರು ಮೊದಲು ಶುರು ಮಾಡಿದ್ದು ಟೈಟಲ್ ಸಾಂಗ್ ಅನ್ನು. ಆ ನಂತರ ಕೈಗೆತ್ತಿಕೊಂಡಿದ್ದು ಐಟಂ ಸಾಂಗ್. ಈ ಹಾಡು ಅರೇಬಿಕ್ ಶೈಲಿಯಲ್ಲಿರಬೇಕೆಂಬುದು ನಿರ್ದೇಶಕರ ಬೇಡಿಕೆಯಾಗಿತ್ತು. ಚಿತ್ರದ ಕಥೆ ಕೂಡಾ ಅದಕ್ಕೆ ಪೂರಕವಾಗಿರೋದರಿಂದ ಅದನ್ನು ಗೋವಾದಲ್ಲಿ ಶೂಟ್ ಮಾಡೋದಾಗಿಯೂ ನಿಗಧಿ ಮಾಡಲಾಗಿತ್ತು. ಈ ಹಾಡಿನ ಸಾಹಿತ್ಯ, ಕಂಪೋಸಿಂಗ್ ಎಲ್ಲ ಮುಗಿದಾದ ಮೇಲೆ ಇದನ್ನು ಯಾರ ಬಳಿ ಹಾಡಿಸೋದೆಂಬ ಪ್ರಶ್ನೆ ಮೂಡಿತ್ತು. ಕಡೆಗೂ ಅದಕ್ಕಾಗಿ ಸುಪ್ರಿಯಾ ಲೋಹಿತ್ ನಿಕ್ಕಿಯಾಗಿದ್ದರು. ವಿಭಿನ್ನವಾದ ಧ್ವನಿ ಏರಿಳಿತದ ಹಾಡನ್ನು ಸುಪ್ರಿಯಾ ಅದ್ಭುತವಾಗಿ ಹಾಡಿದ್ದರು. ಈ ಹಿಂದೆ ನಿನ್ನ ಧ್ವನಿಗಾಗಿ ನಿನ್ನ ಕರೆಗಾಗಿ ಹಾಡೂ ಸೇರಿದಂತೆ ಹಲವಾರು ಹಾಡು ಹಾಡಿದ್ದರೂ ಸುಪ್ರಿಯಾಗೆ ಭಾರೀ ಹೆಸರು ತಂದು ಕೊಟ್ಟಿದ್ದು ಈ ಹಾಡಿನ ಹೆಚ್ಚುಗಾರಿಕೆ.
ವಿಭಿನ್ನವಾಗಿರೋ ಈ ಹಾಡನ್ನು ಟೆಕ್ನಿಷಿಯನ್‌ಗಳೇ ಮೆಚ್ಚಿಕೊಂಡಿರೋದು ವಿಶೇಷ. ಹೆಚ್ಚಿನ ಸಲ ಭಾರೀ ಫೇಮಸ್ಸಾದ ಹಾಡುಗಳೂ ತಂತ್ರಜ್ಞರ ಪಾಲಿಗೆ ಅತೀ ಸಾಮಾನ್ಯವಾಗಿರುತ್ತದೆ. ಆದ್ದರಿಂದಲೇ ಇವರ ಬಳಿ ಮೆಚ್ಚುಗೆ ಗಳಿಸೋದು ಕಷ್ಟದ ವಿಚಾರ. ಆದರೆ ಆಬಿದಾ ಆಬಿದಾ ಎಂಬ ಈ ಹಾಡು ಸಿನಿಮಾ ತಂತ್ರಜ್ಞರನ್ನು ಸೆಳೆಯುವ ಜೊತೆಗೆ ಬಹು ಬೇಗನೆ ಜನರಿಗೂ ರೀಚ್ ಆಗುವಲ್ಲಿ ಸಫಲವಾಗಿದೆ.
ಇನ್ನುಳಿದಂತೆ ಇತರೇ ಗಾಡುಗಳನ್ನು ಇಂದೂ ನಾಗರಾಜ್ ಸೇರಿದಂತೆ ಅನೇಕರು ಚೆಂದಗೆ ಹಾಡಿದ್ದಾರೆ. ಇಡೀ ಆಲ್ಬಂನ ಸೌಂಡಿಗ್ ಬೇರೆ ರೀತಿಯಲ್ಲಿದೆ ಎಂಬ ಬಗ್ಗೆ ಚರ್ಚೆಗಳೂ ನಡೆಯುತ್ತಿವೆ. ಇಲ್ಲಿನ ಎಲ್ಲ ಹಾಡುಗಳೂ ಕೂಡಾ ಬಾಲಿವುಡ್ ಫೀಲ್ ಕೊಡುತ್ತಿವೆ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಅದೂ ಕೂಡಾ ವೀರ್ ಸಮರ್ಥ ಅವರ ಆಯ್ಕೆಯ ಎಫೆಕ್ಟ್. ಈ ಆಲ್ಬಂಗಾಗಿ ಕೆಲಸ ಮಾಡಿರೋ ತಂತ್ರಜ್ಞರ ಟೀಮೇ ಅಂತಾದ್ದಿದೆ!
ಎ ಆರ್ ರೆಹಮಾನ್ ಅವರ ಬಳಿ ಕೆಲಸ ಮಾಡಿರೋ ತಂತ್ರಜ್ಞರ ದಂಡನ್ನೇ ಈ ಆಲ್ಬಂಗಾಗಿ ವೀರ್ ಸಮರ್ಥ್ ಕನ್ನಡಕ್ಕೆ ಕರೆ ತಂದಿದ್ದಾರೆ. ಸಂಜಯ್ ಲೀಲಾ ಬನ್ಸಾಲಿ ಮುಂತಾದ ಘಟಾನುಘಟಿಗಳ ಜೊತೆ ಕೆಲಸ ಮಾಡಿರೋ ತನೈ ಗಜ್ಜರ್ ಲೀಡರ್ ಚಿತ್ರದ ಐಟಂ ಸಾಂಗ್ ಮಿಕ್ಸಿಂಗ್ ಮಾಡಿದ್ದಾರೆ. ಪ್ರೋಗ್ರಾಮರ್, ಸಾಂಗ್ ಅರೇಂಜರ್ ಆಗಿ ಎ ಆರ್ ರೆಹಮಾನ್ ಟೀಮ್‌ನ ಪ್ರದೀಪ್ ವರ್ಮಾ ಕಾರ್ಯ ನಿರ್ವಹಿಸಿದ್ದಾರೆ. ಭಾಗ್ ಮಿಲ್ಕಾ ಭಾಗ್ ಚಿತ್ರದಲ್ಲಿ ಕೆಲಸ ಮಾಡಿದ್ದ ಪಬ್ಬಿ ಸೌಂಡ್ ಪ್ರೋಗ್ರಾಮಿಂಗ್ ಮಾಡಿದ್ದಾರೆ. ಕವಿರಾಜ್, ವಿ ನಾಗೇಂದ್ರ ಪ್ರಸಾದ್ ಅವರ ಚೆಂದದ ಸಾಹಿತ್ಯ ಮತ್ತಯ ವೀರ್ ಸಮರ್ಥ್ ಅವರ ಸಮರ್ಥ ಸಂಗೀತದ ಜೊತೆಗೆ ಲೀಡರ್ ಹಾಡುಗಳು ಸಖತ್ ಮೋಡಿ ಮಾಡಿವೆ.
ಕನ್ನಡ ಮತ್ತು ತಾಯಿ ಭುವನೇಶ್ವರಿಯ ಬಗ್ಗೆ ಕನ್ನಡದಲ್ಲಿ ಸಾಕಷ್ಟು ಹಾಡುಗಳು ಬಂದಿವೆ. ಆದರೆ ದೇಶಭಕ್ತಿಯ ಹಾಡುಗಳ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ತುಸು ವಿರಳ. ಆದರೆ ಈ ಚಿತ್ರಕ್ಕಾಗಿ ಚೆಂದದ ದೇಶ ಭಕ್ತಿಗೀತೆಯನ್ನೂ ಸಮರ್ಥ ಕಟ್ಟಿಕೊಟ್ಟಿದ್ದಾರೆ. ಒಟ್ಟಾರೆಯಾಗಿ ಲೀಡರ್ ಚಿತ್ರದ ಹಾಡುಗಳು ಎಲ್ಲೆಡೆ ಟಾಕ್ ಕ್ರಿಯೇಟ್ ಮಾಡಿವೆ. ಈ ಮೂಲಕ ಎರಡೂವರೆ ವರ್ಷದ ವೀರ್ ಸಮರ್ಥ್ ಅವರ ಸುದೀರ್ಘ ತಪಸ್ಸು ಸಾರ್ಥಕವಾಗಿದೆ.

cbn

ಜೀ ಕನ್ನಡದಲ್ಲಿ ಹಾರರ್ ಆತ್ಮಬಂಧನ

Published

on

ಕಳೆದ ಹಲವು ವರ್ಷಗಳಿಂದಲೂ ಜೀ ಕನ್ನಡ ವಾಹಿನಿ ಸದಾ ತನ್ನ ಕಾರ್ಯಕ್ರಮ ಕಟ್ಟಿಕೊಡುವಲ್ಲಿ ಹೊಸತನವನ್ನು ಮೈಗೂಡಿಸಿಕೊಳ್ಳುವ ಮೂಲಕ ವೀಕ್ಷಕರಿಗೆ ಹೆಚ್ಚು ಹೆಚ್ಚು ಹತ್ತಿರವಾಗುತ್ತಿದೆ. ಜೋಡಿ ಹಕ್ಕಿ, ಸುಬ್ಬಲಕ್ಷ್ಮಿಸಂಸಾರ, ಕಮಲಿ, ಯಾರೆ ನೀ ಮೋಹಿನಿ, ವಿಷ್ಣು ದಶಾವತಾರ, ಮಹಾದೇವಿ, ನಾಗಿಣಿ, ಪಾರು, ಬ್ರಹ್ಮಗಂಟು ಮೊದಲಾದ ಧಾರಾವಾಹಿಗಳು ಹೊಸ ಇತಿಹಾಸ ಬರೆದಿವೆ. ವಾರಾಂತ್ಯ ಧಾರಾವಾಹಿ ಉಘೇ ಉಘೇ ಮಾದೇಶ್ವರ, ಅಲ್ಲದೆ ಸರಿಗಮಪ, ಡ್ರಾಮಾದಂಥ ರಿಯಾಲಿಟಿ ಷೊಗಳು ಕನ್ನಡಿಗರ ಮನೆಮಾತಾಗಿವೆ.

ಇದೀಗ ಜೀ ಕನ್ನಡ ವಾಹಿನಿಯಲ್ಲಿ ಆತ್ಮಬಂಧನ ಎಂಬ ಮತ್ತೊಂದು ಹಾರರ್ ಧಾರಾವಾಹಿ ಮೂಡಿಬರಲಿದೆ. ಜನನ ಮತ್ತು ಮರಣದ ಸಾಕ್ಷಿ ಆತ್ಮ. ಮರಣಾ ನಂತರವೂ ಆತ್ಮ ತನ್ನ ಪ್ರೀತಿ ಮತ್ತು ದ್ವೇಷವನ್ನು ಬಿಡುವುದಿಲ್ಲ ಎಂಬುದು ಸಾಮಾನ್ಯ ನಂಬಿಕೆ. ಈ ಎಳೆಯನ್ನು ಇಟ್ಟುಕೊಂಡು ತಾಯಿ ಮತ್ತು ಪುಟ್ಟ ಮಗನ ನಡುವಿನ ಬಾಂಧವ್ಯದ ಹಿನ್ನೆಲೆಯಲ್ಲಿ ಆತ್ಮಬಂಧನ ಧಾರಾವಾಹಿಯನ್ನು ನಿರೂಪಿಸಲಾಗುತ್ತಿದೆ. ದುರಂತದಲ್ಲಿ ಮರಣವನ್ನಪ್ಪುವ ಮಗನ ಆತ್ಮ ತನ್ನ ಅಮ್ಮನ ಪ್ರೀತಿಗಾಗಿ ಹಂಬಲಿಸಿ ಬರುವ ಮತ್ತು ಆ ಪ್ರೀತಿಗೆ ಅಡ್ಡ ಬರುವವರನ್ನು ಶಿಕ್ಷಿಸುವ ಕಥಾಹಂದರ ಇದರಲ್ಲಿದೆ. ಈ ಹಿನ್ನೆಲೆಯಲ್ಲಿ ಕೌಟುಂಬಿಕ ಪ್ರೀತಿ-ದ್ವೇಷಗಳು ಹಾಗೂ ಪತಿ-ಪತ್ನಿಯರ ಸಂಬಂಧದ ನಡುವೆ ಏಳುವ ಬಿರುಗಾಳಿ ಹೊಸ ಬಗೆಯಲ್ಲಿ ನಿರೂಪಿತವಾಗಿದೆ. ಈ ಧಾರಾವಾಹಿಯನ್ನು ನಿರ್ದೇಶಕ ಜಿ.ಕೆ. ಸತೀಶ್ ಕೃಷ್ಣನ್ ನಿರ್ದೇಶಿಸುತ್ತಿದ್ದಾರೆ. ದ್ವಿಜ ಕ್ರಿಯೇಷನ್ಸ್ ಅಡಿಯಲ್ಲಿ ಮಹೇಶ್ ಗೌಡ, ಡಾ| ಸುಮಾ ಈ ಧಾರಾವಾಹಿಯನ್ನು ನಿರ್ಮಿಸುತ್ತಿದ್ದಾರೆ. ಇದರ ಕಥಾವಿಸ್ತರಣೆ, ಚಿತ್ರಕತೆಯನ್ನು ಎಸ್. ಸೆಲ್ವಂ ಮತ್ತು ಗಿರೀಶ್ ತಂಡ ನಿರ್ವಹಿಸಿದೆ. ರತ್ನಗಿರಿ ಅವರ ಸಂಭಾಷಣೆ, ವಿನಯ್ ಅವರ ಸಂಗೀತ, ಹರ್ಷಪ್ರಿಯ ಅವರ ಶೀರ್ಷಿಕೆ ಸಾಹಿತ್ಯ ಇದಕ್ಕಿದೆ. ಎದೆಯಲ್ಲಿ ಕಂಪನ ಹುಟ್ಟಿಸುವ ಗ್ರಾಫಿಕ್ಸ್ ಪ್ರತಿ ಸಂಚಿಕೆಯಲ್ಲೂ ವೀಕ್ಷಕರಿಗೆ ಹೊಸ ಅನುಭವ ನೀಡಲಿದೆ.

ಆತ್ಮಬಂಧನ ವೀಕ್ಷಕರಿಗೆ ಮನರಂಜನೆಯ ಹೊಸ ಬಾಗಿಲು ತೆರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ ಜೀ ಕನ್ನಡ ವಾಹಿನಿಯ ಬಿಸ್ನೆಸ್ ಹೆಡ್ ರಾಘವೇಂದ್ರ ಹುಣಸೂರು. ಎಲ್ಲ ವಯೋಮಾನದವರನ್ನೂ ಗಮನದಲ್ಲಿರಿಸಿಕೊಂಡು ಕುಟುಂಬ ಸಮೇತ ನೋಡುವಂತೆ ಈ ಹಾರರ್ ಧಾರಾವಾಹಿ ರೂಪಿಸಿದ್ದೇವೆ ಎನ್ನುತ್ತಾರೆ ನಿರ್ದೇಶಕ ಜಿ.ಕೆ. ಸತೀಶ್ ಕೃಷ್ಣನ್. ತಾರಾಗಣದಲ್ಲಿ ರಜನಿ, ಪ್ರಶಾಂತ್, ಬಾಲನಟ ಆಲಾಪ್, ಶಿವಾನಿ, ಲಕ್ಷ್ಮೀಗೌಡ, ರಾಮಮೂರ್ತಿ, ರಾಜೇಶ್, ನೇತ್ರಾ ಸಿಂಧ್ಯಾ, ಸುನೇತ್ರ ಪಂಡಿತ್ ಮುಂತಾದವರಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಡಿಸೆಂಬರ್ ೧೭ ರಿಂದ ಸೋಮ-ಶುಕ್ರವಾರ ರಾತ್ರಿ ೧೦:೩೦ಕ್ಕೆ ಆತ್ಮಬಂಧನ ಪ್ರಸಾರವಾಗಲಿದೆ.

Continue Reading

cbn

ದರ್ಶನ್ ಮ್ಯಾನೇಜರ್ ಮಹಾದ್ರೋಹಿ ಮಲ್ಲಿ ಎಲ್ಲಿದ್ದಾನೆ ಗೊತ್ತಾ?

Published

on


ನಂಬಿದರೆ ಸರ್ವಸ್ವವನ್ನೂ ಧಾರೆಯೆರೆದುಬಿಡುವ ‘ಯಜಮಾನ’, ತಮ್ಮ ಕೈಕೆಳಗೆ ಕೆಲಸ ಮಾಡುವವರನ್ನೂ ಸ್ನೇಹಿತರಂತೆ ಪೊರೆಯುವ ‘ಒಡೆಯ’ ದರ್ಶನ್ ಅವರಿಗೆ ಮಲ್ಲಿಕಾರ್ಜುನ ಎನ್ನುವ ಮ್ಯಾನೇಜರ್ ಮಹಾದ್ರೋಹವೆಸಗಿ ಗಾಯಬ್ ಆದನಲ್ಲಾ? ಆತ ಎಲ್ಲಿದ್ದಾನೆ ಅನ್ನೋದರ ಸಣ್ಣ ಸುಳಿವೊಂದು ಸಿಕ್ಕಿದೆ!
ಮ್ಯಾನೇಜರ್ ಮಲ್ಲಿ ಅನ್ನೋ ಮಹಾನುಭಾವ ದರ್ಶನ್ ಮತ್ತವರ ತಂಡಕ್ಕೆ ಕೈಕೊಟ್ಟು ಊರುಬಿಟ್ಟಿದ್ದಾನೆ ಅನ್ನೋ ಸುದ್ದಿಯನ್ನು ಮೊಟ್ಟ ಮೊದಲ ಬಾರಿಗೆ ಸ್ಫೋಟಿಸಿದ್ದು ಸಿನಿಬಜ್. ನಾವು ಸುದ್ದಿ ನೀಡಿದ ಮೇಲೂ ಎಷ್ಟೋ ಜನ ‘ಹೌದಾ? ನಿಜಾನಾ? ಅದು ಹೇಗೆ ಸಾಧ್ಯ?’ ಅಂತೆಲ್ಲಾ ಪ್ರಶ್ನಿಸಿದ್ದರು. ಯಾರೆಂದರೆ ಯಾರೂ ನಂಬಲೂ ಸಾಧ್ಯವಾಗದ ನಿಜಾಂಶವನ್ನು ಸಿನಿಬಜ಼್ ಬಯಲಿಗೆಳೆದಿತ್ತು. ನಂತರ ನಮ್ಮ ವರದಿಯ ಸತ್ಯಾಸತ್ಯತೆ ಜಗತ್ತಿಗೂ ಗೊತ್ತಾಯಿತು. ಇರಲಿ, ವಿಷಯ ಅದಲ್ಲ!

ಊರುಬಿಡುವ ಮುಂಚೆ ಪಕ್ಕಾ ಪ್ಲಾನು ಮಾಡಿಕೊಂಡು, ಬೆಂಗಳೂರಿನಲ್ಲಿದ್ದ ಮನೆಯನ್ನು ಖಾಲಿ ಮಾಡಿ ಹೆಂಡತಿ ಮಕ್ಕಳನ್ನೆಲ್ಲಾ ತನ್ನ ಹುಟ್ಟೂರಿಗೆ ಬಿಟ್ಟುಬಂದಿದ್ದ ಈತ ಒಮ್ಮೆಲೇ ಗಾಯಬ್ ಆಗಿದ್ದ. ಮಲ್ಲಿ ಓಡಿಹೋದ, ದರ್ಶನ್ ಮತ್ತವರ ಸುತ್ತಲಿನವರಿಗೆ ವಂಚಿಸಿ ಕಾಲುಕಿತ್ತಿದ್ದಾನೆ ಅನ್ನೋದು ಬಿಟ್ಟರೆ ಬೇರಾವ ಸುಳಿವೂ ಈವರೆಗೆ ಸಿಕ್ಕಿರಲಿಲ್ಲ.

ಏಕಾಏಕಿ ಯಾವ ಸೂಚನೆಯನ್ನೂ ನೀಡದೆ ಊರುಬಿಟ್ಟು ಎಸ್ಕೇಪ್ ಆದ ಮಲ್ಲಿ ಈಗೆಲ್ಲಿದ್ದಾನೆ? ಅನ್ನೋದರ ಸಣ್ಣ ಸುಳಿವೊಂದು ನಮಗೆ ದೊರೆತಿದೆ.  ಅದರ ಪ್ರಕಾರ ಹೇಳೋದಾದರೆ ಮಲ್ಲಿ ಈಗ ಕೆನಡಾದಲ್ಲಿ ಸೆಟಲ್ ಆಗಿ ಅಲ್ಲೊಂದು ಫ್ಲಾಟು ಖರೀದಿಸಿ ಕೂಲಾಗಿ ಜೀವನ ನಡೆಸುತ್ತಿದ್ದಾನಂತೆ. ಅದು ಎಷ್ಟರ ಮಟ್ಟಿಗೆ ನಿಜ ಅನ್ನೋದು ಆಧಾರ ಸಮೇತ ಸಿಕ್ಕನಂತರವಷ್ಟೇ ಪಕ್ಕಾ ಆಗಲಿದೆ. ಇಷ್ಟಕ್ಕೂ ಮಲ್ಲಿ ಯಾಮಾರಿಸಿ ತೆಗೆದುಕೊಂಡು ಹೋದ ಹಣವನ್ನು ಏನು ಮಾಡಿದ್ದಾನೆ? ನಂಬಿದವರನ್ನು ವಂಚಿಸುವ ದರ್ದಾದರೂ ಈತನಿಗೇನಿತ್ತು? ಇವೆಲ್ಲ ವಿವರಗಳು ಇಷ್ಟರಲ್ಲೇ ಬಯಲಾಗಲಿದೆ… ಕಾದು ನೋಡಿ!

 

Continue Reading

cbn

ಇದು ಅಣ್ಣಾವ್ರ ಕಡೆಯ ಸಿನಿಮಾ ಆಗಬೇಕಿತ್ತು!

Published

on

`ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ…’ ಹಾಡಿನ ಮೊದಲ ಸಾಲು ಈಗ ಸಿನಿಮಾ ಆಗಿ ಬಿಡುಗಡೆಗೊಂಡಿದೆ. ಕಾಂತ ಕನ್ನಲ್ಲಿ ನಿರ್ದೇಶನದಲ್ಲಿ ಮೂಡಿಬಂದಿರುವ ಸಿನಿಮಾ ನೋಡಿದ ಎಲ್ಲರನ್ನೂ ಸೆಳೆಯುತ್ತಿದೆ. ಸಿನಿಮಾ ನೋಡಿ ಹೊರಬಂದ ಪ್ರತಿಯೊಬ್ಬರ ಮುಖದಲ್ಲೂ ಮಂದಹಾಸ ಮೂಡಿಸುವ ಸಿನಿಮಾ ಇದು.

ಅಂದಹಾಗೆ ಇದೇ `ಇರುವುದೆಲ್ಲವ ಬಿಟ್ಟು’ ಶೀರ್ಷಿಕೆ ವರನಟ ಡಾ. ರಾಜ್ ಕುಮಾರ್ ಅವರ ನಟನೆಯ ಕೊನೆಯ ಸಿನಿಮಾ ಆಗಬೇಕಿತ್ತು ಅನ್ನೋ ವಿಚಾರವೊಂದು ಹೊರಬಿದ್ದಿದೆ. ಮೊನ್ನೆದಿನ ಈ ಸಿನಿಮಾವನ್ನು ನೋಡಿದ ಕೆ.ಎಂ.ಎಫ್‌ನ ಮಾಜಿ ವ್ಯವಸ್ಥಾಪಕ ನಿರ್ದೇಶಕ ಎ.ಎಸ್. ಪ್ರೇಮನಾಥ್ ಖುದ್ದು ನಿರ್ದೇಶಕರ ಬಳಿ ಈ ವಿಷಯವನ್ನು ಹೇಳಿದರಂತೆ. ಪ್ರೇಮ್‌ನಾಥ್ ಡಾ.ರಾಜ್ ಕುಟುಂಬದ ಜೊತೆ ತೀರಾ ನಿಕಟ ಸಂಪರ್ಕ ಹೊಂದಿರುವವರು. ಹೀಗಾಗಿ ಅಣ್ಣಾವ್ರ ಕುರಿತ ಸಾಕಷ್ಟು ಇಂಟರೆಸ್ಟಿಂಗ್ ವಿಚಾರಗಳು ಪ್ರೇಮನಾಥ್ ಅವರಿಗೆ ಸಹಜವಾಗೇ ಗೊತ್ತಿರುತ್ತದೆ.

ಡಾ. ರಾಜ್‌ಕುಮಾರ್ ನಟಿಸಬೇಕಿದ್ದ ಆ ಸಿನಿಮಾಗೆ ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಕಥೆಯನ್ನೂ ಹೇಳಿದ್ದರಂತೆ. `ಇರುವುದೆಲ್ಲವ ಬಿಟ್ಟು’ ಅನ್ನೋ ಶೀರ್ಷಿಕೆಯನ್ನು ರಾಜಣ್ಣ ಬಹುವಾಗಿ ಇಷ್ಟಪಟ್ಟಿದ್ದರಂತೆ. ಅವರ ಅನಾರೋಗ್ಯ ಮತ್ತಿತರ ಕಾರಣಗಳಿಗೆ ಆ ಸಿನಿಮಾ ಸೆಟ್ಟೇರಿರಲಿಲ್ಲ. ಒಂದು ವೇಳೆ ಅಣ್ಣಾವ್ರು ಈಗಲೂ ಇರುವಂತಾಗಿ, ಅದೇ ಶೀರ್ಷಿಕೆಯೊಂದಿಗೆ ಇಷ್ಟು ಮುದ್ದಾದ ಸಿನಿಮಾ ಮೂಡಿಬಂದಿರೋದನ್ನು ನೋಡಿದ್ದಿದ್ದರೆ ಅದೆಷ್ಟು ಖುಷಿಪಡುತ್ತದ್ದರೋ…?

Continue Reading
Advertisement
Chitralahari 400 x 600
DJ ENTERTAINMENTS 300 x 600

Trending

Copyright © 2018 Cinibuzz